ಟೆಕ್ಸಾಸ್ (ಯುಎಸ್): ಹೊಸ ವರ್ಷದ ದಿನವೇ 8-ವರ್ಷದ ಮೊಮ್ಮಗನನ್ನು ಇರಿದು ಕೊಂದ ಆರೋಪದಲ್ಲಿ ತಾತನ ಬಂಧನ
ಹೊಸ ವರ್ಷದ ಮೊದಲ ದಿನದಂದೇ, ಕೇವಲ 8-ವರ್ಷದ ಮೊಮ್ಮಗನನ್ನು ಕೊಲ್ಲುವ ಹಿಂದೆ ತಾತನ ಉದ್ದೇಶ ಏನಾಗಿತ್ತು ಅನ್ನೋದಿನ್ನೂ ಪೊಲೀಸರು ಪತ್ತೆ ಮಾಡಿಲ್ಲ.
ಹೊಸ ವರ್ಷ ಅರಂಭವಾದ ಕೆಲವೇ ಗಂಟೆಗಳ ಬಳಿ ತನ್ನ 8-ವರ್ಷದ ಮೊಮ್ಮಗನನ್ನು ಇರಿದು ಕೊಂದ ಆರೋಪದಲ್ಲಿ 62-ವರ್ಷ-ವಯಸ್ಸಿನ ತಾತನನ್ನು ಅಮೆರಿಕದ ಟೆಕ್ಸಾಸ್ (Texas) ಪೊಲೀಸರು ಬಂಧಿಸಿದ್ದಾರೆ. ಅರೋಪಿಯನ್ನು ಫಿಲಿಪ್ ಹ್ಯೂಸ್ (Philip Hughes) ಎಂದು ಗುರುತಿಸಲಾಗಿದ್ದು ಟೆಕ್ಸಾಸ್ ರಿಚ್ಲ್ಯಾಂಡ್ ಹಿಲ್ ಪೊಲೀಸ್ (Richland Hills Police) ಅಧಿಕಾರಿಗಳು ಬಂಧಿಸಿದ್ದಾರೆ. ಫಿಲಿಪ್ ತನ್ನ ಮೊಮ್ಮಗನನ್ನು ಬೆಳಗ್ಗೆ 7.50 ಕ್ಕೆ ಕೊಂದನೆಂದು ಆರೋಪಿಸಲಾಗಿದೆ. ಅಧಿಕಾರಿಗಳು ಅಪರಾದ ಸ್ಥಳಕ್ಕೆ ಆಗಮಿಸಿದಾಗ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಅವನ ಹೆಸರನ್ನು ಬಹಿರಂಗಪಡಿಸಿಲ್ಲ. ಶವದ ಪಕ್ಕದಲ್ಲೇ ಕುಳಿತಿದ್ದ ಫಿಲಿಪ್ ನನ್ನು ಪೊಲೀಸರು ಬಂಧಿಸಿದರು. ಕೊಲೆಗೆ ಬಳಸಿದ ಹರಿತವಾದ ಆಯುಧವನ್ನೂ ಅವರು ವಶಕ್ಕೆ ಪಡೆದಿದ್ದಾರೆ.
ರಿಚ್ಲ್ಯಾಂಡ್ ಹಿಲ್ ಪೊಲೀಸ್ ಬಿಡುಗಡೆ ಮಾಡಿರುವ ಹೇಳಿಕೆ ಹೀಗೆ ಹೇಳುತ್ತದೆ: ರವಿವಾರ ಜನೆವರಿ 1, 2023 ರಂದು ರಿಚ್ಲ್ಯಾಂಡ್ ಹಿಲ್ ಪೊಲೀಸ್ ಮತ್ತು ಫೈರ್ ಡಿಪಾರ್ಟ್ ಮೆಂಟ್ ತಂಡಗಳನ್ನು ಟೆಕ್ಸಾಸ್ ರಿಚರ್ಡ್ ಹಿಲ್ ಲಬಾಡೀ ಡ್ರೈವ್ 3500 ಬ್ಲಾಕ್ ನಿಂದ ಇರಿತದ ಪ್ರಕರಣದ ಬಗ್ಗೆ ಕರೆ ಬಂದ ಕೂಡಲೇ ಕಳಿಸಲಾಗಿತ್ತು.’
ಹೊರಗಿನವರ ಕೈವಾಡವಿಲ್ಲ!
‘ನೆರೆಹೊರೆಯ ಪೊಲೀಸ್ ಮತ್ತು ಫೈರ್ ಏಜೆನ್ಸಿಗಳು ನೆರವಿಗೆ ಧಾವಿಸಿದವು,’ ಅಂತಲೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಶುರುವಾಗಿದೆ, ಆದರೆ, ಬಾಲಕನ ಕೊಲೆಯಲ್ಲಿ ಹೊರಗಿನವರ ಕೈವಾಡವನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: Siddeshwar Swamiji: ಸಿದ್ದೇಶ್ವರ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕೇಳಿಬಂತು ಮೊದಲ ಕೂಗು
ಹೊಸ ವರ್ಷದ ಮೊದಲ ದಿನದಂದೇ, ಕೇವಲ 8-ವರ್ಷದ ಮೊಮ್ಮಗನನ್ನು ಕೊಲ್ಲುವ ಹಿಂದೆ ತಾತನ ಉದ್ದೇಶ ಏನಾಗಿತ್ತು ಅನ್ನೋದಿನ್ನೂ ಪೊಲೀಸರು ಪತ್ತೆ ಮಾಡಿಲ್ಲ.
