ಕಾಳಿಯನ್ನು ಹೋಲುವ ಚಿತ್ರ ಟ್ವೀಟ್; ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಯಾಚಿಸಿದ ಉಕ್ರೇನ್ ರಕ್ಷಣಾ ಸಚಿವಾಲಯ
ಏಪ್ರಿಲ್ 30 ರಂದು, ಉಕ್ರೇನ್‌ನ ರಕ್ಷಣಾ ಸಚಿವಾಲಯವು ವರ್ಕ್ ಆಫ್ ಆರ್ಟ್ ಎಂಬ ಶೀರ್ಷಿಕೆಯೊಂದಿಗೆ ಚಿತ್ರವೊಂದನ್ನು ಟ್ವೀಟ್ ಮಾಡಿದೆ. ಉಕ್ರೇನಿಯನ್ ಕಲಾವಿದ ಮ್ಯಾಕ್ಸಿಮ್ ಪಲೆಂಕೊ ರಚಿಸಿದ ಚಿತ್ರವನ್ನು ಸ್ಫೋಟದ ಚಿತ್ರದೊಂದಿಗೆ ಶೇರ್ ಮಾಡಲಾಗಿತ್ತು.
ಕೈವ್: ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನ್ ಝಾಪರೋವಾ (Emine Dzhaparova) ಅವರು ಸ್ಫೋಟದ ಹೊಗೆಯಲ್ಲಿ ಕಾಳಿಯನ್ನು (Goddess Kali) ಹೋಲುವ ಚಿತ್ರವನ್ನು ಟ್ವೀಟ್ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಉಕ್ರೇನ್ ರಕ್ಷಣಾ ಸಚಿವಾಲಯ ವಿಷಾದ ವ್ಯಕ್ತಪಡಿಸಿದೆ.ರಕ್ಷಣಾ ಸಚಿವಾಲಯವು (Defence ministry) ಕಾಳಿ ದೇವಿಯನ್ನು ಈ ರೀತಿಯಲ್ಲಿ ಚಿತ್ರಿಸಿರುವುದಕ್ಕೆ ಉಕ್ರೇನ್ ವಿಷಾದಿಸುತ್ತಿದೆ. ಯುರೋಪಿಯನ್ ದೇಶವು ಭಾರತದ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತದೆ ಮತ್ತು ಭಾರತದಿಂದ ಬೆಂಬಲವನ್ನು ಹೆಚ್ಚು ಪ್ರಶಂಸಿಸುತ್ತದೆಎಂದು ದೇಶದ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಹೇಳಿದ್ದಾರೆ.ಅದೇ ವೇಳೆ ಚಿತ್ರವನ್ನು ತೆಗೆದು ಹಾಕಲಾಗಿದೆ ಎಂದಿದ್ದಾರೆ ಅವರು.
ಉಕ್ರೇನ್ ರಕ್ಷಣಾ ಸಚಿವಾಲಯ ಹಿಂದೂ ದೇವತೆ ಕಾಳಿಯನ್ನು ವಿಕೃತ ರೀತಿಯಲ್ಲಿ ಚಿತ್ರಿಸಿರುವುದಕ್ಕೆ ವಿಷಾದಿಸುತ್ತದೆ. ಉಕ್ರೇನ್ ಮತ್ತು ಅದರ ಜನರು ಅನನ್ಯಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ ಮತ್ತು ಬೆಂಬಲವನ್ನು ಹೆಚ್ಚು ಮೆಚ್ಚುತ್ತಾರೆ. ಆ ಚಿತ್ರವನ್ನು ಈಗಾಗಲೇ ತೆಗೆದುಹಾಕಲಾಗಿದೆ. ಪರಸ್ಪರ ಗೌರವ ಮತ್ತು ಸ್ನೇಹದ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಝಪರೋವಾ ಟ್ವೀಟ್ ಮಾಡಿದ್ದಾರೆ.
We regret @DefenceU depicting #Hindu goddess #Kali in distorted manner. #Ukraine &its people respect unique #Indian culture&highly appreciate??support.The depiction has already been removed.??is determined to further increase cooperation in spirit of mutual respect&?friendship.
