Twitter Verified: ಕೆಲವೇ ಗಂಟೆಗಳಲ್ಲಿ 225,000 ಖಾತೆಗಳನ್ನು ಅನ್​ಫಾಲೋ ಮಾಡಿದ ಟ್ವಿಟ್ಟರ್, ನಾಯಿ ಜಾಗದಲ್ಲಿ ಮತ್ತೆ ಬಂತು ನೀಲಿ ಹಕ್ಕಿ

ಟ್ವಿಟ್ಟರ್(Twitter) ದೊಡ್ಡ ಪ್ರಮಾಣದಲ್ಲಿ ಎಲ್ಲಾ ಬಳಕೆದಾರರನ್ನು ಅನ್‌ಫಾಲೋ ಮಾಡಲು ಪ್ರಾರಂಭಿಸಿದೆ. ಚೆಕ್‌ಮಾರ್ಕ್‌ಗಳನ್ನು ಹೊಂದಿರುವ ಆದರೆ ಟ್ವಿಟರ್ ಬ್ಲೂ ಸದಸ್ಯತ್ವಕ್ಕಾಗಿ ಪಾವತಿಸದ ಎಲ್ಲ ಬಳಕೆದಾರರನ್ನು ಟ್ವಿಟರ್ ಸಾಮೂಹಿಕವಾಗಿ ಅನ್‌ಫಾಲೋ ಮಾಡಲು ಪ್ರಾರಂಭಿಸಿದೆ.

Twitter Verified: ಕೆಲವೇ ಗಂಟೆಗಳಲ್ಲಿ 225,000 ಖಾತೆಗಳನ್ನು ಅನ್​ಫಾಲೋ ಮಾಡಿದ ಟ್ವಿಟ್ಟರ್, ನಾಯಿ ಜಾಗದಲ್ಲಿ ಮತ್ತೆ ಬಂತು ನೀಲಿ ಹಕ್ಕಿ
ಟ್ವಿಟ್ಟರ್
Follow us
ನಯನಾ ರಾಜೀವ್
|

Updated on: Apr 07, 2023 | 9:37 AM

ಟ್ವಿಟ್ಟರ್(Twitter) ದೊಡ್ಡ ಪ್ರಮಾಣದಲ್ಲಿ ಎಲ್ಲಾ ಬಳಕೆದಾರರನ್ನು ಅನ್‌ಫಾಲೋ ಮಾಡಲು ಪ್ರಾರಂಭಿಸಿದೆ. ಚೆಕ್‌ಮಾರ್ಕ್‌ಗಳನ್ನು ಹೊಂದಿರುವ ಆದರೆ ಟ್ವಿಟರ್ ಬ್ಲೂ ಸದಸ್ಯತ್ವಕ್ಕಾಗಿ ಪಾವತಿಸದ ಎಲ್ಲ ಬಳಕೆದಾರರನ್ನು ಟ್ವಿಟರ್ ಸಾಮೂಹಿಕವಾಗಿ ಅನ್‌ಫಾಲೋ ಮಾಡುತ್ತಿದೆ.  ಟ್ವಿಟ್ಟರ್ ಕೆಲ ಸಮಯದಿಂದ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಒಂದೆರಡು ದಿನಗಳ ಹಿಂದೆ ಟ್ವಿಟ್ಟರ್ ಸಿಇಒ ಎಲಾನ್​ ಮಸ್ಕ್​ ಟ್ವಿಟ್ಟರ್ ಲೋಗೋದಿಂದ ನೀಲಿ ಹಕ್ಕಿಯನ್ನು ತೆಗೆದು ನಾಯಿ ಚಿತ್ರವನ್ನು ಹಾಕಿದ್ದರು. ಟ್ವಿಟ್ಟರ್ ಕೆಲವೇ ಗಂಟೆಗಳಲ್ಲಿ 225,000 ಖಾತೆಗಳನ್ನು ಅನ್​ಫಾಲೋ ಮಾಡಿದೆ.

