ಅಫ್ಘಾನಿಸ್ತಾನದಲ್ಲಿ ಜೈಶ್ ಎ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್​ಗೆ ಆಶ್ರಯ: ಪಾಕಿಸ್ತಾನದ ಆರೋಪ ಅಲ್ಲಗಳೆದ ತಾಲೀಬಾನ್

ಅಫ್ಘಾನ್ ನೆಲದಲ್ಲಿ ಯಾವುದೇ ವಿದೇಶಿ ಶಸ್ತ್ರಧಾರಿ ಗುಂಪುಗಳ ಕಾರ್ಯಾಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ತಾಲೀಬಾನ್ ಸ್ಪಷ್ಟಪಡಿಸಿದೆ.

ಅಫ್ಘಾನಿಸ್ತಾನದಲ್ಲಿ ಜೈಶ್ ಎ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್​ಗೆ ಆಶ್ರಯ: ಪಾಕಿಸ್ತಾನದ ಆರೋಪ ಅಲ್ಲಗಳೆದ ತಾಲೀಬಾನ್
ಉಗ್ರ ಮಸೂದ್ ಅಜರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 14, 2022 | 8:16 PM

ಕಾಬೂಲ್: ಜೈಶ್-ಎ-ಮೊಹಮದ್​ (Jaish-e-Mohammed – JeM) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್​ ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿದ್ದಾನೆ ಎನ್ನುವ ಪಾಕಿಸ್ತಾನದ ಆರೋಪವನ್ನು ತಾಲೀಬಾನ್ ನಿರಾಕರಿಸಿದೆ. ಅಫ್ಘಾನ್ ನೆಲದಲ್ಲಿ ಯಾವುದೇ ವಿದೇಶಿ ಶಸ್ತ್ರಧಾರಿ ಗುಂಪುಗಳ ಕಾರ್ಯಾಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ತಾಲೀಬಾನ್ ಸ್ಪಷ್ಟಪಡಿಸಿದೆ.

ಉಗ್ರ ಮಸೂದ್ ಅಜರ್​ನನ್ನು ಹುಡುಕಿ, ಬಂಧಿಸುವಂತೆ ಅಫ್ಘಾನಿಸ್ತಾನಕ್ಕೆ ಮನವಿ ಮಾಡಲಾಗಿದೆ ಎನ್ನುವ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಹೇಳಿಕೆಗೆ ಸಂಬಂಧಿಸಿದ ವರದಿಗಳನ್ನು ತಾಲೀಬಾನ್ ನಿರಾಕರಿಸಿದೆ. ಅಫ್ಘಾನಿಸ್ತಾನದ ಕುನಾರ್ ಅಥವಾ ನಂಗಾರ್​ಹರ್ ಪ್ರಾಂತ್ಯದಲ್ಲಿ ಮಸೂದ್ ಅಜರ್ ಆಶ್ರಯ ಪಡೆದಿರಬಹುದು ಎಂದು ಪಾಕಿಸ್ತಾನವು ಶಂಕೆ ವ್ಯಕ್ತಪಡಿಸಿತ್ತು.

ಹಣಕಾಸು ಕ್ರಿಯಾ ಕಾರ್ಯಪಡೆಯ (Financial Action Task Force – FATF) ಸಭೆಗೆ ಸರಿಯಾಗಿ ಒಂದು ತಿಂಗಳು ಮೊದಲು ಈ ಮಹತ್ವದ ಬೆಳವಣಿಗೆ ನಡೆದಿದೆ. ಉಗ್ರಗಾಮಿಗಳಿಗೆ ಹಣಕಾಸು ಒದಗಿಸುವ ಅನುಮಾನವಿರುವ ಬೂದುಪಟ್ಟಿಯಲ್ಲಿ (Grey List) ಪ್ರಸ್ತುತ ಪಾಕಿಸ್ತಾನವು ಇದೆ. ಈ ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನವು ಸತತ ಪ್ರಯತ್ನ ನಡೆಸುತ್ತಿದೆ.

