ಚಾರ್ಜಿಂಗ್ ಹಾಕಿದ್ದ ಫೋನ್ನಲ್ಲಿ ಗೇಮ್ ಆಡುತ್ತಿದ್ದ ವ್ಯಕ್ತಿ ಸಾವು
ಥೈಲ್ಯಾಂಡ್: ಚಾರ್ಜ್ ಹಾಕಿದ್ದ ಫೋನಿನಲ್ಲಿ ಗೇಮ್ ಆಡುತ್ತಿದ್ದ 28 ವರ್ಷದ ಕಿಟ್ಟಿಸಾಕ್ ಮೂನ್‌ಕಿಟ್ಟಿ ಎಂಬ ವ್ಯಕ್ತಿ ವಿದ್ಯುದಾಘಾತದಿಂದ ಮೃತಪಟ್ಟಿರುವ ಘಟನೆ ಪಶ್ಚಿಮ ಥೈಲ್ಯಾಂಡ್‌ನ ಚೊನ್‌ಬುರಿ ಪ್ರದೇಶದಲ್ಲಿ ನಡೆದಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ತನ್ನ ಕೋಣೆ ಸೇರಿದ್ದ ಕಿಟ್ಟಿಸಾಕ್ ಕೋಣೆ ಬೀಗ ಹಾಕಿ, ಮೊಬೈಲ್ಗೆ ಚಾರ್ಜರ್ ಅಂಟಿಸಿ ಗೇಮ್ ಆಡುತ್ತಿದ್ದ ಈ ವೇಳೆ ವಿದ್ಯುದಾಘಾತದಿಂದ ಕೋಣೆಯಲ್ಲೇ ಮೃತಪಟ್ಟಿದ್ದಾನೆ. 57 ವರ್ಷದ ಕಿಟ್ಟಿಸಾಕ್ ತಾಯಿ ಮನೆ ಸ್ವಚ್ಛಗೊಳಿಸಲು ಕೋಣೆ ಬಾಗಿಲು ತೆರೆಯುವಂತೆ ಹಲವಾರು ಬಾರಿ ಕೂಗಿದ್ದಾರೆ. ಎಷ್ಟೇ ಕೂಗಿದರು ಯಾವುದೇ ಪ್ರತಿಕ್ರಿಯೆ ಇಲ್ಲದ […]
ಥೈಲ್ಯಾಂಡ್: ಚಾರ್ಜ್ ಹಾಕಿದ್ದ ಫೋನಿನಲ್ಲಿ ಗೇಮ್ ಆಡುತ್ತಿದ್ದ 28 ವರ್ಷದ ಕಿಟ್ಟಿಸಾಕ್ ಮೂನ್‌ಕಿಟ್ಟಿ ಎಂಬ ವ್ಯಕ್ತಿ ವಿದ್ಯುದಾಘಾತದಿಂದ ಮೃತಪಟ್ಟಿರುವ ಘಟನೆ ಪಶ್ಚಿಮ ಥೈಲ್ಯಾಂಡ್‌ನ ಚೊನ್‌ಬುರಿ ಪ್ರದೇಶದಲ್ಲಿ ನಡೆದಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ತನ್ನ ಕೋಣೆ ಸೇರಿದ್ದ ಕಿಟ್ಟಿಸಾಕ್ ಕೋಣೆ ಬೀಗ ಹಾಕಿ, ಮೊಬೈಲ್ಗೆ ಚಾರ್ಜರ್ ಅಂಟಿಸಿ ಗೇಮ್ ಆಡುತ್ತಿದ್ದ ಈ ವೇಳೆ ವಿದ್ಯುದಾಘಾತದಿಂದ ಕೋಣೆಯಲ್ಲೇ ಮೃತಪಟ್ಟಿದ್ದಾನೆ.
57 ವರ್ಷದ ಕಿಟ್ಟಿಸಾಕ್ ತಾಯಿ ಮನೆ ಸ್ವಚ್ಛಗೊಳಿಸಲು ಕೋಣೆ ಬಾಗಿಲು ತೆರೆಯುವಂತೆ ಹಲವಾರು ಬಾರಿ ಕೂಗಿದ್ದಾರೆ. ಎಷ್ಟೇ ಕೂಗಿದರು ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಮಗ ಮಲಗಿರಬೇಕೆಂದು ಸುಮ್ಮನಾಗಿದ್ದರು. ಆದರೆ ಅಂತಿಮವಾಗಿ ಕೆಲಸಕ್ಕೆ ಹೋಗುವಾಗ ಅವರು ಕೋಣೆಗೆ ಬಂದಿದ್ದಾರೆ ಈ ವೇಳೆ ತಮ್ಮ ಮಗ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಹಾಸಿಗೆಯ ಮೇಲೆ ಮಲಗಿದ್ದ.
ಅವನ ಕೈಯಲ್ಲಿ ಸುಟ್ಟ ಗುರುತುಗಳಿದ್ದವು. ತನ್ನ ಮೃತ ಮಗನನ್ನು ಎದ್ದೇಳಿಸಲು ಅವನ ಹೆಸರನ್ನು ಕೂಗಿದ್ದಾರೆ. ಕಿರುಚಾಡಿದ್ದಾರೆ ಮಗನನ್ನು ಎದ್ದೇಳಿಸಲು ಹರಸಾಹಸ ಮಾಡಿದ್ದಾರೆ. ಆದರೆ ಯಾವುದೇ ಪ್ರಯೂಜನವಾಗಿಲ್ಲ. ನಂತರ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ದೇಹವನ್ನು ನೋಡಿ ಇದು ಜಾರ್ಜ್ಗೆ ಇಟ್ಟಿದ್ದ ಫೋನಿನಿಂದ ತಮ್ಮ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಮರಣೋತ್ತರ ವರದಿಯ ನಂತರ ಸಾವಿಗೆ ನಿಖರ ಕಾರಣವನ್ನು ವಿವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Published On - 7:30 pm, Tue, 3 December 19