Afghan University: ಅಫ್ಘಾನ್ ಹೆಣ್ಣುಮಕ್ಕಳಿಗೆ ವಿಶ್ವವಿದ್ಯಾಲಯಗಳಿಗೆ ಪ್ರವೇಶ ನಿಷೇಧ ಏಕೆ? ತಾಲಿಬಾನ್ ಕೊಟ್ಟ ಕಾರಣ ಕೇಳ್ರಪ್ಪಾ..

| Updated By: ನಯನಾ ರಾಜೀವ್

Updated on: Dec 23, 2022 | 7:35 AM

ಅಫ್ಘಾನ್ ಹೆಣ್ಣುಮಕ್ಕಳು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಮಾಡದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು, ಇದೀಗ ಈ ನಡೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

Afghan University: ಅಫ್ಘಾನ್ ಹೆಣ್ಣುಮಕ್ಕಳಿಗೆ ವಿಶ್ವವಿದ್ಯಾಲಯಗಳಿಗೆ ಪ್ರವೇಶ ನಿಷೇಧ ಏಕೆ? ತಾಲಿಬಾನ್ ಕೊಟ್ಟ ಕಾರಣ ಕೇಳ್ರಪ್ಪಾ..
University
Follow us on

ಅಫ್ಘಾನ್ ಹೆಣ್ಣುಮಕ್ಕಳು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಮಾಡದಂತೆ ತಾಲಿಬಾನ್(Taliban) ನಿರ್ಬಂಧ ಹೇರಿದ್ದು, ಇದೀಗ ಈ ನಡೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.ಆದರೆ ಇದೂ ಒಂದು ಕಾರಣನಾ ಎಂದೆನಿಸುತ್ತೆ, ವಿದ್ಯಾರ್ಥಿನಿಯರು ಸರಿಯಾಗಿ ಡ್ರೆಸ್​ಕೋಡ್ ಸೇರಿದಂತೆ ಸೂಚನೆಗಳನ್ನು ಅನುಸರಿಸದ ಕಾರಣ ಅಫ್ಘಾನ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದೆ.

ಆಗಸ್ಟ್​ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರದ ಗದ್ದುಗೆ ಏರಿತ್ತು, ಅದಾದ ಬಳಿಕ ಒಂದಲ್ಲಾ ಒಂದು ನಿಯಮವನ್ನು ಜಾರಿಗೆ ತರುತ್ತಲೇ ಇದೆ.ಮನೆಯಿಂದ ವಿಶ್ವವಿದ್ಯಾನಿಲಯಗಳಿಗೆ ಬರುತ್ತಿದ್ದ ಹುಡುಗಿಯರು ಹಿಜಾಬ್‌ನ ಸೂಚನೆಗಳನ್ನು ಕೂಡ ಅನುಸರಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕೆಲವು ವಿಜ್ಞಾನ ವಿಷಯಗಳು ಹೆಣ್ಣುಮಕ್ಕಳಿಗೆ ಸೂಕ್ತವಲ್ಲ ಎಂದು ನದೀಮ್ ಹೇಳಿದ್ದಾರೆ. ಎಂಜಿನಿಯರಿಂಗ್, ಕೃಷಿ ಮತ್ತು ಇತರ ಕೆಲವು ಕೋರ್ಸ್‌ಗಳು ವಿದ್ಯಾರ್ಥಿನಿಯರ ಘನತೆ ಮತ್ತು ಗೌರವಕ್ಕೆ ಮತ್ತು ಅಫ್ಘಾನ್ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದರು.

ಮಹಿಳಾ ವಿದ್ಯಾರ್ಥಿಗಳಿಗೆ ಮಾತ್ರ ಕಲಿಸುತ್ತಿದ್ದ ಮದರಸಾಗಳನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ನದೀಮ್ ಹೇಳಿದರು. ಪುರುಷ ಸಂಬಂಧಿ ಇಲ್ಲದೆ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ ಮತ್ತು ಸಾರ್ವಜನಿಕವಾಗಿ ಉದ್ಯಾನವನಗಳು, ಜಾತ್ರೆಗಳು, ಜಿಮ್‌ಗಳು ಮತ್ತು ಸಾರ್ವಜನಿಕ ಸ್ನಾನಗೃಹಗಳಿಗೆ ಹೋಗುವುದನ್ನು ನಿಷೇಧಿಸಲಾಗಿದೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ಸಾವಿರಾರು ವಿದ್ಯಾರ್ಥಿನಿಯರು ದೇಶಾದ್ಯಂತ ನಡೆದ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಿದ್ದರು. ಈ ಪೈಕಿ ಹಲವರು ಬೋಧನೆ ಮತ್ತು ವೈದ್ಯಕೀಯ ಶಿಕ್ಷಣದ ಆಯ್ಕೆಯ ನಿರೀಕ್ಷೆಯಲ್ಲಿದ್ದರು. ಈ ವಿವಿ ಎಂಟ್ರೆನ್ಸ್ ಎಕ್ಸಾಂ ನಡೆದು ಮೂರೇ ತಿಂಗಳಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಾಲಿಬಾನ್ ಸರ್ಕಾರವು ಬ್ರೇಕ್ ಹಾಕಿದೆ.

