Ukraine Crisis: ಉಕ್ರೇನ್ ಬಿಕ್ಕಟ್ಟಿನ ಕುರಿತ ಸಭೆಯಿಂದ ರಷ್ಯಾದ ರಾಯಭಾರಿಯನ್ನು ಹೊರಹಾಕಿದ ಬ್ರಿಟನ್: ವರದಿ

| Updated By: shivaprasad.hs

Updated on: Feb 25, 2022 | 11:45 AM

Russia- Ukraine War: ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟಿನ ಕುರಿತು ಹಲವು ದೇಶಗಳು ಪ್ರತಿಕ್ರಿಯಿಸಿ, ಶಾಂತಿ ಕಾಪಾಡಲು ಆಗ್ರಹಿಸುತ್ತಿವೆ. ಇತ್ತೀಚೆಗೆ ಬ್ರಿಟನ್​ನಲ್ಲಿ ರಷ್ಯಾ ರಾಯಭಾರಿಯನ್ನು ಸಭೆಯಿಂದ ಹೊರಹಾಕಿರುವ ಬಗ್ಗೆ ವರದಿಗಳು ತಿಳಿಸಿವೆ.

Ukraine Crisis: ಉಕ್ರೇನ್ ಬಿಕ್ಕಟ್ಟಿನ ಕುರಿತ ಸಭೆಯಿಂದ ರಷ್ಯಾದ ರಾಯಭಾರಿಯನ್ನು ಹೊರಹಾಕಿದ ಬ್ರಿಟನ್: ವರದಿ
ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್
Follow us on

ಬ್ರಿಟನ್: ಉಕ್ರೇನ್ ಮೇಲೆ ಯುದ್ಧ (Russia- Ukraine War) ಸಾರಿರುವ ರಷ್ಯಾ ನೀತಿಗೆ ವಿಶ್ವದ ಹಲವು ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿದ್ದು, ವಿರೋಧ ಹೊರಹಾಕಿವೆ. ಈ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಬ್ರಿಟನ್​ನಲ್ಲಿ ಮಾಸ್ಕೋದ ರಾಯಭಾರಿಯನ್ನು ಉಕ್ರೇನ್ ಕುರಿತ ಸಭೆಯೊಂದರಿಂದ ಹೊರಹಾಕಿರುವ ಘಟನೆ ವರದಿಯಾಗಿದೆ. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ (Liz Truss) ಮಾಸ್ಕೋದ ರಾಯಭಾರಿಯನ್ನು ತಮ್ಮ ಸಭೆಯಿಂದ ಹೊರಹಾಕಿದ್ದಾರೆ. ಉಕ್ರೇನ್ ಕುರಿತ ಬೆಳವಣಿಗೆಯನ್ನು ಪ್ರಸ್ತಾಪಿಸಿ, ‘ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿರುವುದು ದುರುದ್ದೇಶಪೂರಿತವಾಗಿದೆ ಮತ್ತು ನ್ಯಾಯಸಮ್ಮತವಲ್ಲದ್ದು’ ಎಂದು ರಷ್ಯಾ ರಾಯಭರಿ ಆಂಡ್ರಿ ಕೆಲಿನ್​ಗೆ ಹೇಳಿರುವ ಲಿಜ್ ಟ್ರಜ್, ‘ಈಗ ರಷ್ಯಾ  ಅಂತಾರಾಷ್ಟ್ರೀಯ ಮಟ್ಟದಲ್ಲಿ ತಿರಸ್ಕೃತಗೊಂಡಿದೆ’ ಎಂದು ಸಭೆಯಿಂದ ಹೊರಹಾಕುವ ಮುನ್ನ ಹೇಳಿದ್ದಾ. ಈ ಕುರಿತು ಲಿಜ್ ಟ್ರಸ್ ಅವರ ಕಚೇರಿಯ ಹೇಳಿಕೆ ಉಲ್ಲೇಖಿಸಿ, ಎನ್​ಡಿಟಿವಿ ವರದಿ ಮಾಡಿವೆ.

