ಕಾಬೂಲ್: ಅಫ್ಘಾನಿಸ್ತಾನದಲ್ಲಿ ಯಾವ ರೀತಿ ಅಧಿಕಾರ ನಡೆಸಬೇಕು ಎಂಬುದರ ಬಗ್ಗೆ ತಾಲಿಬಾನ್ ತಂಡ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಾಲಿಬಾನ್‌ನ ಹಿರಿಯ ಸದಸ್ಯ ವಹೀದುಲ್ಲಾ ಹಾಶಿಮಿ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಈ ಗುಂಪು ತನ್ನ ಹಿಂದಿನ ಆಡಳಿತದಂತೆಯೇ ಆಡಳಿತವನ್ನು ಯೋಜಿಸುತ್ತಿರುವುದರಿಂದ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯು ಇರುವುದಿಲ್ಲ. ಯಾಕೆಂದರೆ ಅದು ದೇಶದಲ್ಲಿ ಯಾವುದೇ ನೆಲೆಯನ್ನು ಹೊಂದಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ. “ಅಫ್ಘಾನಿಸ್ತಾನದಲ್ಲಿ ನಾವು ಯಾವ ರೀತಿಯ ರಾಜಕೀಯ ವ್ಯವಸ್ಥೆಯನ್ನು ಅನ್ವಯಿಸಬೇಕು ಎಂಬುದನ್ನು ನಾವು ಚರ್ಚಿಸುವುದಿಲ್ಲ ಏಕೆಂದರೆ ಅದು ಸ್ಪಷ್ಟವಾಗಿದೆ. ಇದು ಶರಿಯಾ ಕಾನೂನು, ಅಷ್ಟೇ” ಎಂದು ಹಾಶಿಮಿ ಹೇಳಿದ್ದಾರೆ.
ದೇಶದ ಮೇಲ್ವಿಚಾರಣೆ ನೋಡಿಕೊಳ್ಳಲಿದೆ ಕೌನ್ಸಿಲ್
ಹಾಶಿಮಿ ಪ್ರಕಾರ ಒಂದು ಕೌನ್ಸಿಲ್ ದೇಶದ ದಿನನಿತ್ಯದ ಚಟುವಟಿಕೆಯ ಮೇಲ್ವಿಚಾರಣೆ ಮಾಡುತ್ತದೆ. ತಾಲಿಬಾನ್‌ನ ಅತ್ಯುನ್ನತ ನಾಯಕ ಹೈಬತುಲ್ಲಾ ಅಖುಂಡಜಾದ ಒಟ್ಟಾರೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. 1996 ರಿಂದ 2001 ರವರೆಗೆ ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ಹೇಗೆ ಆಳಿದರು ಎಂಬಂತೆಯೇ ಇದು ಇರಲಿದೆ. ಆ ಸಮಯದಲ್ಲಿ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ನೆರಳಿನಲ್ಲಿ ಹಿನ್ನೆಲೆಯಲ್ಲಿ ನಿಂತು ದೈನಂದಿನ ಆಡಳಿತವು ಕೌನ್ಸಿಲ್ ನ ಜವಾಬ್ದಾರಿ ಆಗಿತ್ತು.
ಯಾರಾಗಲಿದ್ದಾರೆ ಅಧ್ಯಕ್ಷ?
ಗುಂಪಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅಬ್ದುಲ್ ಘನಿ ಬರದಾರ್ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಆದರೆ ಹಾಶಿಮಿ, ಹೈಬತುಲ್ಲಾ ಅಖುಂಡಜಾದ ಮೂವರು ಸಹಚರರಲ್ಲಿ ಯಾರಾದರೂ ಅಧ್ಯಕ್ಷರ ಪಾತ್ರವನ್ನು ವಹಿಸಬಹುದು ಎಂದು ಹೇಳಿದರು. ಬರದಾರ್ ಹೊರತಾಗಿ, ಇತರ ಆಕಾಂಕ್ಷಿಗಳು ಅಂದರೆ ತಾಲಿಬಾನ್ ಅನ್ನು ಸ್ಥಾಪಿಸಿದ ಮುಲ್ಲಾ ಒಮರ್ ಅವರ ಮಗ ಮೌಲವಿ ಯಾಕೂಬ್ ಮತ್ತು ಪ್ರಬಲ ಉಗ್ರ ಹಕ್ಕಾನಿ ನೆಟ್ವರ್ಕ್ ನಾಯಕ ಸಿರಾಜುದ್ದೀನ್ ಹಕ್ಕಾನಿ.
