AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣರಂಗದಲ್ಲಿ ಏಕಾಂಗಿಯಾದ ಉಕ್ರೇನ್! ಸೈಲೆಂಟ್ ಆದ ನ್ಯಾಟೋ ಪಡೆಗಳು ರಷ್ಯಾ ಸೇನಾ ಬಲ ಕಂಡು ಹೆದರಿದ್ವಾ?

Russia Ukraine Crisis: ಉಕ್ರೇನ್​ ಸದ್ಯ ಮೂರನೆಯವರನ್ನ ನಂಬಿ ಯುದ್ಧಕ್ಕಿಳಿದು ಅತಂತ್ರವಾಗಿ ನಿಂತಿದೆ.. ದೇಶದ ಪ್ರಜೆಗಳ ಮತ್ತು ಯೋಧರ ನೆತ್ತರನ್ನೇ ನೆಲಕ್ಕೆ ಚೆಲ್ಲಿ ಸೂತಕದ ಮನೆಯಾಗಿದೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳು ಮುಂದೆ ಯಾವ ರೀತಿ ಉಕ್ರೇನ್​ಗೆ ಸಹಾಯವಾಗಿ ನಿಲ್ಲುತ್ತವೋ ನೋಡಬೇಕಿದೆ.

ರಣರಂಗದಲ್ಲಿ ಏಕಾಂಗಿಯಾದ ಉಕ್ರೇನ್! ಸೈಲೆಂಟ್ ಆದ ನ್ಯಾಟೋ ಪಡೆಗಳು ರಷ್ಯಾ ಸೇನಾ ಬಲ ಕಂಡು ಹೆದರಿದ್ವಾ?
ರಣರಂಗದಲ್ಲಿ ಏಕಾಂಗಿಯಾದ ಉಕ್ರೇನ್! ಸೈಲೆಂಟ್ ಆದ ನ್ಯಾಟೋ ಪಡೆಗಳು ರಷ್ಯಾ ಸೇನಾ ಬಲ ಕಂಡು ಹೆದರಿದ್ವಾ?
TV9 Web
| Updated By: ಸಾಧು ಶ್ರೀನಾಥ್​|

Updated on: Feb 26, 2022 | 8:18 AM

Share

ಯುದ್ಧಕ್ಕೆ ನಿಂತ್ಮೇಲೆ ಸೈನಿಕರನ್ನ ಲೆಕ್ಕ ಹಾಕಬಾರದು. ಎದೆಕೊಟ್ಟು ನಿಂತ್ರೆ ಎದುರಾಳಿ ಯಾರೆ ಇರಲಿ ಎಷ್ಟೇ ಇರಲಿ ನುಗ್ಗಿ ಹೊಡೀತಿರಬೇಕು. ಆದ್ರೆ ದುರ್ಬಲ ಉಕ್ರೇನ್​ ಬಲಿಷ್ಠ ರಷ್ಯಾಗೆ (Russia) ಏಟುಎದಿರೇಟು ಕೊಡೋಕೆ ಸಾಧ್ಯವಾಗದೇ ಮಂಡಿಯೂರಿದೆ. ಉಕ್ರೇನ್ (Ukraine) ರಣರಂಗವಾಗಿದೆ. ಆಗಸದಲ್ಲಿ ರಾಕೆಟ್… ಭೂಮಿಯಲ್ಲಿ ಮಿಸೈಲ್…. ಎದುರಲ್ಲೇ ಟ್ಯಾಂಕರ್… ಪಕ್ಕದಲ್ಲೇ ಬಾಂಬ್ ಸ್ಫೋಟಕ್ಕೆ ಇಡೀ ಉಕ್ರೇನ್​ನಲ್ಲಿ ರಕ್ತದೋಕುಳಿಯೇ ನಡೀತಿದೆ. ರಷ್ಯಾ ಯುದ್ಧ ಘೋಷಿಸಿದ ಮೇಲೆ ಹೋರಾಡೋಕೆ ಸಿದ್ಧ ಎಂದು ತೊಡೆ ತಟ್ಟಿದ್ದ ಉಕ್ರೇನ್, ಆರಂಭಶೂರತ್ವ ತೋರಿ ಈಗ ಬಾಲ ಮುದುರಿಕೊಂಡಿದೆ (Russia Ukraine War).

