Turkey Earthquake: ಮನೆ, ತನ್ನವರನ್ನು ಕಳೆದುಕೊಂಡು ಬೀದಿ ಪಾಲಾದ ಮುದ್ದು ಮಕ್ಕಳು, ಆ ಭಯಾನಕ ಘಟನೆ ಬಿಟ್ಟೂ ಬಿಡದೆ ಕಾಡ್ತಿದೆ

|

Updated on: Feb 16, 2023 | 12:35 PM

ನಿದ್ರೆಯಲ್ಲೂ ಭಯಾನಕ ಘಟನೆಯ ಕನವರಿಕೆ, ಎಚ್ಚರವಾದರೆ ತಾನು ಎಲ್ಲಿದ್ದೇನೆ, ಪೋಷಕರೆಲ್ಲಿ, ನನ್ನ ಮನೆ ಎಲ್ಲಿ, ಇದು ಕನಸೋ ಅಥವಾ ನಿಜವಾಗಿ ನಡೆಯುತ್ತಿರುವುದೋ ಎಂಬುದು ತಿಳಿಯದೆ ಮಕ್ಕಳು ಕಷ್ಟ ಅನುಭವಿಸುತ್ತಿದ್ದಾರೆ.

Turkey Earthquake: ಮನೆ, ತನ್ನವರನ್ನು ಕಳೆದುಕೊಂಡು ಬೀದಿ ಪಾಲಾದ ಮುದ್ದು ಮಕ್ಕಳು, ಆ ಭಯಾನಕ ಘಟನೆ ಬಿಟ್ಟೂ ಬಿಡದೆ ಕಾಡ್ತಿದೆ
ಬಾಲಕಿ
Image Credit source: NDTV
Follow us on

ನಿದ್ರೆಯಲ್ಲೂ ಭಯಾನಕ ಘಟನೆಯ ಕನವರಿಕೆ, ಎಚ್ಚರವಾದರೆ ತಾನು ಎಲ್ಲಿದ್ದೇನೆ, ಪೋಷಕರೆಲ್ಲಿ, ನನ್ನ ಮನೆ ಎಲ್ಲಿ, ಇದು ಕನಸೋ ಅಥವಾ ನಿಜವಾಗಿ ನಡೆಯುತ್ತಿರುವುದೋ ಎಂಬುದು ತಿಳಿಯದೆ ಮಕ್ಕಳು ಕಷ್ಟ ಅನುಭವಿಸುತ್ತಿದ್ದಾರೆ. ಟರ್ಕಿಯಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ 41 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೀವವನ್ನು ಅಂಗೈಲಿ ಹಿಡಿದು ಬದುಕಿ ಬಂದವರು ಮನೆ, ತನ್ನವರನ್ನು ಕಳೆದುಕೊಂಡು ದಿನದೂಡುತ್ತಿದ್ದಾರೆ.

ಹಾಗೆಯೇ ನಿರಾಶ್ರಿತರಾಗಿರುವ ಮಕ್ಕಳು ಒಂದೆಡೆ ಪೋಷಕರು ಬದುಕುಳಿದಿದ್ದಾರಾ ಇಲ್ಲವೇ ಎಂಬುದೂ ತಿಳಿದಿಲ್ಲ, ಆ ಭಯಾನಕ ಘಟನೆಯಿಂದ ಹೊರಬರಲಾರದೆ ಕಷ್ಟ ಪಡುತ್ತಿದ್ದಾರೆ. ಮಕ್ಕಳು ಅಳುತ್ತಿದ್ದಾರೆ, ಮಲಗಲು ಕಷ್ಟ ಪಡುತ್ತಿದ್ದಾರೆ, ತನ್ನವರು ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ, ಊಟವನ್ನೂ ಮಾಡುತ್ತಿಲ್ಲ ಎಂದು ವೈದ್ಯೆಯೊಬ್ಬರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: Turkey Earthquake: ಟರ್ಕಿ ಭೂಕಂಪ; ಭಾರತೀಯರು ಅವಶೇಷಗಳಡಿ ಸಿಲುಕಿದ್ದಾರೆಯೇ? ರಾಯಭಾರಿ ನೀಡಿದ ಮಾಹಿತಿ ಇಲ್ಲಿದೆ

ಮಕ್ಕಳು ಇನ್ನೂ ಭೂಕಂಪದ ಆತಂಕದಿಂದ ಹೊರ ಬಂದಿಲ್ಲ, ಸುರಕ್ಷಿತ ವಾತಾವರಣದಲ್ಲಿದ್ದರೆ ಈ ಭಯ ಕ್ರಮೇಣವಾಗಿ ಕಡಿಮೆಯಾಗುತ್ತದೆ.
ಮಕ್ಕಳು ನಿಜವಾಗಿಯೂ ತುಂಬಾ ಬುದ್ಧಿವಂತರು, ಆದರೆ ಈ ರೀತಿಯ ಆಘಾತವಾದಾಗ ಎಲ್ಲರೂ ಭಯಗೊಳ್ಳುವುದು ಸಹಜ, ಕಾಲ ಕ್ರಮೇಣ ಅವರು ಸಹಜ ಸ್ಥಿತಿಗೆ ಮರುಳುತ್ತಾರೆ.

ಬದುಕುಳಿದವರು ಅನುಭವಿಸಿದ ಆಘಾತ ಪ್ರಮಾಣವು ಅಗಾಧವಾದ್ದು, ಕುಟುಂಬಸ್ಥರು ಎಲ್ಲಿದ್ದಾರೆ ಎಂದು ತಿಳಿಯಲಾಗದೆ ಗೊಂದಲದಲ್ಲಿದ್ದಾರೆ, ಇದು ಅಸ್ವಸ್ಥತೆ, ಪ್ಯಾನಿಕ್ ಅಟ್ಯಾಕ್​ಗಳಿಗೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 12:32 pm, Thu, 16 February 23