ಕೆಲವು ಸಮಯದ ಹಿಂದೆ ಟ್ವಿಟರ್ 420,000 ಪರಿಶೀಲಿಸಿದ ಖಾತೆಗಳನ್ನು ಅನುಸರಿಸುತ್ತಿತ್ತು. ಎಲೋನ್ ಮಸ್ಕ್ ಟ್ವಿಟರ್ ಬ್ಲೂ ಪಾಲಿಸಿಯನ್ನು ತಂದ ನಂತರ, ಕಂಪನಿಯು ಏಪ್ರಿಲ್ 1 ರಿಂದ ಎಲ್ಲಾ ಪರಿಶೀಲಿಸಿದ ಖಾತೆಗಳನ್ನು ಮುಚ್ಚಲು ಮತ್ತು ಆ ಜನರ ಬ್ಲೂ ಟಿಕ್‌ಗಳನ್ನು ತೆಗೆದುಹಾಕುವ ಎಚ್ಚರಿಕೆ ನೀಡಿತ್ತು.

ನೀಲಿ ಸದಸ್ಯತ್ವವನ್ನು ಹೊಂದಿಲ್ಲದಿದ್ದರೆ ಖಾತೆಗಳನ್ನು ತೆಗೆದುಹಾಕಲಾಗುವುದು ಎಂದು ಟ್ವಿಟ್ಟರ್ ತಿಳಿಸಿತ್ತು. ಈ ಬ್ಲೂ ಟಿಕ್ ವಿಶೇಷ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ಸಾರ್ವಜನಿಕರು, ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಇತರೆ ವಲಯಗಳಲ್ಲಿ ಹೆಸರು ಮಾಡಿದವರನ್ನು ಟ್ವಿಟ್ಟರ್ ಪರಿಶೀಲನೆ ಮಾಡುತ್ತದೆ.

ಮತ್ತಷ್ಟು ಓದಿ: Twitter Logo: ಟ್ವಿಟ್ಟರ್ ಲೋಗೋ ಬದಲಾಯಿಸಿದ ಎಲಾನ್ ಮಸ್ಕ್​: ನೀಲಿ ಹಕ್ಕಿ ಬದಲು ನಾಯಿ ಚಿತ್ರ

ಟ್ವಿಟ್ಟರ್‌ನಲ್ಲಿ ಈ ನೀಲಿ ಟಿಕ್ ಎಂದರೆ ನಿಮ್ಮ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸಲಾಗಿದೆ ಮತ್ತು ನಕಲಿ ಅಲ್ಲ ಎಂದರ್ಥ, ಅಂತಹವರ ನಿಜವಾದ ಖಾತೆಯ ಬಗ್ಗೆ ಜನರಿಗೆ ತಿಳಿಯುವಂತೆ ಮತ್ತು ಯಾವುದೇ ನಕಲಿ ಖಾತೆಯೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಲು ಈ ಬ್ಲೂ ಟಿಕ್ ನೀಡಲಾಗಿದೆ.

ಟ್ವಿಟರ್‌ನಲ್ಲಿ ಲಕ್ಷಾಂತರ ಜನರು ಖಾತೆಗಳನ್ನು ಹೊಂದಿದ್ದಾರೆ. ಆದರೆ ಈ ಖಾತೆಗಳಲ್ಲಿ ಕೇವಲ 89 ಸಾವಿರ ಖಾತೆಗಳನ್ನು ಮಾತ್ರ ಪರಿಶೀಲಿಸಲಾಗಿದೆ. ಆದರೆ, ಶೀಘ್ರದಲ್ಲೇ ಈ ಬ್ಲೂ ಟಿಕ್ ಅನ್ನು ಸಾಮಾನ್ಯ ಜನರ ಖಾತೆಗೂ ಹಾಕಬಹುದು. ಇದಕ್ಕಾಗಿ ಟ್ವಿಟ್ಟರ್ ಕೆಲವು ಹೊಸ ನಿಯಮಗಳನ್ನು ಹೊರಡಿಸಿದೆ.