ಎಲ್ಲಾ ಸೇರಿ ಉಕ್ರೇನ್​ಗೆ ಏಕಾಏಕಿ ಕೈ ಕೊಟ್ರಾ? ಯುದ್ಧಕ್ಕೆ ನಿಂತಿದ್ದ ಉಕ್ರೇನ್​ ವಾರ್​ ಫೀಲ್ಡ್​ಗೆ ಇಳಿಯುತ್ತಿದ್ದಂತೆಯೇ ನಡುಕ ಶುರುವಾಗಿತ್ತು. ರಷ್ಯಾದ ಆನೆಬಲದ ಎದುರು, ದುರ್ಬಲ ದೇಶ ಪತರುಗುಟ್ಟಿತ್ತು. ದಶದಿಕ್ಕುಗಳಲ್ಲೂ ಪುಟಿನ್ ಪಡೆಯ ಆಕ್ರಮಣಕ್ಕೆ ತತ್ತರಿಸಿ ಹೋಗಿತ್ತು. ಆದ್ರೆ, ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುತ್ತಿದ್ದ ಬಲಿಷ್ಠ ರಾಷ್ಟ್ರಗಳು, ನ್ಯಾಟೋ ಪಡೆಯ ಒಂದೇ ಒಂದು ರಾಷ್ಟ್ರವೂ (NATO) ಉಕ್ರೇನ್​ ಬೆನ್ನೆಲುಬಾಗಿ ನಿಂತಿಲ್ಲ.

ಎಕನಾಮಿಕ್ ವಾರ್​’ಗಷ್ಟೇ ನ್ಯಾಟೋ ಸೀಮಿತ? ರಷ್ಯಾದ ಮೇಲೆ ಕೇವಲ ಆರ್ಥಿಕವಾಗಿ ನಿರ್ಬಂಧ ವಿಧಿಸೋ ಬಗ್ಗೆಯಷ್ಟೇ ಅಮೆರಿಕಾ, ಇಂಗ್ಲೆಂಡ್ ಸೇರಿ ಹಲವರು ಬೆದರಿಕೆಯೊಡ್ಡಿದ್ರು. ಆದ್ರೆ, ಇದ್ಯಾವುದಕ್ಕೂ ಕ್ಯಾರೆ ಅನ್ನದ ಪುಟಿನ್, ಉಕ್ರೇನ್ ವಿರುದ್ಧ ಎಗರೆಗರಿ ಬಿದ್ದಿದ್ದಾರೆ… ರಷ್ಯಾ ಉಕ್ರೇನ್​ ಗಡಿಗೆ ಸೇನಾ ಬಲವನ್ನ ಕಳಿಸುತ್ತಿದ್ದಂತೆಯೇ, ನಾವು ಸೇನೆಯನ್ನ ಕಳಿಸಲ್ಲ ಅಂತಾ ಅಮೆರಿಕ ಸ್ಪಷ್ಟವಾಗಿ ಹೇಳಿತ್ತು.. ಇನ್ನು ನ್ಯಾಟೋ ಸದಸ್ಯತ್ವದ ದೇಶಗಳೂ ಕೂಡ ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿ, ಸೈಲೆಂಟ್ ಆಗೇ ಮೂಲೆ ಸೇರಿದ್ವು..

ಅಮೆರಿಕ ಸೇರಿ ನ್ಯಾಟೋ ರಾಷ್ಟ್ರಗಳಿಂದ ಆರ್ಥಿಕ ದಿಗ್ಬಂಧನ ವಾರ್​ಗಿಳಿದಿರೋ ರಷ್ಯಾ ವಿರುದ್ಧ ಬಲಿಷ್ಠ ರಾಷ್ಟ್ರಗಳು ಸಮರ ಸಾರಿವೆ. ಅಮೆರಿಕ ಸೇರಿದಂತೆ ನ್ಯಾಟೋ ರಾಷ್ಟ್ರಗಳು ಆರ್ಥಿಕ ದಿಗ್ಬಂಧನ ವಿಧಿಸಿದ್ದು, ರಷ್ಯಾ ಜೊತೆಗಿನ ಹಣಕಾಸು ವಹಿವಾಟು ಸ್ಥಗಿತಕ್ಕೆ ಮುಂದಾಗಿವೆ.ಜಗತ್ತಿನ ದೊಡ್ಡ ದೊಡ್ಡ ದೇಶಗಳು ರಷ್ಯಾಗೆ ಶಾಕ್ ಕೊಟ್ಟಿವೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಕೆನಡಾ, ಇಟಲಿ ಸೇರಿ ಹಲವು ರಾಷ್ಟ್ರಗಳಿಂದ ಆರ್ಥಿಕ ದಿಗ್ಬಂಧನ ಹಾಕುವ ಮೂಲಕ ರಷ್ಯಾಗೆ ಆಘಾತ ನೀಡಿವೆ. ಡಾಲರ್, ಯುರೋ, ಪೌಂಡ್, ಯೆನ್ ಮೂಲಕ ವಹಿವಾಟು ಮಾಡುವುದಕ್ಕೆ ಬ್ರೇಕ್ ಹಾಕಿದ್ದು, ರಷ್ಯಾ ಜೊತೆಗೆ ಹಣಕಾಸು ವ್ಯವಹಾರ ಮಾಡದಿರಲು ನಿರ್ಧಾರ ಮಾಡಿವೆ.

