ಶಾಂತಿಯಿಲ್ಲದಿದ್ದರೆ ಸಮೃದ್ಧಿ ಇರಲು ಸಾಧ್ಯವಿಲ್ಲ: ಗುರುದೇವ ಶ್ರೀ ಶ್ರೀ ರವಿ ಶಂಕರ್

ನ್ಯೂಯಾರ್ಕ್‌ನಲ್ಲಿ ನಡೆದ ಸೆಮಾಫೋರ್‌ನ ‘The Next 3 Billion’ ಶೃಂಗಸಭೆಯಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರು ಭಾಗವಹಿಸಿದ್ದು, ತಂತ್ರಜ್ಞಾನ, ಡಿಜಿಟಲ್ ಮೂಲ ಸೌಕರ್ಯ ಮತ್ತು ಆರ್ಥಿಕ ಅವಕಾಶಗಳ ವಿಸ್ತರಣೆಯ ಕುರಿತು ನಡೆದ ಶೃಂಗಸಭೆಯಯಲ್ಲಿ ಮಾತನಾಡಿ ಶಾಂತಿಯಿಲ್ಲದಿದ್ದರೆ ಸಮೃದ್ಧಿ ಇರಲು ಸಾಧ್ಯವಿಲ್ಲ ಎಂದಿದ್ದಾರೆ.

ಶಾಂತಿಯಿಲ್ಲದಿದ್ದರೆ ಸಮೃದ್ಧಿ ಇರಲು ಸಾಧ್ಯವಿಲ್ಲ: ಗುರುದೇವ ಶ್ರೀ ಶ್ರೀ ರವಿ ಶಂಕರ್
Sri Sri Ravi Shankar

Updated on: Sep 23, 2026 | 4:28 PM

ನ್ಯೂಯಾರ್ಕ್, (ಸೆಪ್ಟೆಂಬರ್ 22): ನ್ಯೂಯಾರ್ಕ್‌ನಲ್ಲಿ ನಡೆದ ಸೆಮಾಫೋರ್‌ನ ‘The Next 3 Billion’ ಶೃಂಗಸಭೆಯಲ್ಲಿ ಸೆಮಾಫೋರ್ ಸಹ-ಸಂಸ್ಥಾಪಕ ಹಾಗೂ ಸಿಇಒ ಜಸ್ಟಿನ್ ಬಿ. ಸ್ಮಿತ್ ಅವರೊಂದಿಗೆ ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರು ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಗುರುದೇವ, “ಶಾಂತಿಯೊಂದಿಗೆ ಸಮೃದ್ಧಿ ಬರುತ್ತದೆ. ಶಾಂತಿಯೇ ಇಲ್ಲದಿದ್ದರೆ, ಸಮೃದ್ಧಿಯೂ ಇರಲು ಸಾಧ್ಯವಿಲ್ಲ,” ಎಂದು ಹೇಳಿದರು.

ತಂತ್ರಜ್ಞಾನ, ಡಿಜಿಟಲ್ ಮೂಲ ಸೌಕರ್ಯ ಮತ್ತು ಆರ್ಥಿಕ ಅವಕಾಶಗಳ ವಿಸ್ತರಣೆಯ ಕುರಿತು ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಗುರುದೇವ ಶ್ರೀ ಶ್ರೀ ರವಿ ಶಂಕರ್, ಸಂಪನ್ಮೂಲ ಹೊಂದಿರುವವರು ಮತ್ತು ವಂಚಿತರ ನಡುವಿನ ಅಂತರವನ್ನು ಕಡಿಮೆ ಮಾಡಲು ಎರಡೂ ಕಡೆಯಿಂದ ಪ್ರಯತ್ನ ಅಗತ್ಯ ಎಂದು ಅವರು ಹೇಳಿದರು. ಉದ್ಯಮಶೀಲತೆಯ ಮನೋಭಾವ ಬೆಳೆಸುವ ಮೂಲಕ ಗ್ರಾಮೀಣ ಭಾರತದ 500 ನಿರುದ್ಯೋಗಿ ಯುವಕರಲ್ಲಿ ಬದಲಾವಣೆ ತಂದ ಕಾರ್ಯಕ್ರಮವನ್ನು ಕೀನ್ಯಾ, ಘಾನಾ, ನೈಜೀರಿಯಾ, ಬೋಟ್ಸ್‌ವಾನಾ ಮತ್ತು ದಕ್ಷಿಣ ಆಫ್ರಿಕಾದಲ್ಲೂ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

AI ಕುರಿತು ಮಾತನಾಡಿದ ಗುರುದೇವರು, “ಕೃತಕ ಬುದ್ಧಿಮತ್ತೆ”ಯ ಜೊತೆಗೆ “ಪರಮ ಬುದ್ಧಿಮತ್ತೆ (Absolute Intelligence)”ಯ ಅಗತ್ಯದ ಬಗ್ಗೆ ಹಾಸ್ಯಮಿಶ್ರಿತವಾಗಿ ಹೇಳಿದರು. ಪ್ರಜ್ಞೆಯ ಕ್ಷೇತ್ರದಲ್ಲಿ ವೈಜ್ಞಾನಿಕ ಅಧ್ಯಯನವನ್ನು ಮುಂದುವರಿಸುವ ಉದ್ದೇಶದಿಂದ ಗುರುದೇವರು Institute of Absolute Intelligence ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.

ಇನ್ನು ಇದರಲ್ಲಿ ಕೀನ್ಯಾ ಅಧ್ಯಕ್ಷ ವಿಲಿಯಂ ಸಮೋಯಿ ರುಟೊ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಪ್ರಧಾನಿ ಜುಡಿತ್ ಸುಮಿನ್ವಾ, WTO ಮಹಾನಿರ್ದೇಶಕಿ ಡಾ. ಎನ್‌ಗೋಜಿ ಒಕೊಂಜೊ-ಇವೆಲಾ ಹಾಗೂ IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀವಾ ಸೇರಿದಂತೆ ಜಾಗತಿಕ ನಾಯಕರು ಭಾಗವಹಿಸಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us