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನ ಹೊಸ ಮಾಲೀಕ ಎಲೋನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ಬ್ಲೂ ಟಿಕ್ ಬೆಲೆಯನ್ನು ಘೋಷಿಸಿದ್ದಾರೆ. ಎಲಾನ್ ಮಸ್ಕ್ ಅವರ ಪ್ರಕಟಣೆಯ ಪ್ರಕಾರ, ಟ್ವಿಟ್ಟರ್‌ನಲ್ಲಿನ ‘ಬ್ಲೂ ಟಿಕ್’ ತಿಂಗಳಿಗೆ $ 8 (ಸುಮಾರು 660 ರೂ.) ವೆಚ್ಚವಾಗುತ್ತದೆ. ಈ ಹಣವನ್ನು ಈಗಾಗಾಲೇ ಬ್ಲೂ ಟಿಕ್‌ ಹೊಂದಿರುವ ಟ್ವಿಟ್ಟರ್ ಬಳಕೆದಾರರು ಪಾವತಿಸಬೇಕು ಹಾಗೂ ಹೊಸದಾಗಿ ಟ್ವಿಟ್ಟರ್ ಖಾತೆಗೆ ಬ್ಲೂ ಟಿಕ್‌ ಪಡೆಯುವ ಟ್ವಿಟ್ಟರ್ ಬಳಕೆದಾರರು ಸಹ ಪಾವತಿಸಬೇಕಾಗುತ್ತದೆ.

ಹಾಗಾಗಿ ಎಲಾನ್ ಮಸ್ಕ್ ಮಂಗಳವಾರ ಟ್ವಿಟ್ಟರ್ ಬ್ಲೂನ ಹೊಸ ಆವೃತ್ತಿಯನ್ನು ಘೋಷಿಸಿದರು. ಇದರಲ್ಲಿ ಅವರು ಟ್ವಿಟ್ಟರ್‌ನ ಚಂದಾದಾರಿಕೆ ಸೇವೆಗೆ ತಿಂಗಳಿಗೆ 8 ಡಾಲರ್ ಶುಲ್ಕ ವಿಧಿಸಲು ಯೋಜಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ನೀಲಿ ಟಿಕ್ ಪಡೆಯುವುದು ಅಥವಾ ಪರಿಶೀಲಿಸುವುದು ಸುಲಭವಲ್ಲ. ಇದಕ್ಕಾಗಿ ಕೆಲವು ಪ್ರೊಫೈಲ್‌ಗಳಿವೆ. ಅವುಗಳಲ್ಲಿ ಒಂದು ನಿಮ್ಮದೇ ಆಗಿರಬೇಕು. ಈ ಪ್ರೊಫೈಲ್‌ಗಳ ಜೊತೆಗೆ, ಪ್ರೊಫೈಲ್ ಹೆಸರು, ಪ್ರೊಫೈಲ್ ಫೋಟೋ, ಇಮೇಲ್ ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ಕೆಲವು ವಿವರಗಳು ಮತ್ತು ಮುಖ್ಯವಾಗಿ ಖಾತೆಯು ಕನಿಷ್ಠ 6 ತಿಂಗಳವರೆಗೆ ಸಕ್ರಿಯವಾಗಿರಬೇಕು. ಈ ಎಲ್ಲಾ ವಿಷಯಗಳು ಪ್ರೊಫೈಲ್‌ಗೆ ಕಡ್ಡಾಯವಾಗಿದೆ.

ನೀವು ದೀರ್ಘಕಾಲದವರೆಗೆ ಟ್ವಿಟ್ಟರ್‍‌ನಲ್ಲಿ ಸಕ್ರಿಯವಾಗಿಲ್ಲದಿದ್ದರೆ, ನಿಮ್ಮ ನೀಲಿ ಟಿಕ್‌ನ್ನು ತೆಗೆದುಹಾಕಲಾಗುತ್ತದೆ. ಮತ್ತು ನಿಮಗೆ ಯಾವುದೇ ಸೂಚನೆ ನೀಡಲಾಗುವುದಿಲ್ಲ. ಸರ್ಕಾರದಿಂದ ಹುದ್ದೆಯನ್ನು ಪಡೆದಾಗ ಬ್ಲೂ ಟಿಕ್ ಕಂಡುಬಂದಿದೆ ಮತ್ತು ಪೋಸ್ಟ್ ಹೋದಾಗ ಅದನ್ನು ತೆಗೆದುಹಾಕಲಾಗುತ್ತದೆ. ನಿಮ್ಮ ಖಾತೆಯಿಂದ ಯಾವುದೇ ನೀತಿಯ ಪುನರಾವರ್ತಿತ ಉಲ್ಲಂಘನೆಯಿದ್ದರೂ ಸಹ ನೀಲಿ ಟಿಕ್ ತೆಗೆದುಹಾಕಲಾಗುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