ಇಟಲಿಯ ಮೌಂಟ್ ಬ್ಲಾಂಕ್​​ನಲ್ಲಿ ಹಿಮಕುಸಿತ: ಇಬ್ಬರು ಸಾಹಸಿಗರ ಸಾವು

ಇಟಲಿಯ ಮೌಂಟ್ ಬ್ಲಾಂಕ್​​ನಲ್ಲಿ ಹಿಮಕುಸಿತವಾಗಿ ಇಬ್ಬರು ಸಾಹಸಿಗರು ಮೃತಪಟ್ಟಿದ್ದು, ಮತ್ತಿಬ್ಬರನ್ನ ರಕ್ಷಣೆ ಮಾಡಲಾಗಿದೆ. ಮೃತರು ಸುಮಾರು 10 ಸಾವಿರ ಅಡಿ ಎತ್ತರದ ಹಿಮಚ್ಛಾದಿತ ಶಿಖರ ಏರುವಾಗ ಸಾವಿಗೀಡಾಗಿದ್ದಾರೆ. ಈ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಹೆಲಿಕಾಪ್ಟರ್ ಬಳಸಿ ಇಬ್ಬರನ್ನು ರಕ್ಷಿಸಿದ್ದಾರೆ. ‘ಈರುಳ್ಳಿ’ಗಾಗಿ ಹರಸಾಹಸ..! ದೇಶಿಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಕೇಂದ್ರ ಸರ್ಕಾರ ಟರ್ಕಿಯಿಂದ ಸುಮಾರು 11 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಮುಂದಾಗಿದೆ. ಈಗಾಗ್ಲೇ ಈಜಿಪ್ಟ್​ನಿಂದ 6090 ಮೆಟ್ರಿಕ್ […]

ಇಟಲಿಯ ಮೌಂಟ್ ಬ್ಲಾಂಕ್​​ನಲ್ಲಿ ಹಿಮಕುಸಿತ: ಇಬ್ಬರು ಸಾಹಸಿಗರ ಸಾವು
sadhu srinath

|

Dec 02, 2019 | 11:59 AM

ಇಟಲಿಯ ಮೌಂಟ್ ಬ್ಲಾಂಕ್​​ನಲ್ಲಿ ಹಿಮಕುಸಿತವಾಗಿ ಇಬ್ಬರು ಸಾಹಸಿಗರು ಮೃತಪಟ್ಟಿದ್ದು, ಮತ್ತಿಬ್ಬರನ್ನ ರಕ್ಷಣೆ ಮಾಡಲಾಗಿದೆ. ಮೃತರು ಸುಮಾರು 10 ಸಾವಿರ ಅಡಿ ಎತ್ತರದ ಹಿಮಚ್ಛಾದಿತ ಶಿಖರ ಏರುವಾಗ ಸಾವಿಗೀಡಾಗಿದ್ದಾರೆ. ಈ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಹೆಲಿಕಾಪ್ಟರ್ ಬಳಸಿ ಇಬ್ಬರನ್ನು ರಕ್ಷಿಸಿದ್ದಾರೆ.

‘ಈರುಳ್ಳಿ’ಗಾಗಿ ಹರಸಾಹಸ..! ದೇಶಿಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಕೇಂದ್ರ ಸರ್ಕಾರ ಟರ್ಕಿಯಿಂದ ಸುಮಾರು 11 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಮುಂದಾಗಿದೆ. ಈಗಾಗ್ಲೇ ಈಜಿಪ್ಟ್​ನಿಂದ 6090 ಮೆಟ್ರಿಕ್ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದ್ದು, ಮತ್ತಷ್ಟು ಆಮದಿಗೆ ಕ್ರಮ ಕೈಗೊಳ್ಳಲಾಗಿದೆ.

ಪ್ರತಿಭಟನೆ ಹತ್ತಿಕ್ಕಲು ಹರಸಾಹಸ ಹಾಂಕಾಂಗ್​ನಲ್ಲಿ ಪ್ರತಿಭಟನೆ ಕಾವು ಮುಂದುವರಿದಿದ್ದು, ಪ್ರತಿಭಟನಾಕಾರರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ ಮುಂದುವರಿದಿದೆ. ಟಿಯರ್ ಗ್ಯಾಸ್ ಪ್ರಯೋಗದ ಮೂಲಕ ಗುಂಪು ಚದುರಿಸಲು ಪೊಲೀಸರು ಪರದಾಡುತ್ತಿದ್ದಾರೆ. ಕೆಲದಿನಗಳ ಹಿಂದೆ ನಿಯಂತ್ರಣಕ್ಕೆ ಬಂದಿದ್ದ ಪರಿಸ್ಥಿತಿ, ಇದೀಗ ಮತ್ತೆ ಹದಗೆಟ್ಟಿದೆ.

ಜನ್ಮ ನೀಡಿದ ಹಿಮಕರಡಿ ಅಮೆರಿಕದಲ್ಲಿ ಝೂ ಒಂದರಲ್ಲಿ ಥ್ಯಾಂಕ್ಸ್​ಗಿವಿಂಗ್ ಡೇ ದಿನವೇ ಹಿಮಕರಡಿಯೊಂದು ಮರಿಗೆ ಜನ್ಮ ನೀಡಿದೆ. ಇನ್ನು ಮರಿ ಕೂಡ ಆರೋಗ್ಯವಾಗಿದ್ದು, ಆರೈಕೆಗೆ ವಿಶೇಷ ಕಾಳಜಿ ವಹಿಸಲಾಗಿದೆ. ಕೆಲವೇ ದಿನಗಳಲ್ಲಿ ಹಿಮಕರಡಿ ಮರಿಯನ್ನ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada