ಈಜಿಪ್ಟ್​​ನಲ್ಲಿ ಹಳಿತಪ್ಪಿದ ರೈಲು, ಇಬ್ಬರು ಸಾವು, 16 ಜನರಿಗೆ ಗಾಯ

ಪ್ರಯಾಣಿಕರ ರೈಲು ಹಳಿತಪ್ಪಿ ಇಬ್ಬರು ಸಾವನ್ನಪ್ಪಿದ್ದು, 16 ಜನರು ಗಾಯಗೊಂಡಿರುಯವ ಘಟನೆ ಈಜಿಪ್ಟ್​​ನ ಕೈರೋ ನಗರದ ಬಳಿ ನಡೆದಿದೆ.

ಈಜಿಪ್ಟ್​​ನಲ್ಲಿ ಹಳಿತಪ್ಪಿದ ರೈಲು, ಇಬ್ಬರು ಸಾವು, 16 ಜನರಿಗೆ ಗಾಯ
ಈಜಿಪ್ಟ್​​ ಹಳಿತಪ್ಪಿದ ರೈಲು
Follow us
ವಿವೇಕ ಬಿರಾದಾರ
|

Updated on: Mar 08, 2023 | 7:07 AM

ಕೈರೋ: ಪ್ರಯಾಣಿಕರ ರೈಲು (Train) ಹಳಿತಪ್ಪಿ ಇಬ್ಬರು ಸಾವನ್ನಪ್ಪಿದ್ದು, 16 ಜನರು ಗಾಯಗೊಂಡಿರುಯವ ಘಟನೆ ಈಜಿಪ್ಟ್​​ನ (Egypt) ಕೈರೋ (Cairo) ನಗರದ ಬಳಿ ನಡೆದಿದೆ. ನಿನ್ನೆ (ಮಾ.7) ರಂದು ರೈಲು ಈಜಿಪ್ಟ್ ರಾಜಧಾನಿ ರಾಮ್ಸೆಸ್ ನಿಲ್ದಾಣದಿಂದ ಮೆನೌಫ್ ನಗರಕ್ಕೆ ಪ್ರಯಾಣಿಸುತ್ತಿತ್ತು. ರೈಲು ಕೈರೋದ ಕಲಿಯುಬ್ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಹಳಿತಪ್ಪಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ 16 ಜನರಿಗೆ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು ಅಪಘಾತಕ್ಕೆ ಕಾರಣವೇನೆಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ರು ತಿಳಿಸಿದ್ದಾರೆ. ಈಜಿಪ್ಟ್‌ನಲ್ಲಿನ ವರ್ಷಕ್ಕೆ ನೂರಾರು ಅಪಘಾತಗಳು ಸಂಭವಿಸುತ್ತವೆ. ಹೆಚ್ಚಿನವು ಲೆವೆಲ್ ಕ್ರಾಸಿಂಗ್‌ಗಳಲ್ಲಿ ಮತ್ತು ಚಾಲಕನ ನಿರ್ಲಕ್ಷ್ಯದಿಂದ ಅಪಘಾತಸಂಭವಿಸುತ್ತವೆ. ಮುಖ್ಯವಾಗಿ ಸಿಗ್ನಲ್‌ಗಳನ್ನು ಗಮನಿಸುವಲ್ಲಿ ವಿಫಲತೆ ಅಥವಾ ನಿಯಂತ್ರಣ ಕೊಠಡಿ ನಿರ್ವಾಹಕರು ಮತ್ತು ಚಾಲಕರ ನಡುವಿನ ಸಂವಹನದ ಕೊರತೆಯಿಂದಲೂ ಅಪಘಾತವಾಗುತ್ತದೆ.

ಈಜಿಪ್ಟ್‌ನಲ್ಲಿ ರೈಲ್ವೆ ಪ್ರಯಾಣಿಕರು ನಿಯಮಿತವಾಗಿ ಸಮಯ ವಿಳಂಬ, ಜನದಟ್ಟಣೆ ಮತ್ತು ತಾಂತ್ರಿಕ ದೋಷಗಳನ್ನು ಅನುಭವಿಸುತ್ತಾರೆ. ಸಾವಿರಾರು ವ್ಯಾಪಾರಿಗಳು ರೈಲುಗಳು ಮತ್ತು ನಿಲ್ದಾಣಗಳಲ್ಲಿ ಆಹಾರ, ಪಾನೀಯಗಳು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