— Emine Dzheppar (@EmineDzheppar) May 1, 2023
ಏಪ್ರಿಲ್ 30 ರಂದು, ಉಕ್ರೇನ್‌ನ ರಕ್ಷಣಾ ಸಚಿವಾಲಯವು ವರ್ಕ್ ಆಫ್ ಆರ್ಟ್ ಎಂಬ ಶೀರ್ಷಿಕೆಯೊಂದಿಗೆ ಚಿತ್ರವೊಂದನ್ನು ಟ್ವೀಟ್ ಮಾಡಿದೆ. ಉಕ್ರೇನಿಯನ್ ಕಲಾವಿದ ಮ್ಯಾಕ್ಸಿಮ್ ಪಲೆಂಕೊ ರಚಿಸಿದ ಚಿತ್ರವನ್ನು ಸ್ಫೋಟದ ಚಿತ್ರದೊಂದಿಗೆ ಶೇರ್ ಮಾಡಲಾಗಿತ್ತು.
ಅಮೆರಿಕನ್ ನಟಿ ಮರ್ಲಿನ್ ಮನ್ರೋ ಅವರ ‘ಫ್ಲೈಯಿಂಗ್ ಸ್ಕರ್ಟ್’ ಭಂಗಿಯಲ್ಲಿ ಹಿಂದೂ ದೇವತೆ ‘ಮಾ ಕಾಳಿ’ ಯನ್ನು ಹೋಲುವ ಚಿತ್ರವಾಗಿತ್ತು ಅದು.ಚಿತ್ರವನ್ನು ಪೋಸ್ಟ್ ಮಾಡಿದ ನಂತರ, ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಶಾಕಿಂಗ್! ಉಕ್ರೇನ್ ರಕ್ಷಣಾ ಸಚಿವಾಲಯದ ಅಧಿಕೃತ ಹ್ಯಾಂಡಲ್ ಮಾ ಕಾಳಿಯನ್ನು ಅವಮಾನಕರ ಭಂಗಿಯಲ್ಲಿ ಚಿತ್ರಿಸುತ್ತಿದೆ. ಇದು ಕಲೆಯ ಕೆಲಸವಲ್ಲ. ನಮ್ಮ ನಂಬಿಕೆಯು ತಮಾಷೆಯ ವಿಷಯವಲ್ಲ. ಅದನ್ನು ಡಿಲೀಟ್ ಮಾಡಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. 1.4 ಶತಕೋಟಿ ಭಾರತೀಯರ ಭಾವನೆಗಳನ್ನು ಘಾಸಿಗೊಳಿಸುವುದು ಸರಿಯಲ್ಲ. ಇದು ಉಕ್ರೇನ್ ರಕ್ಷಣಾ ಸಚಿವಾಲಯದ ಹಿಂದೂಫೋಬಿಯಾದ ಅಬ್ಬರದ ಪ್ರದರ್ಶನವಾಗಿದೆ. ದಯವಿಟ್ಟು ಇದನ್ನು ತೆಗೆದುಹಾಕಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸ್ವರ್ಗ ಸಿಗುತ್ತೆ, ಏಸುವನ್ನು ನೋಡಬಹುದು ಎಂಬ ಪಾದ್ರಿ ಮಾತು ನಂಬಿ ಜೀವಂತ ಸಮಾಧಿಯಾದವರ ಸಂಖ್ಯೆ 110ಕ್ಕೆ ಏರಿಕೆ
ಝಪರೋವಾ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಉಕ್ರೇನಿಯನ್ ಮಂತ್ರಿಯೊಬ್ಬರು ಭಾರತಕ್ಕೆ ಮೊದಲ ಭೇಟಿ ನೀಡಿದ್ದರು. ಭೇಟಿಯ ಸಂದರ್ಭದಲ್ಲಿ ಉಕ್ರೇನಿಯನ್ ಸಚಿವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮೀನಾಕ್ಷಿ ಲೇಖಿ ಅವರೊಂದಿಗೆ ಮಾತುಕತೆ ನಡೆಸಿದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