ಸಹಾಯಕ್ಕಾಗಿ ಅಂಗಲಾಚಿದ್ದ ಉಕ್ರೇನ್ ಅಧ್ಯಕ್ಷ! ರಣಾಂಗಣದಲ್ಲಿ ‘ಸೈಲೆಂಟ್’ ಆದ ನ್ಯಾಟೋ! ರಷ್ಯಾದಲ್ಲಿ ಬಾಂಬ್​ ಮಳೆಯಾಗ್ತಿದೆ. ಸೇನಾ ನೆಲೆ ಧ್ವಂಸವಾಗ್ತಿವೆ. ಸೈನಿಕರು ಪ್ರಾಣ ಬಿಡ್ತಿದ್ದಾರೆ. ಇಷ್ಟಾದ್ರೂ ನ್ಯಾಟೋ ಪಡೆಲ್ಲಿರೋ 30 ದೇಶಗಳಲ್ಲಿ ಒಂದೇ ಒಂದು ದೇಶ ಉಕ್ರೇನ್​ ಪರ ನಿಲ್ಲಲಿಲ್ಲ. ಉಕ್ರೇನ್​ನ ನ್ಯಾಟೋ ಸದಸ್ಯತ್ವದ ಬಗ್ಗೆ ಸೈಲೆಂಟ್ ಆಗಿರೋ ನ್ಯಾಟೋ ಪಡೆಗೆ ಮಾತಿನಲ್ಲೇ ಇರಿದ ವೊಲೊಡಿಮಿರ್ ಝೆಲೆನ್​​ಸ್ಕಿ, ಮೌನವನ್ನ ಪ್ರಶ್ನಿಸಿದ್ದಾರೆ. 27 ಯುರೋಪಿಯನ್ ನಾಯಕರೊಂದಿಗೆ ಉಕ್ರೇನ್ ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿಕೂಟದ ಸದಸ್ಯತ್ವದ ನಿರೀಕ್ಷೆಗಳ ಬಗ್ಗೆ ಕೇಳಿದ್ದೆ. ಆದರೆ ಯಾರೂ ಸಕಾರಾತ್ಮಕವಾಗಿ ಉತ್ತರಿಸಲಿಲ್ಲ ಎಂದಿದ್ದಾರೆ.

ಯುದ್ಧ ಭೂಮಿಯಲ್ಲಿ ಏಕಾಂಗಿಯಾಗಿರೋ ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ, ಅಮೆರಿಕ ಮತ್ತು ನ್ಯಾಟೋ ವಿರುದ್ಧ ನೇರವಾಗೇ ಅಸಮಾಧಾನ ಹೊರ ಹಾಕಿದ್ದಾರೆ. ರಷ್ಯಾ ಕಂಡ್ರೆ ಎಲ್ಲರಿಗೂ ಭಯವಾಗುತ್ತಿದೆ. ನಾವು ಏಕಾಂಗಿಯಾಗಿ ಬಿಟ್ಟಿದ್ದೇವೆ ಎಂದಿದ್ದಾರೆ. ಅಷ್ಟಕ್ಕೂ ಪುಟಿನ್​ರನ್ನು ನೇರವಾಗಿ ಎದುರಿಸಲು ನ್ಯಾಟೋ ಪಡೆಯವರು ಹಿಂದೇಟು ಹಾಕಲು ಕಾರಣವೇನು ಅಂತಾ ನೋಡೋದಾದ್ರೆ….