ತಾಲಿಬಾನ್‌ಗಳಿಗೆ ಪೈಲಟ್‌ಗಳಿಲ್ಲ
ತಾಲಿಬಾನ್ ತಂಡವು ಪೈಲಟ್‌ಗಳನ್ನು ಹೊಂದಿಲ್ಲದ ಕಾರಣ ಅಫ್ಘಾನ್ ಸರ್ಕಾರದಲ್ಲಿ ಕೆಲಸ ಮಾಡಿದ ಪೈಲಟ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ. ವಿದೇಶಿ ಪಡೆಗಳು ಹಿಂತೆಗೆದುಕೊಂಡ ನಂತರ, ತಾಲಿಬಾನ್ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ವಶಪಡಿಸಿಕೊಂಡಿದ್ದು ಅವರಲ್ಲಿ ಪೈಲಟ್ ಗಳಿಲ್ಲ ಹಾಗಾಗಿ ತಾಲಿಬಾನ್ ಪಡೆಗೆ ಸೇರಲು ಅನೇಕ ಪೈಲಟ್‌ಗಳೊಂದಿಗೆ ಸಂಪರ್ಕದಲ್ಲಿದ್ದಾರೆ. “ನಮ್ಮ ಪಡೆಗೆ ಸೇರಲು, ಅವರ ಸಹೋದರರನ್ನು ನಮ್ಮಲ್ಲಿಗೆ ಕರೆತರಲು ಕೇಳಿದ್ದೇವೆ. ನಾವು ಅವರಲ್ಲಿ ಹಲವರಿಗೆ ಕರೆ ಮಾಡಿದೆವು. ಅವರಿಗೆ ಕರೆ ಮಾಡಲು ಮತ್ತು ಅವರ ಕೆಲಸಕ್ಕೆ ಆಹ್ವಾನಿಸಲು (ಇತರರ) ಸಂಖ್ಯೆಗಳನ್ನು ಹುಡುಕುತ್ತಿದ್ದೇವೆ” ಎಂದು ಹಾಶಿಮಿ ಹೇಳಿದರು.
ಹೊಸ ರಾಷ್ಟ್ರೀಯ ಶಕ್ತಿ
ವಾಯುಪಡೆಯ ಹೊರತಾಗಿ ತಾಲಿಬಾನ್ ತಮ್ಮ ಸದಸ್ಯರು ಮತ್ತು ಅಫ್ಘಾನ್ ಸೈನಿಕರನ್ನು ಒಳಗೊಂಡಂತೆ ಹೊಸ ರಾಷ್ಟ್ರೀಯ ಪಡೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ. ಅವರಲ್ಲಿ ಹೆಚ್ಚಿನವರು ಟರ್ಕಿ ಮತ್ತು ಜರ್ಮನಿ ಮತ್ತು ಇಂಗ್ಲೆಂಡ್‌ನಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಆದ್ದರಿಂದ ನಾವು ಅವರ ಸ್ಥಾನಕ್ಕೆ ಮರಳಲು ಅವರೊಂದಿಗೆ ಮಾತನಾಡುತ್ತೇವೆ. ಖಂಡಿತವಾಗಿಯೂ ನಾವು ಸೈನ್ಯದಲ್ಲಿ ಕೆಲವು ಸುಧಾರಣೆಗಳನ್ನು ಹೊಂದಲು ಕೆಲವು ಬದಲಾವಣೆಗಳನ್ನು ಹೊಂದಿರುತ್ತೇವೆ, ಆದರೆ ಇನ್ನೂ ನಮಗೆ ಅವರ ಅಗತ್ಯವಿದೆ ಮತ್ತು ನಮ್ಮನ್ನು ಸೇರಲು ಅವರನ್ನು ಕರೆಸಿಕೊಳ್ಳುತ್ತದೆ ಹಾಶಿಮಿ ರಾಯಿಟರ್ಸ್‌ಗೆ ಹೇಳಿದರು.
ಇದನ್ನೂ ಓದಿ:ಅಫ್ಘಾನಿಸ್ತಾನದ 4 ಕಮಾಂಡರ್ಗಳನ್ನು ಜನರೆದುರೇ ನೇಣಿಗೇರಿಸಿದ ತಾಲಿಬಾನ್; ಇದೇನಾ ಶಾಂತಿ ಸ್ಥಾಪನೆ?
ಇದನ್ನೂ ಓದಿ:ತಾಲಿಬಾನ್ ಬರುತ್ತಿದೆ, ಸಹಾಯ ಮಾಡಿ ಎಂದು ಕಣ್ಣೀರಿಟ್ಟು ಅಮೆರಿಕ ಸೇನೆಯಲ್ಲಿ ವಿನಂತಿಸಿದ ಅಫ್ಘಾನಿಸ್ತಾನದ ಮಹಿಳೆಯರು
(There will be no democratic system at Afghanistan says Taliban leader Waheedullah Hashimi)