ಕೊವಿಡ್ ಸಾಂಕ್ರಾಮಿಕ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಿ: ಹಾಂಗ್ ಕಾಂಗ್​​ಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸಲಹೆ

| Updated By: ರಶ್ಮಿ ಕಲ್ಲಕಟ್ಟ

Updated on: Feb 16, 2022 | 5:18 PM

ಹಾಂಗ್ ಕಾಂಗ್​ನಲ್ಲಿ ಕೊವಿಡ್ ಪ್ರಕರಣಗಳು ಉಲ್ಬಣವಾಗಿದ್ದು ಆಸ್ಪತ್ರೆಗಳಲ್ಲಿ ದಿನಕ್ಕೆ ಸಾವಿರಕ್ಕೂ ಹೆಚ್ಚು ದೃಢಪಡಿಸಿದ ಪ್ರಕರಣಗಳನ್ನು ದಾಖಲಾಗಿವೆ..

ಕೊವಿಡ್ ಸಾಂಕ್ರಾಮಿಕ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಿ:  ಹಾಂಗ್ ಕಾಂಗ್​​ಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸಲಹೆ
ಚೀನಾದ ಅಧ್ಯಕ್ಷ ಷಿ ಜಿನ್ ಪಿಂಗ್ (ಸಂಗ್ರಹ ಚಿತ್ರ)
Follow us on

ಹಾಂಗ್ ಕಾಂಗ್: ಒಮಿಕ್ರಾನ್ ರೂಪಾಂತರಿಯಿಂದ ಉಂಟಾದ ಕೊವಿಡ್ -19 (Covid19)ಉಲ್ಬಣವನ್ನು ನಿಯಂತ್ರಿಸಲು ಹಾಂಗ್ ಕಾಂಗ್ (Hong Kong) “ಎಲ್ಲಾ ಅಗತ್ಯ ಕ್ರಮಗಳನ್ನು” ತೆಗೆದುಕೊಳ್ಳುವಂತೆ ಚೀನಾದ ನಾಯಕ ಷಿ ಜಿನ್‌ಪಿಂಗ್ (Xi Jinping) ಕರೆ ನೀಡಿದ್ದಾರೆ ಎಂದು ಬೀಜಿಂಗ್ ನ ಪತ್ರಿಕೆಗಳು ಬುಧವಾರ ವರದಿ ಮಾಡಿವೆ. ನಾಯಕ ಕ್ಯಾರಿ ಲ್ಯಾಮ್ ಕಠಿಣ ಲಾಕ್ ಡೌನ್ ವಿಧಿಸುವುದಿಲ್ಲ ಎಂದು ಹೇಳಿದ ಒಂದು ದಿನದ ನಂತರ ಜಿನ್ ಪಿಂಗ್ ಈ ಹೇಳಿಕೆ ನೀಡಿದ್ದಾರೆ. ಹಾಂಗ್ ಕಾಂಗ್​ನಲ್ಲಿ ಕೊವಿಡ್ ಪ್ರಕರಣಗಳು ಉಲ್ಬಣವಾಗಿದ್ದು ಆಸ್ಪತ್ರೆಗಳಲ್ಲಿ ದಿನಕ್ಕೆ ಸಾವಿರಕ್ಕೂ ಹೆಚ್ಚು ದೃಢಪಡಿಸಿದ ಪ್ರಕರಣಗಳನ್ನು ದಾಖಲಾಗಿವೆ. ಲ್ಯಾಮ್ ಈ ವಾರ ಕಠಿಣವಾದ ಲಾಕ್‌ಡೌನ್ ಅನ್ನು ಒತ್ತಾಯಿಸಿದ್ದರೂ ಹಾಂಗ್ ಕಾಂಗ್‌ ನಲ್ಲಿ ಈ ರೀತಿಯ ಕಟ್ಟುನಿಟ್ಟಿನ ಕ್ರಮ ಹೇರಲಾಗಿಲ್ಲ. ಬುಧವಾರದ ವೇಳೆಗೆ, ಸ್ಥಳೀಯ ಪತ್ರಿಕೆಗಳಾದ ತಾ ಕುಂಗ್ ಪಾವೊ ಮತ್ತು ವೆನ್ ವೀ ಪೊ ಸಾರ್ವಜನಿಕ ಆರೋಗ್ಯದ “ರಕ್ಷಣೆ ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಪ್ರತಿಯೊಂದು ಕ್ರಮಗಳನ್ನು ಜಾರಿಗೊಳಿಸಲು” ಷಿ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ ಎಂದು ವರದಿ ಮಾಡಿದೆ. ಹಾಂಗ್ ಕಾಂಗ್‌ಗೆ “ಎಲ್ಲಕ್ಕಿಂತ ಹೆಚ್ಚಾಗಿ ಕೊವಿಡ್ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಮತ್ತು ನಿಯಂತ್ರಿಸಲು ಆದ್ಯತೆ ನೀಡುವ ಅಗತ್ಯವಿದೆ” ಎಂದು ಚೀನಾದ ನಾಯಕ ವರದಿ ಮಾಡಿದೆ. ಷಿ ಅವರ ಹೇಳಿಕೆಗಳ ಪ್ರಕಟಣೆಯ ನಂತರ, ಲ್ಯಾಮ್ ಅವರ ಕಾಳಜಿಗೆ “ಕೃತಜ್ಞತೆ” ವ್ಯಕ್ತಪಡಿಸಿದರು. ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಪ್ರಮುಖ ಸೂಚನೆಗೆ ಅನುಸಾರವಾಗಿ, ಹಾಂಗ್ ಕಾಂಗ್ ಜನರ ಜೀವನ ಮತ್ತು ಆರೋಗ್ಯವನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ಮುಖ್ಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ” ಎಂದು ಅವರು ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ವಾಧಿಕಾರಿ ಚೀನಾವು “ಶೂನ್ಯ-ಕೊವಿಡ್” ನೀತಿಗೆ ಅಂಟಿಕೊಳ್ಳುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ ಇಡೀ ನಗರಗಳ ವಾರಗಳ ಅವಧಿಯ ಲಾಕ್‌ಡೌನ್‌ಗಳು, ವ್ಯಾಪಕ ಸಂಪರ್ಕ-ಪತ್ತೆಹಚ್ಚುವಿಕೆ ಮತ್ತು ಪರೀಕ್ಷೆ ನಡೆಸಿ ರೋಗ ಪತ್ತೆ ಹಚ್ಚುತ್ತದೆ.

