AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಯಾಚಿನ್​ನಲ್ಲಿ ಹೆಲಿಕಾಪ್ಟರ್ ಪತನ; ಪಾಕಿಸ್ತಾನ ಸೇನೆಯ ಇಬ್ಬರು ಮೇಜರ್​ಗಳ ಸಾವು

ಸಿಯಾಚಿನ್ ಹಿಮನದಿಯಲ್ಲಿ ಇಂದು ಹೆಲಿಕಾಪ್ಟರ್ ಪತನವಾಗಿದ್ದು, ಮೇಜರ್ ಇರ್ಫಾನ್ ಬೆರ್ಚಾ ಮತ್ತು ಮೇಜರ್ ರಾಜಾ ಜೀಶನ್ ಜಹಾಂಜೇಬ್ ಹುತಾತ್ಮರಾಗಿದ್ದಾರೆ.

ಸಿಯಾಚಿನ್​ನಲ್ಲಿ ಹೆಲಿಕಾಪ್ಟರ್ ಪತನ; ಪಾಕಿಸ್ತಾನ ಸೇನೆಯ ಇಬ್ಬರು ಮೇಜರ್​ಗಳ ಸಾವು
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Dec 06, 2021 | 4:45 PM

Share

ನವದೆಹಲಿ: ಸಿಯಾಚಿನ್​ನಲ್ಲಿ ಹೆಲಿಕಾಪ್ಟರ್​ ಪತನವಾಗಿ ಪಾಕಿಸ್ತಾನ ಸೇನೆಯ ಇಬ್ಬರು ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಿಮನದಿಯಲ್ಲಿ ಇಂದು ಹೆಲಿಕಾಪ್ಟರ್ ಪತನವಾಗಿದ್ದು, ಇಬ್ಬರು ಪಾಕಿಸ್ತಾನಿ ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಮಾಧ್ಯಮ ವಿಭಾಗ ಮಾಹಿತಿ ನೀಡಿದೆ. ಈ ಘಟನೆಯಲ್ಲಿ ಮೇಜರ್ ಇರ್ಫಾನ್ ಬೆರ್ಚಾ ಮತ್ತು ಮೇಜರ್ ರಾಜಾ ಜೀಶನ್ ಜಹಾಂಜೇಬ್ ಹುತಾತ್ಮರಾಗಿದ್ದಾರೆ ಎಂದು ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್ ಪಾಕಿಸ್ತಾನ್ ತಿಳಿಸಿದೆ.

ಸಿಯಾಚಿನ್‌ನಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಕನಿಷ್ಠ ಇಬ್ಬರು ಪಾಕಿಸ್ತಾನದ ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಸೋಮವಾರ ಹೇಳಿಕೆ ತಿಳಿಸಿದೆ. ಪಾಕಿಸ್ತಾನ ಸೇನೆಯು ಹುತಾತ್ಮರಾದ ಅಧಿಕಾರಿಗಳನ್ನು ಮೇಜರ್ ಇರ್ಫಾನ್ ಬೆರ್ಚಾ ಮತ್ತು ಮೇಜರ್ ರಾಜಾ ಜೀಶನ್ ಜಹಾಂಜೆಬ್ ಎಂದು ಗುರುತಿಸಿದೆ.

ಸುಮಾರು ಒಂದು ವರ್ಷದ ಹಿಂದೆ ಗಿಲ್ಗಿಟ್-ಬಾಲ್ಟಿಸ್ತಾನ್‌ನ ಪ್ರದೇಶದಲ್ಲಿ ಗಾಯಾಳುಗಳನ್ನು ಸ್ಥಳಾಂತರಿಸುವಾಗ ತಾಂತ್ರಿಕ ಕಾರಣಗಳಿಂದಾಗಿ ಪಾಕಿಸ್ತಾನ ಸೇನೆಯ ಏವಿಯೇಷನ್ ​​ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಸಿಯಾಚಿನ್ ಹಿಮನದಿಯು ಪ್ರಪಂಚದ ಎತ್ತರದ ಶಿಖರಗಳಿಂದ ಆವೃತವಾಗಿದೆ. ಕಾಶ್ಮೀರದ ಮಿಲಿಟರಿ ಪ್ರದೇಶದಲ್ಲಿ ಭಾರತದ ವಾಸ್ತವಿಕ ಗಡಿಯ ಸಮೀಪದಲ್ಲಿದೆ. ಇದು 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ಎರಡು ದೇಶಗಳ ನಡುವೆ 2-3 ಯುದ್ಧಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಸಿಯಾಚಿನ್​ನಲ್ಲಿ ಹಿಮಕುಸಿತ: ಇಬ್ಬರು ನಾಗರಿಕರು, ನಾಲ್ವರು ಯೋಧರು ಹುತಾತ್ಮ

ಚಳಿಗಾಲದಲ್ಲಿ ಪ್ರವಾಸ ಹೋಗಬಹುದಾದ ಈ ಸ್ಥಳಗಳು ನಿಸ್ಸಂದೇಹವಾಗಿ ಭೂಮಿ ಮೇಲಿನ ಸ್ವರ್ಗಗಳು!

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