ಶಾಲೆಯಲ್ಲಿ ಹದಿಹರೆಯದವನಿಂದ ಶೂಟಿಂಗ್: 7 ವಿದ್ಯಾರ್ಥಿಗಳು, ಶಿಕ್ಷಕರು ಬಲಿ
ನಾವು ನಾಲ್ಕು ಹುಡುಗರು ಮತ್ತು ಮೂವರು ಹುಡುಗಿಯರು ಸೇರಿ ಏಳು ಮಕ್ಕಳನ್ನು ಕಳೆದುಕೊಂಡಿದ್ದೇವೆ. 12 ಮಕ್ಕಳು ಮತ್ತು ನಾಲ್ಕು ವಯಸ್ಕರು ಆಸ್ಪತ್ರೆಯಲ್ಲಿದ್ದಾರೆ ಎಂದು ಮಿನ್ನಿಕಾನೋವ್ ಸ್ಟೇಟ್ ಟಿವಿಗೆ ತಿಳಿಸಿದ್ದಾರೆ.
ಮಾಸ್ಕೊ: ಶಾಲೆಗಳಲ್ಲಿ ಮಕ್ಕಳು, ಸಿಬ್ಬಂದಿ, ಪೋಷಕರ ಮೇಲೆ ಗುಂಡಿನ ದಾಳಿ ನಡೆಸುವ ಪ್ರಸಂಗಗಳಿಗೆ ಕೊನೆ ಮೊದಲಿಲ್ಲ ಎಂಬಂತಾಗಿದೆ. ಇದಕ್ಕೆ ಬಲಿಯಾಗುವವರು ಮಾತ್ರ ಅಮಾಯಕರು. ರಷ್ಯಾದ ಖಜಾನ್ನಲ್ಲಿ ಇಂದು ಮಂಗಳವಾರ ಇಂತಹುದೇ ಹೇಯ ಕೃತ್ಯ ನಡೆದಿದೆ. ಹದಿಹರೆಯದ ಗನ್ಮ್ಯಾನ್ ಗುಡಿನ ದಳಿ ನಡೆಸಿದ್ದು, 7 ವಿದ್ಯಾರ್ಥಿಗಳು, ಶಿಕ್ಷಕರು ಬಲಿಯಾಗಿದ್ದಾರೆ. 16 ಮಂದಿ ಗಾಯಗೊಂಡಿದ್ದಾರೆ.
ರಷ್ಯಾದ ಆರ್‌ಐಎ ಸುದ್ದಿಸಂಸ್ಥೆಯಿಂದ ಪ್ರಸಾರವಾದ ನೋಡುಗರೊಬ್ಬರು ಚಿತ್ರೀಕರಿಸಿದ ವೀಡಿಯೊದಲ್ಲಿ, ಗುಂಡಿನ ಹೊಡೆತಗಳು ಹೊರಬಂದಂತೆ ತಪ್ಪಿಸಿಕೊಳ್ಳಲು ನಾಲ್ಕು ಅಂತಸ್ತಿನ ಶಾಲೆಯ ಮೂರನೇ ಮಹಡಿಯಿಂದ ಇಬ್ಬರು ಮಕ್ಕಳು ಹಾರಿದ್ದಾರೆ. ಈ ದಾಳಿಯನ್ನು ಇಡೀ ದೇಶಕ್ಕೆ ದೊಡ್ಡ ದುರಂತ ಎಂದು ಕರೆದ ಟಾಟಾರ್‌ಸ್ತಾನ್ ಪ್ರದೇಶದ ಮುಖ್ಯಸ್ಥ ರುಸ್ತಮ್ ಮಿನ್ನಿಕಾನೋವ್, ಕೃತ್ಯದಲ್ಲಿ ಬೇರೆಯವರು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ನಾವು ನಾಲ್ಕು ಹುಡುಗರು ಮತ್ತು ಮೂವರು ಹುಡುಗಿಯರು ಸೇರಿ ಏಳು ಮಕ್ಕಳನ್ನು ಕಳೆದುಕೊಂಡಿದ್ದೇವೆ. 12 ಮಕ್ಕಳು ಮತ್ತು ನಾಲ್ಕು ವಯಸ್ಕರು ಆಸ್ಪತ್ರೆಯಲ್ಲಿದ್ದಾರೆ ಎಂದು ಮಿನ್ನಿಕಾನೋವ್ ಸ್ಟೇಟ್ ಟಿವಿಗೆ ತಿಳಿಸಿದ್ದಾರೆ.
ಆಪಾದಿತ ಶೂಟರ್‌ಗೆ ಸೇರಿದ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆತ ತನ್ನನ್ನು ರಕ್ತಪಿಪಾಸು ದೇವತೆ ಎಂದು ಬಣ್ಣಿಸಿಕೊಂಡಿದ್ದಾನೆ. ಮತ್ತು ಸ್ವತಃ ಗುಂಡು ಹಾರಿಸುವ ಮೊದಲು ಭಾರಿ ಸಂಖ್ಯೆಯ ಜನರನ್ನು ಕೊಲ್ಲಲು ಯೋಜಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆ ಖಾತೆಯನ್ನು ನಂತರ ನಿರ್ಬಂಧಿಸಲಾಗಿದೆ.
ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಆಸ್ಪತ್ರೆಯಲ್ಲಿ ಆರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ, ಆರೋಗ್ಯ ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆಗಳು 11 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು.
ಸ್ಫೋಟಗಳ ಶಬ್ದಗಳನ್ನು ನಾವು ಕೇಳಿದ್ದೇವೆ. ಎಲ್ಲಾ ಶಿಕ್ಷಕರು ಮಕ್ಕಳನ್ನು ತರಗತಿ ಕೋಣೆಗಳಲ್ಲಿ ಬೀಗ ಹಾಕಿ ಕೂಡಿಸಿದರು. ಶೂಟಿಂಗ್ ಮೂರನೇ ಮಹಡಿಯಲ್ಲಿ ನಡೆದಿದೆ ಎಂದು ತಿಳಿಯಿತು ಎಂದು ಸ್ಥಳೀಯ ಮಾಧ್ಯಮವೊಂದು ಶಿಕ್ಷಕರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿದೆ.
ಇತರ ತುಣುಕಿನಲ್ಲಿ ಶಾಲೆಯ ಹೊರಗೆ ನಿಲ್ಲಿಸಲಾಗಿರುವ ತುರ್ತು ಸೇವಾ ವಾಹನಗಳನ್ನು ತೋರಿಸಲಾಗಿದೆ. ಜನರು ಕಟ್ಟಡದ ಕಡೆಗೆ ಓಡುತ್ತಿರುವುದು ಕಂಡುಬಂದಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಾಷ್ಟ್ರೀಯ ಗಾರ್ಡ್ ಮುಖ್ಯಸ್ಥರಿಗೆ ಗನ್ ನೀಡಿಕೆಯಲ್ಲಿ ಕಠಿಣ ನಿಯಮಗಳನ್ನು ರೂಪಿಸುವಂತೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಭೀಮಾತೀರದಲ್ಲಿ ನೆತ್ತರು; ತಲೆ ಜಜ್ಜಿ ಪೌರ ಕಾರ್ಮಿಕನ ಬರ್ಬರ ಕೊಲೆ
‘ಸರಿಗಮಪ’ ಸುಬ್ರಮಣಿ ಪತ್ನಿ ಸಾವಿನ ಕೇಸ್ಗೆ ಟ್ವಿಸ್ಟ್; ಕೊರೊನಾ ಅಲ್ಲ, ಆತ್ಮಹತ್ಯೆಯಿಂದ ನಿಧನ?
Published On - 7:36 pm, Tue, 11 May 21