‘ಅಫ್ಘಾನಿಸ್ತಾನವು ಯಾವುದೇ ಉಗ್ರಗಾಮಿ ಸಂಘಟನೆಯ ಚಟುವಟಿಕೆಗೆ ಅವಕಾಶ ನೀಡಿಲ್ಲ. ಯಾವುದೇ ಉಗ್ರಗಾಮಿ ಸಂಘಟನೆಯ ನಾಯಕನಿಗೆ ಆಶ್ರಯ ಕೊಟ್ಟಿಲ್ಲ. ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳನ್ನು ನಂಬಲು ಆಗುವುದಿಲ್ಲ. ಇಂಥ ಆರೋಪಗಳನ್ನು ಮಾಡುವ ಮೊದಲು ಆಧಾರಗಳನ್ನು ಕೊಡಬೇಕು’ ಎಂದು ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ಹೇಳಿದ್ದಾರೆ.

ಉಗ್ರ ಮಸೂದ್ ಅಜರ್ ಭಾರತ ಸರ್ಕಾರಕ್ಕೂ ಬೇಕಿದ್ದಾನೆ. ಆದರೆ ಈ ಬೆಳವಣಿಗೆಯ ಬಗ್ಗೆ ಭಾರತ ಸರ್ಕಾರವು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಜರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ತಪ್ಪು ಹೊರಿಸಲು ಪ್ರಯತ್ನಿಸಿದೆ. ಮಸೂದ್ ಅಜರ್​ನನ್ನು ವಿಶ್ವಸಂಸ್ಥೆಯೂ ಭಯೋತ್ಪಾದಕ ಎಂದು ಹೇಳಿದೆ.

ಇಂಡಿಯನ್ ಏರ್​ಲೈನ್ಸ್​ನ ಪ್ರಯಾಣಿಕರ ವಿಮಾನವನ್ನು ಡಿಸೆಂಬರ್ 1999ರಲ್ಲಿ ಕಠ್ಮಂಡುವಿನಿಂದ ಅಪಹರಿಸಿದ್ದ ಉಗ್ರರು ಕಂದಹಾರ್​ಗೆ ಕೊಂಡೊಯ್ದಿದ್ದರು. ಉಗ್ರರ ಬೇಡಿಕೆಯಂತೆ ಉಗ್ರ ಮಸೂದ್ ಅಜರ್​ನನ್ನು ಭಾರತ ಸರ್ಕಾರವು ಬಿಡುಗಡೆ ಮಾಡಿತ್ತು. ನಂತರ ಮಸೂದ್ ಅಜರ್ ಜೈಶ್-ಎ-ಮೊಹಮದ್ ಸ್ಥಾಪಿಸಿ ಭಾರತದ ವಿರುದ್ಧ ಚಟುವಟಿಕೆ ತೀವ್ರಗೊಳಿಸಿದ್ದ.

ಹಣಕಾಸು ಕಾರ್ಯಪಡೆಗೆ (FATF) ಈ ಕುರಿತು ಈ ವರ್ಷದ ಆರಂಭದಲ್ಲಿ ಮಾಹಿತಿ ನೀಡಿದ್ದ ಪಾಕಿಸ್ತಾನ ಸರ್ಕಾರವು ಉಗ್ರ ಮಸೂದ್ ಅಜರ್​ನನ್ನು ಗುರುತಿಸಲು ಅಫ್ಘಾನಿಸ್ತಾನ ಆಡಳಿತದ ನೆರವು ಕೋರಲಾಗಿದೆ ಎಂದು ಹೇಳಿತ್ತು. ಇದಕ್ಕೂ ಮೊದಲು ಭಾರತ ಸರ್ಕಾರದ ಮನವಿಯನ್ನು ಒಪ್ಪಿಕೊಂಡಿದ್ದ ಅಂತರರಾಷ್ಟ್ರೀಯ ಸಮುದಾಯವು ಮಸೂದ್ ಅಜರ್ ಮತ್ತು ಲಷ್ಕರ್-ಎ-ತಯ್ಯಬಾ (LET) ಸಂಘಟನೆಯ ಸಂಸ್ಥಾಪಕ ಹಫೀಸ್ ಸಯೀದ್ ಮತ್ತು ಎಲ್​ಇಟಿ ಉಗ್ರ ಸಜ್ಜಿದ್ ಮಿರ್ ಅವರನ್ನು 30 ಅತಿಮುಖ್ಯ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