ಉಕ್ರೇನ್ ಮೇಲೆ ರಷ್ಯಾದ ಯುದ್ಧದ ನಿಲುವನ್ನು ಪ್ರಸ್ತಾಪಿಸಿದ ಲಿಜ್ ಟ್ರಸ್, ‘ರಷ್ಯಾ ಮೊದಲಿನಿಂದಲೂ ಉಕ್ರೇನ್ ಮೇಲೆ ದಾಳಿ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿ ಮೊದಲಿನಿಂದಲೂ ಸುಳ್ಳು ಹೇಳಿಕೊಂಡು ಬಂದಿತ್ತು. ಇದೀಗ ದುರುದ್ದೇಶದಿಂದ ದಾಳಿ ನಡೆಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾ ತಿರಸ್ಕೃತಗೊಳ್ಳುವಂತೆ ಆಗಿದೆ’ ಎಂದು ಹೇಳಿದ್ದಾರೆ.

ರಷ್ಯಾದ ನಿರ್ಧಾರಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ತಿರುಗಿಬಿದ್ದಿದ್ದು, ಬಿಗಿಯಾದ ನಿರ್ಬಂಧಗಳನ್ನು ಹೇರುತ್ತಿವೆ. ಇದು ರಷ್ಯಾದ ಆರ್ಥಿಕತೆಯ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಬಹುದು ಎನ್ನಲಾಗಿದೆ. ಈ ಕುರಿತು ವಿದೇಶ, ಕಾಮನ್​ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್​ಸಿಡಿಒ) ಹೇಳಿಕೆ ನೀಡಿ, ‘‘ರಾಜಕೀಯ, ಆರ್ಥಿಕ ಸೇರಿದಂತೆ ಹಲವು ವಿಭಾಗಗಳಲ್ಲಿ ರಷ್ಯಾ ದೀರ್ಘಕಾಲಿಕ ಸಮಸ್ಯೆಗಳನ್ನು ಎದುರಿಸಲಿದೆ’’ ಎಂದು ತಿಳಿಸಿದೆ.

‘ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿರುವುದು ಅಂತಾರಾಷ್ಟ್ರೀಯ ನೀತಿಯ ಸ್ಪಷ್ಟ ಉಲ್ಲಂಘನೆ’ ಎಂದು ಎಫ್​ಸಿಡಿಒ ಸಭೆಯಲ್ಲಿ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಷ್ಯಾ ರಾಯಭಾರಿ ಕ್ರಮ್ಲಿನ್ ಈ ಹೇಳಿಕೆಯೇ ಪೂರ್ವಗ್ರಹ ಪೀಡಿತ ಎಂದು ಆರೋಪಿಸಿದ್ದರು. ಅವರ ಹೇಳಿಕೆಯ ನಂತರ ಲಿಜ್ ಟ್ರಸ್ ಅವರನ್ನು ಸಭೆಯಿಂದ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.

ರಷ್ಯಾ ನಡೆಸಿದ ದಾಳಿಗೆ 137 ಉಕ್ರೇನಿಯನ್ನರು ಮರಣ:

ಗುರುವಾರ ರಷ್ಯಾ ಯುದ್ಧ ಘೋಷಿಸಿದ ನಂತರ ಇಲ್ಲಿಯವರೆಗೆ 137 ಜನ ಉಕ್ರೇನ್​ನ ಸೈನಿಕರು, ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಇದುವರೆಗೆ 316 ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಇಂದು ರಷ್ಯಾ ತನ್ನ ದಾಳಿಯ ಪ್ರಮಾಣವನ್ನು ಹೆಚ್ಚಿಸಿದ್ದು, ಉಕ್ರೇನ್ ರಾಜಧಾನಿ ಸುತ್ತಮುತ್ತ ಹಲವು ದಾಳಿ ನಡೆಸಿದೆ. ಇದರಿಂದ ಇಂದು ಸಾವು- ನೋವಿನ ಪ್ರಮಾಣ ಮತ್ತಷ್ಟು ಏರುವ ಆತಂಕ ಎದುರಾಗಿದೆ. ಭಾರತ, ಅಮೇರಿಕಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ರಷ್ಯಾಗೆ ಯುದ್ಧ ನಿಲ್ಲಿಸುವಂತೆ ಆಗ್ರಹಿಸಿವೆ.

ಇದನ್ನೂ ಓದಿ:

ರಷ್ಯಾವನ್ನು ಎದುರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಅಂಗೀಕಾರ

Ukraine Crisis: ಕೈವ್​ನಲ್ಲಿ ಇಂದು ಮುಂಜಾನೆ ಭೀಕರ ಸ್ಫೋಟದ ಸದ್ದು; ಈ ಯುದ್ಧದಲ್ಲಿ ನಾವು ಏಕಾಂಗಿ ಎಂದ ಉಕ್ರೇನ್ ಅಧ್ಯಕ್ಷ