Terror Attack: ಪಾಕಿಸ್ತಾನದ ಕರಾಚಿ ಪೊಲೀಸ್ ಕಚೇರಿ ಮೇಲೆ ಉಗ್ರರ ದಾಳಿ; ಎಂಟು ಸಾವು

Pakistan Taliban Terrorists Seize Police HQ: ಕರಾಚಿ ನಗರದ ಆಯಕಟ್ಟಿನ ಪ್ರದೇಶದಲ್ಲಿನ ಪೊಲೀಸ್ ಠಾಣೆಯೊಂದರ ಮೇಲೆ ತಾಲಿಬಾನ್ ಉಗ್ರರು ಶುಕ್ರವಾರ ಸಂಜೆ ನಡೆಸಿದ ದಾಳಿ ಘಟನೆಯಲ್ಲಿ ಮೂವರು ಉಗ್ರರು, ಓರ್ವ ನಾಗರಿಕ ಸೇರಿದಂತೆ ಎಂಟು ಮಂದಿ ಹತ್ಯೆಯಾಗಿದ್ದಾರೆ.

Terror Attack: ಪಾಕಿಸ್ತಾನದ ಕರಾಚಿ ಪೊಲೀಸ್ ಕಚೇರಿ ಮೇಲೆ ಉಗ್ರರ ದಾಳಿ; ಎಂಟು ಸಾವು
ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರ ದಾಳಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2023 | 10:38 AM

ಕರಾಚಿ: ಪಾಕಿಸ್ತಾನದ ಕರಾಚಿ ನಗರದ ಪೊಲೀಸ್ ಕಚೇರಿಯೊಂದರ (Karachi Police HQ) ಮೇಲೆ ಉಗ್ರರ ದಾಳಿಯಾಗಿದ್ದು (Terror Attack) ಒಟ್ಟು ಎಂಟು ಮಂದಿ ಸತ್ತಿರುವುದು ವರದಿಯಾಗಿದೆ. ರೈಫಲ್, ಹ್ಯಾಂಡ್ ಗ್ರಿನೇಡ್ ಹಿಡಿದು ಪೊಲೀಸ್ ಠಾಣೆಗೆ ಉಗ್ರರ ತಂಡವೊಂದು ಶುಕ್ರವಾರ ಸಂಜೆ 7ಕ್ಕೆ ನುಗ್ಗಿತ್ತು. ಈ ವೇಳೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಮೂವರು ಭಯೋತ್ಪಾದಕರನ್ನು ಹತ್ಯೆಗೈದಿವೆ. ಉಗ್ರರ ತಂಡದಲ್ಲಿ ಮೂವರು ಇದ್ದರೆಂದು ತಿಳಿದುಬಂದಿದೆ. ಅಲ್ಲಿಗೆ, ದಾಳಿ ಮಾಡಿದ ಎಲ್ಲಾ ಉಗ್ರರೂ ಹತ್ಯೆಯಾದಂತಾಗಿದೆ.

ದುರದೃಷ್ಟಕ್ಕೆ, ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಾಲ್ಕು ಗಂಟೆಗಳ ಕಾಲ ನಡೆದ ಕಾಳಗದಲ್ಲಿ ಓರ್ವ ನಾಗರಿಕ, ಇಬ್ಬರು ಪೊಲೀಸರು ಮತ್ತು ಇಬ್ಬರು ಆರ್ಮಿ ರೇಂಜರ್​ಗಳೂ ಬಲಿಯಾಗಿದ್ದಾರೆ. ರಾತ್ರಿ 11:15ರವರೆಗೂ ನಡೆದ ಈ ಕಾಳಗದಲ್ಲಿ ಇತರ 19 ಮಂದಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಪಾಕಿಸ್ತಾನದ ತಾಲಿಬಾನ್ ಸಂಘಟನೆ (Tehreek-e-Taliban Pakistan) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ತಮ್ಮ ಸಂಘಟನೆಯು ಈ ದಾಳಿ ಎಸಗಿದೆ ಎಂದು ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯ ವಕ್ತಾರ ಮೊಹಮ್ಮದ್ ಖೊರಸಾನಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿPakistan Fuel Price Hike: ಆರ್ಥಿಕ ದಿವಾಳಿಯತ್ತ ಪಾಕಿಸ್ತಾನ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ, ತೀರಾ ಸಂಕಷ್ಟದಲ್ಲಿ ಜನತೆ

ಶುಕ್ರವಾರ ಸಂಜೆ ಮೂವರು ಉಗ್ರರು ಟೊಯೊಟಾ ಕೊರೊಲ್ಲಾ ಕಾರಿನಲ್ಲಿ ಕರಾಚಿ ಪೊಲೀಸ್ ಠಾಣೆಗೆ ನುಗ್ಗಿದರು. ಒಬ್ಬ ದಾಳಿಕೋರ ಈ ಕಟಟಡದ ನಾಲ್ಕನೇ ಮಹಡಿಗೆ ಹೋಗಿ ಆತ್ಮಹತ್ಯಾ ಬಾಂಬ್ ಸ್ಫೋಟ ಮಾಡಿಕೊಂಡನು. ಇತರ ಇಬ್ಬರು ಉಗ್ರರನ್ನು ಪೊಲೀಸರು ಹತ್ಯೆಗೈದರು ಕರಾಚಿಯ ಡಿಐಜಿಯೊಬ್ಬರು ಹೇಳಿದ್ದಾರೆ.