ನ್ಯಾಟೋ ಪಡೆ ಹಿಂದೇಟಿಗೆ ಕಾರಣ?: ರಷ್ಯಾ ದೇಶವನ್ನ ಎದುರು ಹಾಕಿಕೊಳ್ಳೋದು ಸುಲಭವಲ್ಲ ರಷ್ಯಾ ಸಾಮರ್ಥ್ಯ ಏನು ಅಂತಾ ಅಮೆರಿಕಕ್ಕೂ ಗೊತ್ತಿದೆ ಯುರೋಪಿಯನ್ ರಾಷ್ಟ್ರಗಳೂ ಶಕ್ತಿಗಾಗಿ ರಷ್ಯಾ ಮೇಲೆ ಡಿಪೆಂಡ್ ಆಗಿವೆ ನ್ಯಾಟೋ ಸದಸ್ಯ ರಾಷ್ಟ್ರಗಳು ರಷ್ಯಾದಿಂದ ನೈಸರ್ಗಿಕ ಅನಿಲ ಪಡೆಯುತ್ತಿವೆ ರಷ್ಯಾ ಅನಿಲ ಮತ್ತು ಕಚ್ಛಾ ತೈಲ ನಿಲ್ಲಿಸಿದರೆ ಹೊಡೆತ ಬೀಳುತ್ತೆ ಈಗಾಗಲೇ ಇಂಧನ ಸಮಸ್ಯೆ ಎದುರಿಸುತ್ತಿರುವ ಯುರೋಪ್ ವಿದ್ಯುತ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಹಣದುಬ್ಬರ ಆತಂಕ ರಷ್ಯಾವನ್ನ ನೇರವಾಗಿ ಎದುರಿಸಲು ಯುರೋಪ್ ರಾಷ್ಟ್ರಗಳು ಹಿಂದೇಟು

ರಷ್ಯಾ ದೇಶವನ್ನ ಎದುರು ಹಾಕಿಕೊಳ್ಳೋದು ಸುಲಭವಲ್ಲ. ಹೀಗಾಗಿಯೇ, ರಷ್ಯಾ ಸಾಮರ್ಥ್ಯ ಏನು ಅಂತಾ ಅಮೆರಿಕಕ್ಕೂ ಗೊತ್ತಿದೆ. ಇನ್ನು ಯುರೋಪಿಯನ್ ರಾಷ್ಟ್ರಗಳೂ ಶಕ್ತಿಗಾಗಿ ರಷ್ಯಾ ಮೇಲೆ ಡಿಪೆಂಡ್ ಆಗಿವೆ. ನ್ಯಾಟೋ ಸದಸ್ಯ ರಾಷ್ಟ್ರಗಳು ರಷ್ಯಾದಿಂದ ನೈಸರ್ಗಿಕ ಅನಿಲ ಪಡೆಯುತ್ತಿವೆ. ರಷ್ಯಾ ಅನಿಲ ಮತ್ತು ಕಚ್ಛಾ ತೈಲ ನಿಲ್ಲಿಸಿದರೆ ಹೊಡೆತ ಬೀಳುತ್ತೆ. ಈಗಾಗಲೇ ಇಂಧನ ಸಮಸ್ಯೆ ಎದುರಿಸುತ್ತಿರುವ ಯುರೋಪ್, ವಿದ್ಯುತ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಹಣದುಬ್ಬರ ಆತಂಕ ಶುರುವಾಗಿದೆ. ಹೀಗಾಗಿ, ರಷ್ಯಾವನ್ನ ನೇರವಾಗಿ ಎದುರಿಸಲು ಯುರೋಪ್ ರಾಷ್ಟ್ರಗಳು ಹಿಂದೇಟಾಕ್ತಿವೆ.

ಒಟ್ನಲ್ಲಿ ಉಕ್ರೇನ್​ ಸದ್ಯ ಮೂರನೆಯವರನ್ನ ನಂಬಿ ಯುದ್ಧಕ್ಕಿಳಿದು ಅತಂತ್ರವಾಗಿ ನಿಂತಿದೆ.. ದೇಶದ ಪ್ರಜೆಗಳ ಮತ್ತು ಯೋಧರ ನೆತ್ತರನ್ನೇ ನೆಲಕ್ಕೆ ಚೆಲ್ಲಿ ಸೂತಕದ ಮನೆಯಾಗಿದೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳು ಮುಂದೆ ಯಾವ ರೀತಿ ಉಕ್ರೇನ್​ಗೆ ಸಹಾಯವಾಗಿ ನಿಲ್ಲುತ್ತವೋ ನೋಡಬೇಕಿದೆ.