ವಿಮಾನದ ಮೆಟ್ಟಿಲೇರುವಾಗ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ; ಜೋ ಬೈಡನ್​ ಆರೋಗ್ಯದ ಬಗ್ಗೆ ತಿಳಿಸಿದ ಮಾಧ್ಯಮ ಕಾರ್ಯದರ್ಶಿ

ವೇಗವಾಗಿ ಹತ್ತುತ್ತಿದ್ದ ಅವರು ಮೆಟ್ಟಿಲುಗಳ ಅರ್ಧ ಭಾಗಕ್ಕೆ ಹೋಗುತ್ತಿದ್ದಂತೆ, ಮೊದಲು ಸಣ್ಣ ಪ್ರಮಾಣದಲ್ಲಿ ಎಡವಿದರು. ಅದಾಗಿ ಕೆಲವೇ ಸೆಕೆಂಡ್​​ನಲ್ಲಿ ಇನ್ನೊಮ್ಮೆ ಎಡವಿದರು ಮತ್ತೆ ಮೂರನೇ ಬಾರಿ ಎಡವಿದಾಗ ಅಲ್ಲೇ ಮಂಡಿಯೂರಿ ಬಿದ್ದಿದ್ದಾರೆ.

ವಿಮಾನದ ಮೆಟ್ಟಿಲೇರುವಾಗ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ; ಜೋ ಬೈಡನ್​ ಆರೋಗ್ಯದ ಬಗ್ಗೆ ತಿಳಿಸಿದ ಮಾಧ್ಯಮ ಕಾರ್ಯದರ್ಶಿ
ವಿಮಾನ ಹತ್ತುವಾಗ ಎಡವಿಬಿದ್ದ ಜೋ ಬೈಡನ್​
Follow us
|

Updated on: Mar 20, 2021 | 12:11 PM

ಅಮರಿಕದ ನೂತನ ಅಧ್ಯಕ್ಷ ಜೋ ಬೈಡನ್ (Joe Biden) ಶುಕ್ರವಾರ ಏರ್​ಫೋರ್ಸ್​ ವಿಮಾನ ಹತ್ತುವಾಗ ಮೆಟ್ಟಿಲುಗಳ ಮೇಲೇ ಮೂರು ಬಾರಿ ಎಡವಿ ಬಿದ್ದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ವಾರದ ಪ್ರಾರಂಭದಲ್ಲಿ ಅಟ್ಲಾಂಟಾದ ಪಾರ್ಲರ್​ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಅದರ ಬಗ್ಗೆ ಏಷಿಯನ್​-ಅಮೆರಿಕನ್ ಸಮುದಾಯ ಮುಖಂಡರೊಂದಿಗೆ ಚರ್ಚಿಸಲು ಬೈಡನ್​ ಶುಕ್ರವಾರ ಅಲ್ಲಿಗೆ ತೆರಳಿದ್ದಾರೆ. ಅಟ್ಲಾಂಟಾಕ್ಕೆ ತೆರಳಲು ಏರ್​ಫೋರ್ಸ್​ 1 ವಿಮಾನದ ಮೆಟ್ಟಿಲು ಏರುತ್ತಿರುವಾಗ ಒಂದಲ್ಲ, ಮೂರು ಬಾರಿ ಎಡವಿದ್ದಾರೆ.

ವೇಗವಾಗಿ ಹತ್ತುತ್ತಿದ್ದ ಅವರು ಮೆಟ್ಟಿಲುಗಳ ಅರ್ಧ ಭಾಗಕ್ಕೆ ಹೋಗುತ್ತಿದ್ದಂತೆ, ಮೊದಲು ಸಣ್ಣ ಪ್ರಮಾಣದಲ್ಲಿ ಎಡವಿದರು. ಅದಾಗಿ ಕೆಲವೇ ಸೆಕೆಂಡ್​​ನಲ್ಲಿ ಇನ್ನೊಮ್ಮೆ ಎಡವಿದರು ಮತ್ತೆ ಮೂರನೇ ಬಾರಿ ಎಡವಿದಾಗ ಅಲ್ಲೇ ಮಂಡಿಯೂರಿ ಬಿದ್ದಿದ್ದಾರೆ. ನಂತರ ಸಾವರಿಸಿಕೊಂಡು ಎದ್ದಿದ್ದಾರೆ. 78ವರ್ಷದ ಜೋ ಬೈಡನ್​ ಹೀಗೆ ಮೂರು ಬಾರಿ ಎಡವಿದ್ದನ್ನು ನೋಡಿದವರಲ್ಲಿ ಹಲವರು ಅವರ ಆರೋಗ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ವಿವಿಧ ಮೀಮ್ಸ್​ಗಳನ್ನು ಮಾಡಿ, ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

ಆರೋಗ್ಯವಾಗಿಯೇ ಇದ್ದಾರೆ.. ಇನ್ನು ಜೋ ಬೈಡನ್ ಮೂರು ಬಾರಿ ಎಡವಿದ್ದರಿಂದ ಅವರ ಆರೋಗ್ಯದ ಬಗ್ಗೆ ಸಹಜವಾಗಿಯೇ ಪ್ರಶ್ನೆ ಎದ್ದಿತ್ತು. ಹೀಗಾಗಿ ಅವರ ಮಾಧ್ಯಮ ಉಪ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೈಡನ್​ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ಆರೋಗ್ಯ ಚೆನ್ನಾಗಿಯೇ ಇದೆ ಎಂದು ಹೇಳಿದ್ದಾರೆ. ಜೋ ಬೈಡನ್​ ವಿಮಾನಗಳ ಮೆಟ್ಟಿಲೇರುತ್ತಿರುವಾಗ ತುಂಬ ಗಾಳಿ ಬೀಸುತ್ತಿತ್ತು. ಹಾಗಾಗಿ ಅವರಿಗೆ ಸಮತೋಲನ ತಪ್ಪುತ್ತಿತ್ತು ಎಂದೂ ತಿಳಿಸಿದ್ದಾರೆ. ಇನ್ನು ಜೋ ಬೈಡನ್​ ಕೂಡ ಇಷ್ಟಕ್ಕಾಗಿ ಅಟ್ಲಾಂಟಾ ಪ್ರವಾಸವನ್ನು ಮೊಟಕುಗೊಳಿಸಲಿಲ್ಲ.

ಇದನ್ನೂ ಓದಿ: ‘ಹಂತಕ’ ಆರೋಪ; ಅಮೆರಿಕಾ ಅಧ್ಯಕ್ಷ ಜೋ ಬೈಡನ್​ಗೆ​ ನೇರಾನೇರ ಚರ್ಚೆಗೆ ಆಹ್ವಾನವಿತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕರೊಂದಿಗೆ ಅಮೆರಿಕ ಅಧ್ಯಕ್ಷರ ಮಾತುಕತೆ; ನಾನೂ ಬರಬಹುದಾ ಎಂದು ಪ್ರಶ್ನಿಸಿದ ಜೋ ಬೈಡನ್​

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್