‘ಅಫ್ಘಾನ್ಗೆ ನೆರವು ನೀಡುವುದನ್ನು ನಿಲ್ಲಿಸುವ ಮುನ್ನ ಯೋಚಿಸಿ..‘ -ಪಾಕ್ ಪ್ರಧಾನಿ ಇಮ್ರಾನ್ ಖಾನ್
ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲಸಬೇಕು ಎಂಬುದು ಪಾಕಿಸ್ತಾನದ ಬಹುದೊಡ್ಡ ಆಶಯ. ಆದರೆ ಹೊರಗಿನಿಂದ ಆ ದೇಶವನ್ನು ಈಗ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಇಸ್ಲಮಾಬಾದ್: ಅಫ್ಘಾನಿಸ್ತಾನವನ್ನು ಹೊರಗಿನವರಿಂದ ಯಾರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ. ಹಾಗೇ, ತಾಲಿಬಾನಿಗಳು ತಾವು ನೀಡಿದ ಭರವಸೆಗಳನ್ನೆಲ್ಲ ಸರಿಯಾಗಿ ಈಡೇರಿಸಬೇಕು. ನೆರೆ ರಾಷ್ಟ್ರ ಅಫ್ಘಾನಿಸ್ತಾನಕ್ಕೆ ನಾವು ಸದಾ ಸಹಕಾರ ನೀಡುತ್ತೇವೆ ಎಂದಿದ್ದಾರೆ. ಇಂದಿನ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಅಫ್ಘಾನಿಸ್ತಾಕ್ಕೆ ಮಾನವೀಯ ನೆರವು ಅಗತ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಇದಕ್ಕೆ ಸಜ್ಜಾಗಬೇಕು ಎಂದೂ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲಸಬೇಕು ಎಂಬುದು ಪಾಕಿಸ್ತಾನದ ಬಹುದೊಡ್ಡ ಆಶಯ. ಆದರೆ ಹೊರಗಿನಿಂದ ಆ ದೇಶವನ್ನು ಈಗ ನಿಯಂತ್ರಿಸಲು ಸಾಧ್ಯವಿಲ್ಲ. ಅಫ್ಘಾನ್ನಲ್ಲಿ ಈಗ ಒಂದು ಹೊಸದಾದ ವಾಸ್ತವ ಸೃಷ್ಟಿಯಾಗಿದೆ. ಅಲ್ಲಿದ್ದ ಹಿಂದಿನ ಸರ್ಕಾರ ಬಹುತೇಕ ವಿದೇಶಿ ಆರ್ಥಿಕ ನೆರವನ್ನೇ ಅವಲಂಬಿಸಿತ್ತು. ಈಗ ತಾಲಿಬಾನಿಗಳ ಆಡಳಿತ ಶುರುವಾದ ತಕ್ಷಣ ನೆರವನ್ನು ನಿಲ್ಲಿಸಿದರೆ ಅಲ್ಲಿನ ಜನರಿಗೆ ಸಂಕಷ್ಟವಾಗುತ್ತದೆ. ಈ ಬಗ್ಗೆ ಯೋಚಿಸಬೇಕು ಎಂದಿದ್ದಾರೆ. ಇಂದಿನ ಶಾಂಘೈ ಸಹಕಾರ ಸಭೆಯಲ್ಲಿ ರಷ್ಯಾ, ಚೀನಾ, ಖಜಕಿಸ್ತಾನ್, ಖರ್ಜಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಭಾರತ, ಪಾಕಿಸ್ತಾನಗಳು ಪಾಲ್ಗೊಂಡಿದ್ದವು.
ಶಾಂಘೈ ಸಹಕಾರ ಸಂಘಟೆಯ ಇಂದಿನ ಶೃಂಗಸಭೆಯಲ್ಲಿ ಅಫ್ಘಾನಿಸ್ತಾನದ ಬೆಳವಣಿಗೆಗಳೇ ಪ್ರಮುಖ ಚರ್ಚಾ ವಿಷಯಗಳಾಗಿದ್ದವು. ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ, ಅಫ್ಘಾನ್ನಲ್ಲಿ ಆಡಳಿತಕ್ಕೆ ಬಂದ ತಾಲಿಬಾನಿಗಳ ಸರ್ಕಾರ ಅಂತರ್ಗತವಾಗಿಲ್ಲ. ಎಲ್ಲರನ್ನೂ ಒಳಗೊಂಡು ರಚಿಸಿದ್ದಲ್ಲ. ಶಾಂತಿ, ಭದ್ರತೆಗೆ ತೀವ್ರವಾದ ದೊಡ್ಡ ಸವಾಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 9 ವರ್ಷದ ದಲಿತ ಬಾಲಕಿ ಲೈಂಗಿಕ ದೌರ್ಜನ್ಯದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ: ದೆಹಲಿ ಪೊಲೀಸ್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತು..