Viral Video: ಟರ್ಕಿ ಶೃಂಗಸಭೆಯಲ್ಲಿ ಉಕ್ರೇನ್ ಸಂಸದರಿಂದ ರಷ್ಯಾ ಪ್ರತಿನಿಧಿಗೆ ಥಳಿತ

|

Updated on: May 05, 2023 | 8:05 AM

ರಷ್ಯಾ(Russia) ಹಾಗೂ ಉಕ್ರೇನ್(Ukraine) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ನಡೆದ ಸಮ್ಮೇಳನದಲ್ಲಿ ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ರಷ್ಯಾದ ಪ್ರತಿನಿಧಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral Video: ಟರ್ಕಿ ಶೃಂಗಸಭೆಯಲ್ಲಿ ಉಕ್ರೇನ್ ಸಂಸದರಿಂದ ರಷ್ಯಾ ಪ್ರತಿನಿಧಿಗೆ ಥಳಿತ
ರಷ್ಯಾ ಪ್ರತಿನಿಧಿಗೆ ಥಳಿಸುತ್ತಿರುವ ಉಕ್ರೇನ್ ಸಂಸದ
Follow us on

ರಷ್ಯಾ(Russia) ಹಾಗೂ ಉಕ್ರೇನ್(Ukraine) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ನಡೆದ ಸಮ್ಮೇಳನದಲ್ಲಿ ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ರಷ್ಯಾದ ಪ್ರತಿನಿಧಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರಿಕೋವ್ಸ್ಕಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ನ್ಯೂಸ್‌ವೀಕ್ ಮಾರಿಕೋವ್‌ಸ್ಕಿ ಅವರ ಪೋಸ್ಟ್ ಅನ್ನು ಉಲ್ಲೇಖಿಸಿ ಘಟನೆಯ ಬಗ್ಗೆ ವರದಿ ಮಾಡಿದೆ.

ರಷ್ಯಾ ಪ್ರತಿನಿಧಿ ಉಕ್ರೇನ್​ ಸಂಸದರಿಂದ ಬಲವಂತವಾಗಿ ಧ್ವಜವನ್ನು ಕಿತ್ತುಕೊಂಡಿದ್ದರು, ಅದಕ್ಕೆ ಕೋಪಗೊಂಡು ಉಕ್ರೇನ್ ಸಂಸದರು ರಷ್ಯಾ ಪ್ರತಿನಿಧಿಗೆ ಥಳಿಸಿದ್ದಾರೆ. ಈ ಘಟನೆಯು ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯನ್ನು ಎತ್ತಿ ತೋರಿಸುತ್ತದೆ.

ಇದು ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಡೆಯುತ್ತಿರುವ ಸಂಘರ್ಷದಿಂದ ಉಲ್ಬಣಗೊಂಡಿದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ಆರಂಭವಾದ ಸಂಘರ್ಷ ಇದೀಗ ಪ್ರಮುಖ ನಗರಗಳಾದ ಕೈವ್, ಖೆರ್ಸನ್, ಒಡೆಸಾ ಮತ್ತು ಬಖ್‌ಮುತ್‌ಗಳಿಗೂ ವ್ಯಾಪಿಸಿದೆ.

ಮತ್ತಷ್ಟು ಓದಿ: Russia Ukraine War: ರಷ್ಯಾ ಉಕ್ರೇನ್ ಯುದ್ಧಕ್ಕೆ ಒಂದು ವರ್ಷ, ನೆನಪಿಸುತ್ತಿದೆ ಈ ಭಯಾನಕ ಚಿತ್ರಣ

ಮಾಸ್ಕೋ ಗುರುವಾರ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಯ ಮಾಸ್ಟರ್ ಮೈಂಡ್ ಎಂದು US ಆರೋಪಿಸಿದೆ, ವಾಷಿಂಗ್ಟನ್ ಇದನ್ನು ನಿರಾಕರಿಸಿತು. ಉಕ್ರೇನ್​ ಮೇಲೆ ಡ್ರೋನ್ ದಾಳಿ ನಡೆದಿದ್ದು ಅದರಲ್ಲಿ 21 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

ಹಾಗೆಯೇ ವ್ಲಾಡಿಮಿರ್ ಪುಟಿನ್ ಇದ್ದ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಲಾಗಿತ್ತು, ಆದರೆ ಉಕ್ರೇನ್ ನಾವೇನು ಮಾಡಿಲ್ಲ ಎಂದು ಹೇಳಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 8:02 am, Fri, 5 May 23