ತಾಲಿಬಾನ್‌ಗಳು ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ, ವಿಶ್ವವಿದ್ಯಾನಿಲಯಗಳಲ್ಲಿ ಲಿಂಗ ಪ್ರತ್ಯೇಕಿತ ತರಗತಿಗಳು ಮತ್ತು ಪ್ರವೇಶ ದ್ವಾರಗಳು ಸೇರಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲಾಯಿತು, ಆದರೆ ಮಹಿಳೆಯರಿಗೆ ಮಹಿಳಾ ಪ್ರಾಧ್ಯಾಪಕರು ಅಥವಾ ವೃದ್ಧರು ಮಾತ್ರ ಕಲಿಸಲು ಅನುಮತಿ ನೀಡಲಾಯಿತು. ದೇಶಾದ್ಯಂತ ಹೆಚ್ಚಿನ ಹದಿಹರೆಯದ ಹುಡುಗಿಯರನ್ನು ಮಾಧ್ಯಮಿಕ ಶಾಲಾ ಶಿಕ್ಷಣದಿಂದ ಈಗಾಗಲೇ ನಿಷೇಧಿಸಲಾಗಿದೆ, ವಿಶ್ವವಿದ್ಯಾನಿಲಯದ ಸೇರ್ಪಡೆಯನ್ನು ಈಗ ಸೀಮಿತಗೊಳಿಸಲಾಗಿದೆ.

ಅಪ್ಘಾನಿಸ್ತಾನದಲ್ಲಿ ಆಂತರಿಕ ಭದ್ರತೆ ಮತ್ತು ಹುಡುಗಿಯರ ಶಿಕ್ಷಣದ ವಿಷಯದಲ್ಲಿ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದಾ ಮತ್ತು ಆಧುನಿಕ ಶಿಕ್ಷಣದ ವಿರುದ್ಧ ಅಫ್ಘಾನ್ ಧರ್ಮಗುರುಗಳ ಕಟ್ಟುನಿಟ್ಟಿನ ಕ್ರಮಗಳಿಗೆ ತಾಲಿಬಾನ್ ಸರ್ಕಾರವು ಬದ್ಧವಾಗಿದೆ. ಆದರೆ ಹುಡುಗಿಯರ ಕಲಿಕೆಯನ್ನು ಮುಂದುವರಿಸಲು ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಆಶಿಸಿದ ಅವರ ಶ್ರೇಣಿಯ ಅಧಿಕಾರಿಗಳೊಂದಿಗೆ ಹಾಗೂ ಕಾಬೂಲ್‌ನಲ್ಲಿರುವ ಅನೇಕ ಅಧಿಕಾರಿಗಳೊಂದಿಗೆ ಅವರು ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆ.

ಮತ್ತಷ್ಟು ಓದಿ: ಕಾಬೂಲ್‌ನಲ್ಲಿ ಚೀನಾ ಮೂಲದವರ ಹೋಟೆಲ್‌ ಬಳಿ ಕೇಳಿ ಬಂತು ಭಾರೀ ಸ್ಫೋಟದ ಸದ್ದು, ಫೈರಿಂಗ್‌

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಅನೇಕ ಸರ್ಕಾರಿ ಉದ್ಯೋಗಗಳಿಂದ ಹೊರಹಾಕಲ್ಪಟ್ಟಿದ್ದಾರೆ. ಮನೆಯಲ್ಲಿ ಉಳಿಯಲು ಅಂಥವರಿಗೆ ಕಡಿಮೆ ಸಂಬಳವನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಮಹಿಳೆಯರು ಪುರುಷ ಸಂಬಂಧಿ ಇಲ್ಲದೆ ಪ್ರಯಾಣಿಸುವುದನ್ನು ಸಹ ನಿರ್ಬಂಧಿಸಲಾಗಿದೆ.

ಮನೆಯ ಹೊರಗೆ ಹೊರಡುವಾಗ ಕಡ್ಡಾಯವಾಗಿ ಬುರ್ಖಾದೊಂದಿಗೆ ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿರಬೇಕು ಎಂಬ ನಿಯಮವನ್ನೂ ಜಾರಿಗೊಳಿಸಲಾಗಿದೆ. ಇದರ ಮಧ್ಯೆ ಕಳೆದ ನವೆಂಬರ್‌ನಲ್ಲಿ ಪಾರ್ಕ್‌ಗಳು, ಫನ್‌ಫೇರ್‌ಗಳು, ಜಿಮ್‌ಗಳು ಮತ್ತು ಸಾರ್ವಜನಿಕ ಸ್ನಾನಗೃಹಗಳಿಗೆ ಹೋಗುವುದನ್ನು ಸಹ ನಿಷೇಧಿಸಲಾಗಿದೆ.