AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತ ಹೆಪ್ಪುಗಟ್ಟುವ ಭಯವಿಲ್ಲ! ಕೊವಿಶೀಲ್ಡ್​ ಚುಚ್ಚುಮದ್ದಿಗೆ ಸಿಕ್ತು ಅಮೆರಿಕದ ಹಸಿರು ನಿಶಾನೆ..

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ-ಆಸ್ಟ್ರಾಜೆನೆಕಾ ಕೂಡಿ ಅಭಿವೃದ್ಧಿ ಪಡಿಸಿದ ಚುಚ್ಚುಮದ್ದಿಗೆ ಅಮೆರಿಕ ಒಪ್ಪಿಗೆ ಕೊಟ್ಟಿದೆ. ಯಾವ ದೇಶಗಳು ಈ ಚುಚ್ಚುಮದ್ದನ್ನು ಸ್ವೀಕರಿಸಲು ಹಿಂಜರಿಯುತ್ತಿದ್ದವೋ ಅವೆಲ್ಲ ಈಗ ಈ ಚುಚ್ಚುಮದ್ದನ್ನು ಸ್ವೀಕರಿಸುವ ಸಾಧ್ಯತೆ ಜಾಸ್ತಿ ಇದೆ ಎಂದು ಬಿಬಿಸಿ ವರದಿ ಮಾಡಿದೆ.

ರಕ್ತ ಹೆಪ್ಪುಗಟ್ಟುವ ಭಯವಿಲ್ಲ! ಕೊವಿಶೀಲ್ಡ್​ ಚುಚ್ಚುಮದ್ದಿಗೆ ಸಿಕ್ತು ಅಮೆರಿಕದ ಹಸಿರು ನಿಶಾನೆ..
ಡಾ. ಭಾಸ್ಕರ ಹೆಗಡೆ
| Updated By: sandhya thejappa|

Updated on:Mar 22, 2021 | 3:43 PM

Share

ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಆಕ್ಸಫರ್ಡ್ ವಿಶ್ವವಿದ್ಯಾಲಯ-ಆಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿದ ಕೊವಿಶೀಲ್ಡ್ ಚುಚ್ಚುಮದ್ದಿಗೆ ಈಗ ಅಮೇರಿಕಾದ ಒಪ್ಪಿಗೆ ಸಿಕ್ಕಿದೆ. ಸುಮಾರು 32,000 ಜನ ಭಾಗವಹಿಸಿದ ಮೂರನೇ ಹಂತದ ಪ್ರಯೋಗದಲ್ಲಿ ಸುಮಾರು 79 ಪ್ರತಿಶತ ಸುರಕ್ಷಿತ ಎಂದು ನಿರೂಪಿತವಾಗಿದೆ. ಈ ಚುಚ್ಚುಮದ್ದು ತುಂಬಾ ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಅಮೆರಿಕದ ಎಫ್​ಡಿಎ ಅಧಿಕಾರಿಗಳು ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಗಮನಿಸಬೇಕಾದ ಅಂಶವೇನೆಂದರೆ, ಪ್ರಯೋಗದಲ್ಲಿ ಭಾಗವಹಿಸಿದ ಪ್ರತಿ ಐದು ಜನರಲ್ಲಿ ಒಬ್ಬರು 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು. ಅವರಲ್ಲಿ ತೊಂದರೆ ಕಂಡುಬರಲಿಲ್ಲ.    

ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು? ಅಮೆರಿಕ ಈ ಚುಚ್ಚುಮದ್ದಿಗೆ ಒಪ್ಪಿಗೆ ಕೊಟ್ಟಿರುವುದರಿಂದ ವಿಶ್ವದ ಅನೇಕ ದೇಶಗಳು ಈ ಲಸಿಕೆ ಪಡೆಯಲು ಮುಂದೆ ಬರುವುದು ನಿಶ್ಚಿತ. ಈ ಚುಚ್ಚುಮದ್ದು ಸಹ ಭಾರತದಲ್ಲೇ ತಯಾರಿ ಆಗುತ್ತದೆ. ಒಂದೊಮ್ಮೆ ಅಮೆರಿಕ ತಕರಾರು ತೆಗೆದಿದ್ದರೆ ಭಾರತದಲ್ಲಿ ತಯಾರಾಗುವ ಈ ಚುಚ್ಚುಮದ್ದು ತಯಾರಿಕೆಗೆ ಬಹಳ ಹೊಡೆತ ಬೀಳುತ್ತಿತ್ತು. ಇದರ ಜೊತೆಗೆ ದೇಶದ ಒಳಗೆ ಕೂಡ ಈ ಚುಚ್ಚುಮದ್ದಿನ ಬಗ್ಗೆ ವಿರೋಧ ಪಕ್ಷದ ನಾಯಕರು ಸೇರಿ ಅನೇಕರು ಪ್ರಶ್ನೆ ಎತ್ತಿದ್ದರು. ಈಗ ಅಮೆರಿಕ ಹಸಿರು ನಿಶಾನೆ ತೊರಿಸಿರೋ ಹಿನ್ನೆಲೆಯಲ್ಲಿ, ಈ ಚುಚ್ಚುಮದ್ದನ್ನು ಹಾಕಿಸಿಕೊಳ್ಳಲು ನಮ್ಮ ದೇಶದಲ್ಲಿ ಕೂಡ ಜನ ಮುಂದೆ ಬರುವ ಸಾಧ್ಯತೆ ಇದೆ.