ಬಂಧಿಸುವಾಗ ಪ್ರತಿರೋಧಿಸಲಿಲ್ಲ
‘ಕೊಲೆಯಾಗಿರುವ ಬಾಲಕನ ತಾತ ಎಂದು ಗುರುತಿಸಲಾಗಿರುವ 62-ವರ್ಷದ ಫಿಲಿಪ್ ಹ್ಯೂಸ್ ಶಂಕಿತನಾಗಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ. ಅವನ ಕೊಲೆ ನಡೆದ ಮನೆಯಲ್ಲೇ ಇದ್ದ ಮತ್ತು ಬಂಧಿಸುವಾಗ ಯಾವುದೇ ಪ್ರತಿರೋಧ ವ್ಯಕ್ತಪಡಿಸಲಿಲ್ಲ,’ ಎಂದು ರಿಚರ್ಡ್ ಹಿಲ್ ಪೊಲೀಸ್ ಹೇಳಿದೆ.
ಆರೋಪಿಯನ್ನು ನಾರ್ಥ್ ರಿಚ್ಲ್ಯಾಂಡ್ ಹಿಲ್ಸ್ ಪೊಲೀಸ್ ಇಲಾಖೆಯ ಜಾಯಿಂಟ್ ಡಿಟೆನ್ಷನ್ ಸೆಂಟರ್ ಗೆ ಕರೆದೊಯ್ಯಲಾಗಿದೆ. ಅವನ ವಿರುದ್ಧ ಕೊಲೆಯ ಚಾರ್ಜ್ ವಿಧಿಸಲಾಗಿದೆ ವಿಚಾರಣೆಗಾಗಿ ಅವನು ಕಾಯುತ್ತಿದ್ದಾನೆ.
ಶೋಕತಪ್ತ ಕುಟುಂಬಕ್ಕೆ ಸಂತಾಪ ಸೂಚಿಸಿದ ಪೊಲೀಸ್
ವಿವೇಚನೆರಹಿತ ಕೊಲೆ ಪ್ರಕರಣದದಿಂದ ಶೋಕತಪ್ತರಾಗಿರುವ ಕುಟುಂಬದ ಸದಸ್ಯರಿಗೆ ರಿಚ್ಲ್ಯಾಂಡ್ ಹಿಲ್ ಪೊಲೀಸ್ ಇಲಾಖೆ ಸಂತಾಪ ಸೂಚಿಸುತ್ತದೆ ಮತ್ತು ಅವರಿಗಾಗಿ ಪ್ರಾರ್ಥನೆ ಮಾಡುವುದು ಮುಂದುವರಿದಿದೆ,’ ಎಂದು ಪೊಲೀಸ್ ಇಲಾಖೆ ಹೇಳಿದೆ. ಫಿಲಿಪ್ ವಿರುದ್ಧ ಈ ಮೊದಲು ಯಾವುದೇ ಸ್ವರೂಪದ ಅಪರಾಧ ಪ್ರಕರಣ ದಾಖಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Rahul Dravid: ಬೇಡವಾದ್ರಾ ರಾಹುಲ್ ದ್ರಾವಿಡ್? ವಿದೇಶಿ ಕೋಚ್ ಹುಡುಕಾಟ ಆರಂಭಿಸಿದ ಬಿಸಿಸಿಐ..!
ಆರೋಪಿಯು ಕೊಲೆ ಮಾಡುವ ಹಿಂದಿನ ಉದ್ದೇಶ ಏನಾಗಿತ್ತು ಮತ್ತು ಇನ್ನೂ ಹಲಾವಾರು ಪ್ರಶ್ನೆಗಳನ್ನು ಅಧಿಕಾರಿಗಳು ಫಿಲಿಪ್ ಗೆ ಕೇಳಲಿದ್ದಾರೆ ಎಂದು ರಿಚ್ಲ್ಯಾಂಡ್ ಹಿಲ್ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಶೀನಾ ಮ್ಯಾಕಿಚ್ರಾನ್ ಹೇಳಿದ್ದಾರೆ.
‘ಬೇರೆಯವರಂತೆ ನಮ್ಮಲ್ಲೂ ಬಹಳಷ್ಟು ಪ್ರಶ್ನೆಗಳಿವೆ. ಒಂದು ಸಮಗ್ರ ತನಿಖೆಯ ನಂತರವೇ ನಾವು ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸಾಧ್ಯ. ಆದಾದ ನಂತರ ನಾವು ದುರಂತ ಯಾಕೆ ನಡೆಯಿತು ಅಂತ ಹೇಳುವುದು ಸಾಧ್ಯವಾಗುತ್ತದೆ,’ ಅಂತ ಶೀನಾ ಹೇಳದ್ದಾರೆ.
ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