ವಲಸಿಗರು ವಾಸಿಸಲು ಅತ್ಯಂತ ಯೋಗ್ಯವಾದ, ಅತಿ ಕೆಟ್ಟದಾದ ಜಗತ್ತಿನ ಟಾಪ್ 10 ನಗರಗಳ ಪಟ್ಟಿ ಇಲ್ಲಿದೆ

TV9kannada Web Team

TV9kannada Web Team | Edited By: Sushma Chakre

Updated on: Dec 02, 2022 | 12:13 PM

ವಲಸಿಗರಿಗೆ ವಾಸಿಸಲು ಮತ್ತು ಕೆಲಸ ಮಾಡಲು ಯೋಗ್ಯವಾದ ನಗರಗಳ ಪಟ್ಟಿಯಲ್ಲಿ ಸ್ಪೇನ್‌ನ ವೇಲೆನ್ಸಿಯಾ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದುಬೈ ಇದೆ. ಮೆಕ್ಸಿಕೋ ನಗರವು ಮೂರನೇ ಸ್ಥಾನದಲ್ಲಿದೆ.

ವಲಸಿಗರು ವಾಸಿಸಲು ಅತ್ಯಂತ ಯೋಗ್ಯವಾದ, ಅತಿ ಕೆಟ್ಟದಾದ ಜಗತ್ತಿನ ಟಾಪ್ 10 ನಗರಗಳ ಪಟ್ಟಿ ಇಲ್ಲಿದೆ
ಮಿಯಾಮಿ
Image Credit source: NDTV

ವಲಸಿಗರಿಗೆ ವಾಸಿಸಲು ಮತ್ತು ಉದ್ಯೋಗ ಮಾಡಲು ಯಾವೆಲ್ಲ ಸ್ಥಳಗಳು ಸುರಕ್ಷಿತವಾಗಿವೆ ಎಂಬ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೊಸ ಸಮೀಕ್ಷೆಯ ಪ್ರಕಾರ ಮೂರು ಬೇರೆ ಬೇರೆ ಖಂಡಗಳಲ್ಲಿನ 3 ವಿಭಿನ್ನ ನಗರಗಳು ವಲಸಿಗರಿಗೆ ವಾಸಿಸಲು ಮತ್ತು ಕೆಲಸ ಮಾಡಲು ಉತ್ತಮ ಸ್ಥಳಗಳಾಗಿವೆ. ಸ್ಪೇನ್‌ನ (Spain) ವೇಲೆನ್ಸಿಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದುಬೈ (Dubai) ಇದೆ. ಮೆಕ್ಸಿಕೋ (Mexico) ನಗರವು ಮೂರನೇ ಸ್ಥಾನದಲ್ಲಿದೆ.

ಟಾಪ್ 50 ನಗರಗಳ ಪೈಕಿ ಜೋಹಾನ್ಸ್​ಬರ್ಗ್​ ಕೊನೆಯ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್ ಮತ್ತು ಫ್ರೆಂಚ್ ರಾಜಧಾನಿ ಪ್ಯಾರಿಸ್ ಇದೆ. ಈ ನಗರಗಳು ಕೂಡ ವಲಸಿಗರಿಗೆ ಹೆಚ್ಚು ಯೋಗ್ಯವಲ್ಲ ಎನ್ನಲಾಗಿದೆ. ಮಿಯಾಮಿಯು 12ನೇ ಸ್ಥಾನದಲ್ಲಿದ್ದು, ಇದು ಈ ಪಟ್ಟಿಯಲ್ಲಿ ಅತ್ಯುನ್ನತ ಶ್ರೇಣಿಯನ್ನು ಹೊಂದಿರುವ ಉತ್ತರ ಅಮೆರಿಕಾದ ನಗರವಾಗಿದೆ. ನ್ಯೂಯಾರ್ಕ್ 16ನೇ ಸ್ಥಾನದಲ್ಲಿದೆ ಮತ್ತು ಟೊರೊಂಟೊ 19ನೇ ಸ್ಥಾನದಲ್ಲಿದೆ. ಲಂಡನ್ 40ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Bangalore University: ಭಾರತದ ಟಾಪ್ 7 ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರಿನ ಯುನಿವರ್ಸಿಟಿಗೂ ಸ್ಥಾನ

ಏಷ್ಯಾದ ಇತರೆ ಭಾಗಗಳಲ್ಲಿ ಬ್ಯಾಂಕಾಕ್ ಕಡಿಮೆ ಜೀವನ ವೆಚ್ಚದ ಕಾರಣದಿಂದಾಗಿ 6ನೇ ಸ್ಥಾನದಲ್ಲಿದೆ. ಮೆಲ್ಬೋರ್ನ್‌ 8ನೇ ಸ್ಥಾನವನ್ನು ಗಳಿಸಿದೆ. ಸಿಂಗಾಪುರವು ಟಾಪ್ 10ರಲ್ಲಿ ಸ್ಥಾನ ಪಡೆದಿದೆ. 181 ದೇಶಗಳು ಅಥವಾ ಪ್ರಾಂತ್ಯಗಳಲ್ಲಿ ವಾಸಿಸುವ 11,970 ವಲಸಿಗರಿಂದ ಅಂತರ್ ರಾಷ್ಟ್ರಗಳು ಮಾಹಿತಿಯನ್ನು ಸಂಗ್ರಹಿಸಿವೆ.

