ಅಮೆರಿಕದ ನಗರ ಪೊಲೀಸರ ಪಡೆಗೆ ಸೇರ್ಪಡೆಯಾಗಲಿದೆ ಕಿಲ್ಲರ್ ರೋಬೋಟ್
ಈ ಕ್ರಮವನ್ನು ಅಂಗೀಕರಿಸುವ ಸಭೆಯಲ್ಲಿ ಭಾರೀ ಚರ್ಚೆಯಾಗಿದೆ. ಮಂಡಳಿಯ ಅಧ್ಯಕ್ಷ ಶಮನ್ ವಾಲ್ಟನ್ ಅವರಂತಹ ಕೆಲವರು ವರ್ಣ ಬೇಧ ಮಾಡಿ ಇತರ ಜನರನ್ನು ಗುರಿಯಾಗಿಸುವ ಮತ್ತೊಂದು ವಿಧಾನವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ ಅಥವಾ ಅಧಿಕಾರಿಗಳಿಗೆ ಜೀವಹಾನಿಯ ಅಪಾಯವು ಸನ್ನಿಹಿತವಾದಾಗ ಮತ್ತು ಅಂತಹ ಬೆದರಿಕೆಗಳನ್ನು ಸಾಂಪ್ರದಾಯಿಕ ಕ್ರಮಗಳಿಂದ ಎದುರಿಸಲಾಗದ ಹೊತ್ತಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರು (San Francisco police) ಈಗ ಹೆಚ್ಚಿನ ಬಲವನ್ನು ಬಳಸಲು ಮುಂದಾಗಿದ್ದಾರೆ.ಅಂದರೆ ಈ ಪೊಲೀಸ್ ಪಡೆಗೆ ಕಿಲ್ಲರ್ ರೋಬೋಟ್ (killer robots) ಸೇರ್ಪಡೆಯಾಗಲಿದೆ. ಬುಧವಾರ ಈ ಅನುಮತಿಯನ್ನು ಸ್ಯಾನ್ ಫ್ರಾನ್ಸಿಸ್ಕೋ ಬೋರ್ಡ್ ಆಫ್ ಸೂಪರ್‌ವೈಸರ್ಸ್ ನೀಡಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇದರರ್ಥ ಪೊಲೀಸರು ಈಗ ಯಾರನ್ನಾದರೂ ಕೊಲ್ಲುವುದಕ್ಕೆ ರೋಬೋಟ್‌ಗಳನ್ನು ಬಳಸಬಹುದು. ವರದಿಯ ಪ್ರಕಾರ ಈ ಪ್ರಸ್ತಾವನೆ ಎರಡನೇ ಮತವನ್ನು ಪಾಸ್ ಮಾಡಬೇಕು. ಇದು ಮುಂದಿನ ವಾರ ನಡೆಯಲಿದೆ. ಇದಾದನಂತರ ನಗರ ಕಾನೂನಾಗುವ ಮೊದಲು ಮೇಯರ್ ಲಂಡನ್ ಬ್ರೀಡ್ ಅವರು ಇದಕ್ಕೆ ಸಹಿ ಹಾಕಬೇಕು. ಆರು ವರ್ಷಗಳ ಹಿಂದೆ ಅಮೆರಿಕದಲ್ಲಿ ‘ಕಿಲ್ಲರ್ ರೋಬೋಟ್‌ಗಳು’ ಸುದ್ದಿಯಾಗಿತ್ತು. ರೊಬೊಟಿಕ್ ತೋಳು ಸ್ಫೋಟಕಗಳನ್ನು ಸ್ಫೋಟಿಸಿ ಶೂಟರ್ನ್ನು ಸಾಯಿಸಿತ್ತು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆರಂಭಿಕ ಪ್ರಸ್ತಾವನೆಯು ಈ ಅಧಿಕಾರವನ್ನು ಅನುಮತಿಸುವುದನ್ನು ಒಳಗೊಂಡಿರಲಿಲ್ಲ. ಆದರೆ ನಗರ ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಅದನ್ನು ಮುಂದಿಡಲಾಗಿದೆ.
ಮೂವರು ಹಿರಿಯ ಅಧಿಕಾರಿಗಳಲ್ಲಿ ಒಬ್ಬರು ಈ ತೀವ್ರವಾದ ಕೃತ್ಯವನ್ನು ಅಧಿಕೃತಗೊಳಿಸಬೇಕು ಎಂದು ಹೇಳಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.ಸ್ಯಾನ್ ಫ್ರಾನ್ಸಿಸ್ಕೊ ಪೊಲೀಸ್ ಇಲಾಖೆ (SFPD) ಈಗಾಗಲೇ ಕೆಲವು ರೋಬೊಟಿಕ್ ಸಹಾಯಕರನ್ನು ಹೊಂದಿದೆ. ಇದರಲ್ಲಿ ಬಾಂಬ್ ನಿಷ್ಕ್ರಿಯ ಮಾಡಲು ಬಳಸಲಾಗುತ್ತದೆ. ಇವೆಲ್ಲವನ್ನೂ ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತದೆ.ಇದು ಸಶಸ್ತ್ರ ರೋಬೋಟ್‌ಗಳನ್ನು ಹೊಂದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಕ್ರಮವನ್ನು ಅಂಗೀಕರಿಸುವ ಸಭೆಯಲ್ಲಿ ಭಾರೀ ಚರ್ಚೆಯಾಗಿದೆ. ಮಂಡಳಿಯ ಅಧ್ಯಕ್ಷ ಶಮನ್ ವಾಲ್ಟನ್ ಅವರಂತಹ ಕೆಲವರು ವರ್ಣ ಬೇಧ ಮಾಡಿ ಇತರ ಜನರನ್ನು ಗುರಿಯಾಗಿಸುವ ಮತ್ತೊಂದು ವಿಧಾನವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ನಾವು ಇದರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಾನು ನಿಜವಾಗಿಯೂ ದಿಗ್ಭ್ರಮೆಗೊಂಡಿದ್ದೇನೆಎಂದು ಅವರು ಹೇಳಿದ್ದಾರೆ. ಅಂದಹಾಗೆ ಈ ಕಾನೂನು ಜಾರಿ ವಿಭಿನ್ನವಾಗಿದೆ. ಲಾಸ್ ಏಂಜಲೀಸ್‌ನ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಅದೇ ಟೆಕ್ಸಾಸ್ ಘಟನೆಯನ್ನು ಉಲ್ಲೇಖಿಸಿ ಇದೂ ಒಂದು ಆಯ್ಕೆ ಎಂದು ಹೇಳಿದ್ದಾರೆ.