ಸೂಕ್ಷ್ಮ ಪ್ರದೇಶದಲ್ಲಿ ದಾಳಿ ಸ್ಥಳ

ಕರಾಚಿ ಪೊಲೀಸ್ ಕಚೇರಿ ಕರಾಚಿಯ ಪ್ರಮುಖ ಸ್ಥಳವಾದ ಶಾರೀ ಫೈಸಲ್ ಎಂಬಲ್ಲಿದೆ. ಪಾಕಿಸ್ತಾನ ವಾಯುಪಡೆಯ ಫೈಸಲ್ ವಾಯುನೆಲೆ ಸೇರಿದಂತೆ ಹಲವು ಪ್ರಮುಖ ಸ್ಥಳಗಳು ಇದೇ ಪ್ರದೇಶದಲ್ಲಿವೆ. ಹೀಗಾಗಿ, ತಾಲಿಬಾನ್ ಉಗ್ರರ ದಾಳಿ ಘಟನೆ ಬಹಳ ಗಂಭೀರ ಸ್ವರೂಪದ್ದೆಂದು ಪರಿಗಣಿಸಲಾಗಿದೆ. ಭಾರತದಲ್ಲಿ 2009ರಲ್ಲಿ ನಡೆದ ಮುಂಬೈ ದಾಳಿ ಘಟನೆಗೆ ಕೆಲವರು ಹೋಲಿಕೆ ಕೂಡ ಮಾಡಿದ್ದಾರೆ.

ಹಿಂದಿನ ಕರ್ಮಕಾಂಡ

ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರ ದಾಳಿ ಇದೇ ಹೊಸದಲ್ಲ. ಅನೇಕ ಬಾರಿ ಪೊಲೀಸ್ ಠಾಣೆಗಳ ಮೇಲೆ ತಾಲಿಬಾನಿಗಳು ದಾಳಿ ಮಾಡಿದ್ದಿದೆ. 2014ರಲ್ಲಿ ಪೇಶಾವರದ ಮಿಲಿಟರಿ ಶಾಲೆಯೊಂದರ ಮೇಲೆ ತಾಲಿಬಾನಿಗಳು ದಾಳಿ ಮಾಡಿದ ಘಟನೆ ಇಡೀ ವಿಶ್ವದ ಗಮನ ಸೆಳೆದಿತ್ತು. 132 ಶಾಲಾ ಮಕ್ಕಳು ಸೇರಿದಂತೆ 149 ಮಂದಿ ಈ ಪೈಶಾಚಿಕ ದಾಳಿಯಲ್ಲಿ ಬಲಿಯಾಗಿದ್ದರು.

ಇದನ್ನೂ ಓದಿ: Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಬಂಧನದ ತೂಗುಗತ್ತಿ

ಅದೇ 2014ರಲ್ಲಿ ಕರಾಚಿಯ ಜಿನ್ನಾ ಇಂಟರ್ನ್ಯಾಷನಲ್ ಏರ್​ಪೊರ್ಟ್​ಗೆ ನುಗ್ಗಿದ ತಾಲಿಬಾನ್ ಉಗ್ರರು 14 ಮಂದಿಯ ಸಾವಿಗೆ ಕಾರಣರಾಗಿದ್ದರು. 2011ರಲ್ಲಿ ಕರಾಚಿಯಯ ನೌಕಾ ನೆಲೆ ಪಿಎನ್​ಎಸ್ ಮೆಹ್ರಾನ್ ಅನ್ನು ಸುತ್ತುವರಿದಿದ್ದ ಭಯೋತ್ಪಾದಕರು ಭದ್ರತಾ ಪಡೆಗೆ ಸೇರಿದ 10 ಮಂದಿ ಸಿಬ್ಬಂದಿಯನ್ನು ಬಲಿಪಡೆದುಕೊಂಡಿದ್ದರು.

ವಿಪರ್ಯಾಸ ಎಂದರೆ ಭಾರತಕ್ಕೆ ಉಗ್ರರನ್ನು ನುಸುಳಿಬಿಡಲು ನಿರಂತರ ಪ್ರಯತ್ನ ಮಾಡುತ್ತಲೇ ಇರುವ ಪಾಕಿಸ್ತಾನ ಕೂಡ ಉಗ್ರರಿಂದ ಬಹಳ ಬಾಧಿತವಾಗಿರುವ ದೇಶ. ಅಲ್ಲಿ ಸಾಕಷ್ಟು ಬಾರಿ ಭಯೋತ್ಪಾದಕರ ದಾಳಿಗಳಾಗುತ್ತಿರುತ್ತವೆ. ಬಲೂಚಿಸ್ತಾನ್ ಪ್ರಾಂತ್ಯದ ಉಗ್ರರು, ತೆಹ್ರೀಕ್ ಎ ತಾಲಿಬಾನ್ ಉಗ್ರರಿಂದ ಅತಿಹೆಚ್ಚು ದಾಳಿಗಳಾಗುತ್ತವೆ. ಜೊತೆಗೆ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿ ಸುನ್ನಿ ಮುಸ್ಲಿಮರ ಉಗ್ರರು ದಾಳಿ ಮಾಡುವುದೂ ಸಾಮಾನ್ಯವಾಗಿ ಹೋಗಿದೆ.

ಪಾಕಿಸ್ತಾನ ಸಂಬಂಧಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