ವಲಸಿಗರಿಗೆ ಹೆಚ್ಚು ಇಷ್ಟವಾಗಿರುವ ಟಾಪ್ 10 ನಗರಗಳ ಪಟ್ಟಿ ಇಲ್ಲಿದೆ. 1. ವೇಲೆನ್ಸಿಯಾ, ಸ್ಪೇನ್: ವಾಸಯೋಗ್ಯ, ಸ್ನೇಹಿ ಮತ್ತು ಕೈಗೆಟುಕುವ ಬೆಲೆಯಲ್ಲಿದೆ. 2. ದುಬೈ, ಯುಎಇ: ಕೆಲಸ ಮತ್ತು ವಿರಾಮಕ್ಕೆ ಉತ್ತಮವಾಗಿದೆ. 3. ಮೆಕ್ಸಿಕೋ ಸಿಟಿ, ಮೆಕ್ಸಿಕೋ: ಸೌಹಾರ್ದ ಮತ್ತು ಕೈಗೆಟುಕುವ ದರದಲ್ಲಿದೆ. ಆದರೆ ಅಸುರಕ್ಷಿತವಾಗಿದೆ. 4. ಲಿಸ್ಬನ್, ಪೋರ್ಚುಗಲ್: ಅದ್ಭುತ ಹವಾಮಾನ ಮತ್ತು ಜೀವನದ ಗುಣಮಟ್ಟವಿದೆ. 5. ಮ್ಯಾಡ್ರಿಡ್, ಸ್ಪೇನ್: ಉತ್ತಮ ವಿರಾಮ ಚಟುವಟಿಕೆಗಳು, ಸ್ವಾಗತಾರ್ಹ ಸಂಸ್ಕೃತಿಯಿದೆ. 6. ಬ್ಯಾಂಕಾಕ್, ಥೈಲ್ಯಾಂಡ್: ಸುರಕ್ಷತೆ. 7. ಬಾಸೆಲ್, ಸ್ವಿಜರ್ಲೆಂಡ್: ವಲಸಿಗರು ಹಣಕಾಸು, ಉದ್ಯೋಗಗಳು, ಜೀವನದ ಗುಣಮಟ್ಟದಲ್ಲಿ ತೃಪ್ತರಾಗಿದ್ದಾರೆ. 8. ಮೆಲ್ಬೋರ್ನ್, ಆಸ್ಟ್ರೇಲಿಯಾ: ಹೊಂದಿಕೊಳ್ಳಲು ಸುಲಭವಾದ ನಗರವಾಗಿದೆ. 9. ಅಬುಧಾಬಿ, ಯುಎಇ: ಅತ್ಯುತ್ತಮ ಆರೋಗ್ಯ ರಕ್ಷಣೆ, ಚಿಂತೆ ಮುಕ್ತ ಅಧಿಕಾರಶಾಹಿ. 10. ಸಿಂಗಾಪುರ: ಸುಲಭ ಆಡಳಿತ, ತೃಪ್ತಿಕರ ಹಣಕಾಸು, ಸುಧಾರಿತ ವೃತ್ತಿ ಭವಿಷ್ಯ.

ಇದನ್ನೂ ಓದಿ: TCS: ಅತಿಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುತ್ತಿದೆ ಟಿಸಿಎಸ್; ಇಲ್ಲಿದೆ ಟಾಪ್ 10 ಪಟ್ಟಿ

ವಲಸಿಗರು ಇಷ್ಟಪಡದ ಟಾಪ್ 10 ನಗರಗಳ ಪಟ್ಟಿ ಇಲ್ಲಿದೆ. 1. ರೋಮ್, ಇಟಲಿ 2. ಟೋಕಿಯೊ, ಜಪಾನ್ 3. ವ್ಯಾಂಕೋವರ್, ಕೆನಡಾ 4. ಮಿಲನ್, ಇಟಲಿ 5. ಹ್ಯಾಂಬರ್ಗ್, ಜರ್ಮನಿ 6. ಹಾಂಗ್ ಕಾಂಗ್, ಚೀನಾ 7. ಇಸ್ತಾಂಬುಲ್, ಟರ್ಕಿ 8. ಪ್ಯಾರಿಸ್, ಫ್ರಾನ್ಸ್ 9. ಫ್ರಾಂಕ್‌ಫರ್ಟ್, ಜರ್ಮನಿ 10. ಜೋಹಾನ್ಸ್‌ಬರ್ಗ್, ದಕ್ಷಿಣ ಆಫ್ರಿಕಾ

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada