ಭಿಕ್ಷೆ ಬೇಡ್ತಿದ್ದ ಮಂಗಳಮುಖಿ ನಿಶಾಗೆ ಇದೆ ಪಾಕಿಸ್ತಾನದ ನ್ಯಾಯಧೀಶರಾಗುವ ನಿಶಾನೆ
ಪಾಕಿಸ್ತಾನದ ಮೊದಲ ಮಂಗಳಮುಖಿ ನ್ಯಾಯಧೀಶರಾಗಬೇಕು ಎನ್ನುವುದು ನನ್ನ ಗುರಿ ಮತ್ತು ದೊಡ್ಡ ಕನಸು ಎಂದ ನಿಶಾ ರಾವ್.
ಹೊಟ್ಟೆ ಪಾಡಿಗಾಗಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ 28 ವರ್ಷದ ಮಂಗಳಮುಖಿ ನಿಶಾ ರಾವ್ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದೆ ಪಾಕಿಸ್ತಾನದ ನ್ಯಾಯಾಧೀಶರಾಗಬೇಕೆಂಬ ಕನಸನ್ನು ಕಂಡಿದ್ದಾರೆ.
ಭಿಕ್ಷೆಯಲ್ಲಿ ಬಂದ ಹಣವನ್ನು ಸಂಗ್ರಹಿಸಿ ತನ್ನ ಓದಿಗೆ ಬಳಸಿಕೊಂಡು ಕಠಿಣ ಶ್ರಮದ ಪ್ರತಿಫಲದಿಂದ ವಕೀಲರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಅದರಂತೆ ಪಾಕಿಸ್ತಾನದ ಮೊದಲ ಮಂಗಳಮುಖಿ ನ್ಯಾಯಧೀಶರಾಗಬೇಕು ಎನ್ನುವುದು ನನ್ನ ಗುರಿ ಮತ್ತು ದೊಡ್ಡ ಕನಸು ಎಂದು ನಿಶಾ ತಿಳಿಸಿದ್ದಾರೆ.
ದಕ್ಷಿಣ ಏಷ್ಯಾದ ಹೆಚ್ಚಿನ ಮಂಗಳಮುಖಿಯರು ಅಸಮಾನತೆ ಮತ್ತು ಅನ್ಯಾಯವನ್ನು ಅನುಭವಿಸುತ್ತ ಭಿಕ್ಷೆ ಬೇಡುತ್ತಿದ್ದಾರೆ. ಇಂತಹದೊಂದು ಪರಿಸ್ಥಿತಿಯಲ್ಲಿಯೇ ಬೆಂದು ವಕೀಲರಾಗಿದ್ದಾರೆ ನಿಶಾ. ತಾನು ಇತರರಿಗಿಂತ ಭಿನ್ನವಾಗಿದ್ದೇನೆಂದು ಅರಿತ ನಿಶಾ 18ನೇ ವಯಸ್ಸಿನಲ್ಲಿ ಮನೆ ತೊರೆದು ಹೋಗಿದ್ದಳು. ನಂತರ ಅವಳ ಸಮುದಾಯ ಆಶ್ರಯ ನೀಡಿತ್ತು.
ಈಗಾಗಲೇ ನಿಶಾ ಸುಮಾರು 50 ಪ್ರಕರಣಗಳ ವಿರುದ್ಧ ಹೋರಾಡಿ, ಮಂಗಳಮುಖಿಯರ ಹಕ್ಕುಗಳಿಗಾಗಿ ಕೆಲಸ ಮಾಡುವ ಟ್ರಾನ್ಸ್ ರೈಟ್ಸ್ ಸರ್ಕಾರೇತರ ಸಂಸ್ಥೆಯೊಂದಿಗೆ ಸಂಬಂಧ ಇರಿಸಿಕೊಂಡು ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
Published On - 12:48 pm, Fri, 27 November 20