ಬ್ರಿಟನ್ ಪ್ರಧಾನಿ ರೇಸ್ನಲ್ಲಿ ಲಿಜ್ ಟ್ರಸ್ ವಿರುದ್ಧ ನೇರ ಹಣಾಹಣಿ, ರಿಷಿ ಸುನಕ್ ಹೇಳಿದ್ದೇನು?
ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿದ ನಂತರ ಪ್ರಧಾನಿ ಆಕಾಂಕ್ಷಿಗಳಾದ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ನಡುವೆ ನೇರ ಹಣಾಹಣಿ ನಡೆಯಲಿದೆ. ಸೆಪ್ಟೆಂಬರ್ 5ಕ್ಕೆ ಮುಂಚೆ ಪ್ರಧಾನಿ ಘೋಷಣೆ ನಡೆಯಲಿ

ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್ ಪ್ರಧಾನಿ ಹುದ್ದೆಗೇರಲು(UK prime minister) ಸ್ಪರ್ಧಿಸುತ್ತಿರುವ ರಿಷಿ ಸುನಕ್ (Rishi Sunak) ಪ್ರಧಾನಿ ಚುನಾವಣೆಯಲ್ಲಿ ತಾನು ದುರ್ಬಲ ಎಂದು ಒಪ್ಪಿಕೊಂಡಿದ್ದು, ಪ್ರತಿಯೊಂದು ಮತ ಗಿಟ್ಟಿಸಲು ಹೋರಾಡುವುದಾಗಿ ಹೇಳಿದ್ದಾರೆ. ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ, ಹಣದುಬ್ಬರ ನಿಯಂತ್ರಣಕ್ಕೆ ಬರುವವರೆಗೆ ವೈಯಕ್ತಿಕ ತೆರಿಗೆ ಕಡಿತ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಸದಸ್ಯರೊಂದಿಗೆ ಮೊದಲ ಬಾರಿ ಅಧಿಕೃತ ಸಭೆ ನಡೆಸಿದ್ದ ರಿಷಿ ಇದು ನನ್ನ ಜೀವನವನ್ನು ಸುಲಭಗೊಳಿಸದಿದ್ದರೂ ಸಹ, ಇದು ಪ್ರಾಮಾಣಿಕ ಕೆಲಸವಾಗಿದೆ ಎಂದು ಹೇಳಿದ್ದಾರೆ. ಇತ್ತ ರಿಷಿ ಅವರ ಪ್ರತಿಸ್ಪರ್ಧಿ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ (Liz Truss) ತಾನು ಅಧಿಕಾರಕ್ಕೇರಿದರೆ ತೆರಿಗೆ ಕಡಿತ ಮಾಡುವುದಾಗಿ ಹೇಳಿದ್ದಾರೆ. ಈಶಾನ್ಯ ಇಂಗ್ಲೆಂಡ್ನಲ್ಲಿ ಗುರುವಾರ ರಾತ್ರಿ ಲಿಜ್ ಅವರಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು. ಬ್ರಿಟನ್ನ ತೆರಿಗೆ ವ್ಯವಸ್ಥೆಯು ತುಂಬಾ ಗೊಂದಲಮಯವಾಗಿದ್ದು, ಕುಟುಂಬಗಳಿಗೆ ಇದನ್ನು ಸುಗಮವಾಗಿಸಲು ಸಂಪೂರ್ಣವಾಗಿ ಅದನ್ನು ಪುನರವಲೋಕನ ಮಾಡಬೇಕಿದೆ ಎಂದಿದ್ದಾರೆ. ರಕ್ಷಣಾ ಕಾರ್ಯದರ್ಶಿ ಬೆಲ್ ವಾಲೇಸೇ ಕೂಡಾ ಟ್ರಸ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ರಿಷಿ ಸುನಕ್ ಹೇಳಿದ್ದೇನು?
ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿದ ನಂತರ ಪ್ರಧಾನಿ ಆಕಾಂಕ್ಷಿಗಳಾದ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ನಡುವೆ ನೇರ ಹಣಾಹಣಿ ನಡೆಯಲಿದೆ. ಸೆಪ್ಟೆಂಬರ್ 5ಕ್ಕೆ ಮುಂಚೆ ಪ್ರಧಾನಿ ಘೋಷಣೆ ನಡೆಯಲಿದೆ. ಪ್ರಧಾನಿ ಹುದ್ದೆಯ ರೇಸ್ನಲ್ಲಿ ನಾನು ಹಿಂದೆ ಇದ್ದೇನೆ ಎಂಬುದು ಗೊತ್ತಿದೆ. ನಾನು ನಿಮ್ಮೆಲ್ಲರಲ್ಲಿ ಬೆಂಬಲ ಬೇಡುತ್ತಿದ್ದೇನೆ. ಪ್ರತಿಯೊಂದು ಮತ ಗಿಟ್ಟಿಸಿಕೊಳ್ಳಲು ನಾನು ಹೋರಾಡುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ. ಟ್ರಸ್ ಅವರ ವಿರುದ್ಧ ಪರೋಕ್ಷ ದಾಳಿ ನಡೆಸಿದ ಸುನಕ್, ತೆರಿಗೆ ವಿನಾಯಿತಿಯಿಂದ ಸರ್ಕಾರಕ್ಕೆ ಆಗುವ ಆದಾಯ ಕೊರತೆಯನ್ನು ಹೇಗೆ ತುಂಬ ಬಲ್ಲಿರಿ? ಅದನ್ನು ವಿವರಿಸದೆ ಇಂಥಾ ಘೋಷಣೆ ಮಾಡುವುದು ಬೇಜವಾಬ್ದಾರಿತನ ಎಂದು ಕೇಳಿದ್ದಾರೆ.