
ತರಬೇತಿ ನೀಡೋ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕೈಗಳಿಗೆ ತಾವೇ ಬೇಡಿ ಹಾಕಿಕೊಂಡುಒದ್ದಾಡಿದ ಪೇಚಿನ ಪ್ರಸಂಗ ನಾರ್ಥಾಂಪ್ಟನ್ಶೈರ್ನಲ್ಲಿ ನಡೆದಿದೆ. ಕೊನೆಗೆ, ಅಧಿಕಾರಿ ಕೈಯಿಂದ ಬೇಡಿ ಬೇರ್ಪಡಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಸಾಹಸ ಮಾಡಬೇಕಾಗಿ ಬಂತು!
ಹೊಸದಾಗಿ ಕೆಲಸಕ್ಕೆ ಸೇರಿದ್ದ ಸಿಬ್ಬಂದಿಗೆ ಬೇಡಿ ಹಾಕುವುದನ್ನು ಹೇಳಿಕೊಡುವ ಸಂದರ್ಭದಲ್ಲಿ ನಾರ್ಥಾಂಪ್ಟನ್ಶೈರ್ (Northamptonshire) ಪೊಲೀಸ್ ಸಾರ್ಜೆಂಟ್ ರೆನ್ವಿಕ್ ತಾವೇ ಬೇಡಿ ಹಾಕಿಕೊಂಡಿದ್ದಾರೆ. ಈ ಬಗ್ಗೆ ನಾರ್ತ್ಆಂಟ್ಸ್ಫೈರ್ (Northantsfire) ಅಗ್ನಿಶಾಮಕ ದಳ ಟ್ವೀಟ್ ಮಾಡಿದೆ. ಬೇಡಿ ಹಾಕಿಕೊಂಡು ಮುಜುಗರಕ್ಕೆ ಒಳಗಾದ ಅಧಿಕಾರಿ ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.