Bill Gates: ಭಾರತದ ಪ್ರವಾಸದ ಬಗ್ಗೆ ಮೆಚ್ಚುಗೆಯ ಮಹಾಪೂರವನ್ನೇ ಸುರಿಸಿದ ವಿಶ್ವದ ಶ್ರೀಮಂತ ವ್ಯಕ್ತಿ ಬಿಲ್ಗೇಟ್ಸ್
Bill Gates India Visit: ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ಗೇಟ್ಸ್ ಭಾರತ ಪ್ರವಾಸವನ್ನು ಮುಗಿಸಿ ತವರಿಗೆ ತೆರಳಿದ್ದಾರೆ. ಭಾರತದ ಪ್ರವಾಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಬಿಲ್ಗೇಟ್ಸ್ ಮತ್ತೆ ಭಾರತಕ್ಕೆ ಆಗಮಿಸಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ.
ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ಗೇಟ್ಸ್ ಭಾರತ ಪ್ರವಾಸವನ್ನು ಮುಗಿಸಿ ತವರಿಗೆ ತೆರಳಿದ್ದಾರೆ. ಭಾರತದ ಪ್ರವಾಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಬಿಲ್ಗೇಟ್ಸ್ ಮತ್ತೆ ಭಾರತಕ್ಕೆ ಆಗಮಿಸಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ. ಭಾರತದ ಪ್ರವಾಸದ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ಬಿಲ್ಗೇಟ್ಸ್ ಕಳೆದ ಕೆಲ ದಿನಗಳಲ್ಲಿ ಭಾರತದಲ್ಲಿ ಸುಂದರವಾದ ದಿನಗಳನ್ನು ಕಳೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರ ಭೇಟಿ ಹಾಗೂ ಬೆಂಗಳೂರು ನಗರಕ್ಕೆ ಭೇಟಿ ನೀಡಿರುವ ವಿಚಾರವನ್ನೂ ಖುಷಿಯಿಂದ ಪೋಸ್ಟ್ ಮಾಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಾತನಾಡುವುದು ಸಂತಸದ ವಿಚಾರ ಹಾಗೂ ಭಾರತವು ಆರೋಗ್ಯ, ಆರ್ಥಿಕ ಒಳಗೊಳ್ಳುವಿಕೆ, ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಡಿಜಿಟಲೈಸೇಷನ್ನಲ್ಲಿ ಹೇಗೆ ಮುನ್ನುಗ್ಗುತ್ತಿದೆ ಎಂಬುದನ್ನು ಚಿರ್ಚಿಸಿರುವುದು ಖುಷಿ ತಂದಿದೆ ಎಂದು ಹೇಳಿಕೊಂಡಿದ್ದಾರೆ.
ಮತ್ತಷ್ಟು ಓದಿ: Modi Bill Gates Meet: ಭಾರತದ ಪ್ರಗತಿ ಎಂದಿಗೂ ಆಶಾವಾದಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಬಿಲ್ ಗೇಟ್ಸ್
ನನ್ನ ಭಾರತ ಪ್ರವಾಸವು ಮುಂಬೈನಿಂದ ಆರಂಭವಾಗಿ ಅಲ್ಲಿನ ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಟಿಬಿ ರೋಗಿಗಳ ಜತೆ ಸಮಾಲೋಚನೆ ನಡೆಸಿದೆ, ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಟಿಬಿ ಪ್ರಕರಣವನ್ನು ಹೊಂದಿದೆ ಹಾಗಾಗಿ ಇದು ತುಂಬಾ ಪ್ರಮುಖವಾಗಿದೆ ಎಂದು ಗೇಟ್ಸ್ ಹೇಳಿದ್ದಾರೆ.
ಅಯ್ಯೋ ಶ್ರದ್ಧಾ ಅವರನ್ನು ಕೂಡ ಭೇಟಿ ಮಾಡಿರುವುದನ್ನು ಉಲ್ಲೇಖಿಸಿರುವ ಬಿಲ್ಗೇಟ್ಸ್ ನಗರ ಆರೋಗ್ಯಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಅಯ್ಯೋ ಶ್ರದ್ಧಾ ನನ್ನನ್ನು ಭೇಟಿ ಮಾಡಿದೆ ಅವರು ಅತ್ಯುತ್ತಮ ಹಾಸ್ಯಗಾರ್ತಿ ಎಂದರು. ಭಾರತದಲ್ಲಿ ಟಿಬಿ ಪ್ರಕರಣವನ್ನು ತಗ್ಗಿಸುವ ಕುರಿತು ಅತ್ಯುತ್ತಮ ಸಂವಾದ ನಡೆಸಿದೆ. ಹಾಗೆಯೇ ಹೊಸ ವಿಚಾರಧಾರೆಗಳೊಂದಿಗೆ ನಾಯಕರು ಹೇಗೆ ಬರುತ್ತಿದ್ದಾರೆ ಎನ್ನುವ ಕುರಿತು ಚರ್ಚೆ ನಡೆಸಲಾಯಿತು ಎಂದರು.
I just returned from my visit to India, and I can’t wait to go back again. I love visiting India because every trip is an incredible opportunity to learn. Here are some photos from my trip and some of the stories behind them: https://t.co/We6PtJWDnp pic.twitter.com/QxZW7gfUmI
— Bill Gates (@BillGates) March 7, 2023
ಇದಲ್ಲದೆ ಬ್ರಿಜ್ಲೋವರ್ ಅನ್ಶುಲ್ ಭಟ್ ಅವರನ್ನು ಭೇಟಿಯಾಗಿರು ಕುರಿತು ಕೂಡ ಅವರು ಮಾತನಾಡಿದ್ದಾರೆ, ಇವರು 13ನೇ ವಯಸ್ಸಿಗೆ ವರ್ಲ್ಡ್ ಯೂಥ್ ಬ್ರಿಡ್ಜ್ ಚಾಂಪಿಯನ್ಶಿಪ್ನಲ್ಲಿ ಬಂಗಾರ ಪದಕ ಗೆದ್ದು ಅತಿ ಕಡಿಮೆ ವಯಸ್ಸಿನಲ್ಲಿ ಪದಕ ಗೆದ್ದ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಅತಿವೃಷ್ಟಿ ಅನಾವೃಷ್ಟಿ ಹಾಗೂ ಪ್ರತಿಕೂಲ ಹವಾಮಾನದಲ್ಲಿಯೂ ಇರಬಹುದಾದ ಬೆಳೆಗಳ ಕುರಿತ ಸಂಶೋಧನೆಯನ್ನು ಪರಿಶೀಲಿಸಿದೆ ಎಂದು ಹೇಳಿದ್ದಾರೆ. ಝೀರೋ ಎಮಿಷನ್ ಹಾಗೂ ಶಬ್ದರಹಿತವಾದ ಮಹೀಂದ್ರಾ ಟ್ರಿಯೋ ರಿಕ್ಷಾ ಚಾಲನೆ ಮಾಡಿದ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:20 am, Wed, 8 March 23