ಆದರೆ ವಿಶ್ವದ ಅತ್ಯಂತ ದಟ್ಟವಾಗಿ ತುಂಬಿದ ನಗರಗಳಲ್ಲಿ ಒಂದಾದ ಹಾಂಗ್ ಕಾಂಗ್, ಈಗ ಎದುರಿಸುತ್ತಿರುವ ಒಮಿಕ್ರಾನ್ ಸೋಂಕುಗಳ ಸಂಪೂರ್ಣ ಸಂಖ್ಯೆಯನ್ನು ಗಮನಿಸಿದರೆ, ಸಂಪೂರ್ಣ ಲಾಕ್‌ಡೌನ್‌ನೊಂದಿಗೆ ಸಹ ಶೂನ್ಯ-ಕೊವಿಡ್‌ಗೆ ಹಿಂತಿರುಗಬಹುದೇ ಎಂಬುದು ಅಸ್ಪಷ್ಟವಾಗಿದೆ.

ಅತ್ಯಂತ ಸಾಂಕ್ರಾಮಿಕ ಒಮಿಕ್ರಾನ್ ರೂಪಾಂತರದ ಹೊರಹೊಮ್ಮುವಿಕೆಯು 2022 ರಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವಂತೆ ಮಾಡಿತು. ಸಾಮಾಜಿಕ ದೂರ ಕ್ರಮಗಳನ್ನು ಹೆಚ್ಚಿಸುವುದು, ಶಾಲೆಗಳನ್ನು ಮುಚ್ಚುವುದು ಮತ್ತು ರಾತ್ರಿಯ ರೆಸ್ಟೋರೆಂಟ್ ಊಟಗಳಿಗೆ ಅನುಮತಿಸದೇ ಇರುವುದು, ವೈರಸ್ ಪತ್ತೆಯಾದ ಜೀವಿಗಳನ್ನು ಕೊಲ್ಲುವುದು ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ವಾರಾಂತ್ಯದ ಸಭೆಯಲ್ಲಿ ಲ್ಯಾಮ್‌ನ ಆಡಳಿತವು ಈಗಾಗಲೇ ಚೀನಾದ ಅಧಿಕಾರಿಗಳಿಂದ ಸಹಾಯವನ್ನು ಕೋರಿತ್ತು. ಹಾಂಗ್ ಕಾಂಗ್ ಬುಧವಾರ 4,280 ದೃಢಪಡಿಸಿದ ಪ್ರಕರಣಗಳನ್ನು ವರದಿ ಮಾಡಿದೆ, ಇದು ಹೊಸ ದಾಖಲೆಯಾಗಿದೆ.

ಇದನ್ನೂ ಓದಿ: Russia-Ukraine Crisis: ಉಕ್ರೇನ್ ಗಡಿಯಲ್ಲಿ ರಷ್ಯನ್ ಮಿಲಿಟರಿ ಕಾರ್ಯಾಚರಣೆ ಅಂತ್ಯ; ಸೇನಾ ಪಡೆಯನ್ನು ಹಿಂಪಡೆದ ರಷ್ಯಾ