ಇಸ್ಲಾಂ ಪವಿತ್ರ ಕುರಾನ್ಗೆ ಅಪಮಾನ ಮಾಡಿದ್ದಾರೆ ಎನ್ನುವ ಆರೋಪದ ಮೇರೆಗೆ ಪ್ರಸಿದ್ಧ ಅಫ್ಘಾನ್ ಫ್ಯಾಷನ್ ಮಾಡೆಲ್ ಹಾಗೂ ಅವರ ಮೂರು ಸಹೋದ್ಯೋಗಿಗಳನ್ನು ತಾಲಿಬಾನ್ ಬಂಧನಕ್ಕೊಳಪಡಿಸಿದೆ. ಯೂಟ್ಯೂಬ್ ಕ್ಲಿಪ್ಗಳು, ಫ್ಯಾಶನ್ ಶೋಗಳು ಹಾಗೂ ಮಾಡೆಲಿಂಗ್ ಈವೆಂಟ್ಗಳಿಗೆ ಅಜ್ಮಲ್ ಹಖಕಿ ಪ್ರಸಿದ್ಧರಾಗಿದ್ದಾರೆ, ಇದೀಗ ಅವರನ್ನು ತಾಲಿಬಾನ್ ಬಂಧಿಸಿದೆ.
ಬಂಧನದ ಕುರಿತು ತಾಲಿಬಾನ್ ಗುಪ್ತಚರ ಸಂಸ್ಥೆ ಟ್ವಿಟ್ಟರ್ನಲ್ಲಿ ವಿವಿಯೋ ಪೋಸ್ಟ್ ಒಂದನ್ನು ಮಾಡಿದೆ.
ಬಂಧನದ ನಂತರ ತಾಲಿಬಾನ್ ಹಖಕಿ ಮತ್ತು ಅವರ ಸಹೋದ್ಯೋಗಿಗಳ ವಿಡಿಯೋವನ್ನು ಬಿಡುಗಡೆ ಮಾಡಿದೆ. ಜೈಲು ಸಮವಸ್ತ್ರದಲ್ಲಿ ನಿಂತು ತಾಲಿಬಾನ್ ಸರ್ಕಾರ ಮತ್ತು ಧಾರ್ಮಿಕ ವಿದ್ವಾಂಸರಲ್ಲಿ ಹಖಕಿ ಕ್ಷಮೆ ಯಾಚಿಸಿದ್ದಾರೆ.
ಆ ಟ್ವೀಟ್ ಧಾರಿ ಭಾಷೆಯಲ್ಲಿದ್ದು, ಕುರಾನ್ ಪದ್ಯಗಳನ್ನು ಅಥವಾ ಪ್ರವಾದಿ ಮುಹಮ್ಮದ್ ಅವರ ಮಾತುಗಳನ್ನು ಅವಮಾನಿಸಲು ಯಾರಿಗೂ ಅವಕಾಶವಿಲ್ಲ ಎಂದು ಆ ವಿಡಿಯೋ ಪೋಸ್ಟ್ನಲ್ಲಿ ತಾಲಿಬಾನ್ ಬರೆದಿದೆ.ಬುಧವಾರ ಅಮ್ನೆಸ್ಟಿ ಇಂಟರ್ನ್ಯಾಷನಲ್ ಹಖಿಕಿ ಹಾಗೂ ಅವರ ಸಹೋದ್ಯೋಗಿಗಳನ್ನು ಬಿಡುಗಡೆ ಮಾಡುವಂತೆ ತಾಲಿಬಾನಿಗೆ ಒತ್ತಡ ಹೇರಿದ್ದರು.
ಅಮ್ನೆಸ್ಟಿ ಹೇಳಿಕೆ ಪ್ರಕಾರ, ತಾಲಿಬಾನ್ ಅಫ್ಘಾನಿಸ್ತಾನವನ್ನು ಯಾವಾಗ ತಮ್ಮ ಹಿಡಿತಕ್ಕೆ ತೆಗೆದುಕೊಂಡಿತ್ತೋ ಆಗಿನಿಂದ ಅಫ್ಘಾನಿಸ್ತಾನದಲ್ಲಿ ಕಿರುಕುಳ, ಹಿಂಸೆ ಹೆಚ್ಚಾಗಿದೆ. ಬಂಧನಕ್ಕೊಳಗಾದ ಕುಟುಂಬದವರೊಂದಿಗೆ ಮಾತುಕತೆ ಇನ್ನೂ ಸಾಧ್ಯವಾಗಿಲ್ಲ.
ಇತರೆ ವಿದೇಶಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