ವರದಿ ಇನ್ನೇನು ಹೇಳುತ್ತಿದೆ? ಬಿಬಿಸಿ ವರದಿ ಪ್ರಕಾರ, ಕೊವಿಶೀಲ್ಡ್ ಲಸಿಕೆಯನ್ನು ಅಮೆರಿಕಾ, ಪೆರು ಮತ್ತು ಚಿಲಿ ದೇಶದ 32,000 ಜನಕ್ಕೆ ನೀಡಲಾಗಿತ್ತು. ಸುಮಾರು 79 ಪ್ರತಿಶತ ಜನರಲ್ಲಿ ಈ ಚುಚ್ಚುಮದ್ದು ಕೊವಿಡ್ ಲಕ್ಷಣವನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರೆ, ಕೊರೊನಾ ನಿಗ್ರಹ ಮಾಡುವಲ್ಲಿ ಈ ಚುಚ್ಚುಮದ್ದು 100 ಪ್ರತಿಶತ ಪರಿಣಾಮಕಾರಿ ಎಂಬುದು ನಿರೂಪಿತವಾಗಿದೆ ಎಂದು ವರದಿ ಹೇಳಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಚುಚ್ಚುಮದ್ದಿನಿಂದ ರಕ್ತ ಹೆಪ್ಪುಗಟ್ಟುತ್ತೆ ಎಂಬುದು ನಿರೂಪಿತವಾಗಿಲ್ಲ ಎಂದು ಅಮೆರಿಕಾ ಸಾರಿದೆ. ಫ್ರಾನ್ಸ್, ಇಟಲಿ ಮತ್ತು ಇನ್ನು ಕೆಲವು ಯುರೋಪಿಯನ್ ದೇಶಗಳು ತಮ್ಮ ದೇಶದ ಹಿರಿಯ ನಾಯಕರಿಗೆ ಈ ಚುಚ್ಚುಮದ್ದು ನೀಡುವುದನ್ನು ನಿಲ್ಲಿಸಿ WHO ಒಪ್ಪಿಕೊಳ್ಳುವವರೆಗೆ ತಾವು ಒಪ್ಪಿಕೊಳ್ಳಲ್ಲ ಎಂದು ಹೇಳಿದ್ದವು. ಈಗ ಅಮೆರಿಕ ಹಸಿರು ನಿಶಾನೆ ಕೊಟ್ಟರುವುದರಿಂದ ಯುರೋಪಿನ ದೇಶಗಳು ಈ ಚುಚ್ಚುಮದ್ದನ್ನು ಒಪ್ಪಿಕೊಂಡು ತಮ್ಮ ತಮ್ಮ ದೇಶದ ಪ್ರಜೆಗಳಿಗೆ ಈ ಚುಚ್ಚುಮದ್ದು ನೀಡಲು ಮುಂದಾಗಬಹುದು ಎಂದು ಬಿಬಿಸಿ ಹೇಳಿದೆ.

ಈ ಚುಚ್ಚುಮದ್ದು ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದ ಪ್ರಧಾನ ಸಂಶೋಧಕ, ಪ್ರೊ. ಆಂಡ್ರ್ಯೂ ಪೊಲಾರ್ಡ್ ಮಾತನಾಡಿ, ಅಮೆರಿಕದಿಂದ ಬರುತ್ತಿರುವುದು ಒಳ್ಳೇ ಸುದ್ದಿ. ಈ ಫಲಿತಾಂಶ ಏನನ್ನು ತೋರಿಸುತ್ತಿದೆ ಎಂದರೆ ಬಹಳ ದೊಡ್ಡ ಪ್ರಮಾಣದ ಜನಸಂಖ್ಯೆ ಮೇಲೆ ಈ ಚುಚ್ಚುಮದ್ದು ಪರಿಣಾಮಕಾರಿಯಾಗಿದೆ. ಮತ್ತು ಎಲ್ಲ ವಯಸ್ಸಿನ ಜನರ ಮೇಲೂ ಇದು ಪರಿಣಾಮಕಾರಿ ಎಂದು ನಿರೂಪಿತವಾದಂತೆ ಆಯ್ತು ಎಂದು ಹೇಳಿದ್ದಾರೆ. ಈ ಟೀಮಿನಲ್ಲಿ ಕೆಲಸ ಮಾಡಿರುವ ಮತ್ತೋರ್ವ ಸಂಶೋಧಕಿ ಪ್ರೊ. ಸಾರಾ ಗಿಲ್ಬರ್ಟ್ ಮಾತನಾಡಿ ಈ ಚುಚ್ಚುಮದ್ದು ತೆಗೆದುಕೊಂಡಾಗ ಕೆಲವರ ಆರೋಗ್ಯದಲ್ಲಿ ಏರುಪೇರಾಗಿರುವುದು ನಿಜ. ಆದರೆ, ಬಹಳ ಜನರಲ್ಲಿ ಕೊವಿಶಿಲ್ಡ್​ನಿಂದ ಬಂದಿದ್ದು ಎಂಬುದು ನಿರೂಪಿತವಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಪ್ರಧಾನಿ ನರೇಂದ್ರ ಮೋದಿ ಪಡೆದ ಕೊವಿಡ್​ ವ್ಯಾಕ್ಸಿನ್ ಯಾವುದು? ಲಸಿಕೆ ಪಡೆದ ಬಳಿಕ ಪುದುಚೇರಿ, ಕೇರಳದ ನರ್ಸ್​ಗಳಿಗೆ ಹೇಳಿದ್ದೇನು?

ಕೊವಿಡ್​ ಲಸಿಕೆ ಬಗ್ಗೆ ನಿಮಗೆ ಗೊತ್ತಿರಬೇಕಾದ Top 9 ಸಂಗತಿಗಳು

Published On - 3:41 pm, Mon, 22 March 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