ರಷ್ಯಾ ವಿರುದ್ಧದ ಹೋರಾಟದಲ್ಲಿ ಯುದ್ಧ ಪೀಡಿತ ದೇಶಕ್ಕೆ ಬೆಂಬಲ ಸೂಚಿಸಲು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ (Jill Biden) ಭಾನುವಾರ ಉಕ್ರೇನ್‌ಗೆ (Ukraine) ದಿಢೀರ್ ಭೇಟಿ ನೀಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅವರು ಉಕ್ರೇನ್ನ ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾ (Olena Zelenska) ಅವರನ್ನು ಭೇಟಿಯಾದರು. “ಈ ಯುದ್ಧ ನಿಲ್ಲಬೇಕು.ಯುದ್ಧವು ಕ್ರೂರವಾಗಿದೆ. ಅಮೆರಿಕದ ಜನರು ಉಕ್ರೇನ್ ಜನರೊಂದಿಗೆ ನಿಲ್ಲುತ್ತಾರೆ ಎಂದು ಉಕ್ರೇನಿಯನ್ ಜನರಿಗೆ ತೋರಿಸುವುದು ಮುಖ್ಯ ಎಂದು ನಾನು ಭಾವಿಸಿದೆ” ಎಂದು ಅವರು ಹೇಳಿದರು. ಇದಕ್ಕಿಂತ ಮುನ್ನ ಅಮೆರಿಕದ ಪ್ರಥಮ ಮಹಿಳೆ ಸ್ಲೋವಾಕಿಯಾದಲ್ಲಿ ತಾಯಂದಿರ ದಿನವನ್ನು ಆಚರಿಸಿದರು. ಯುದ್ಧದ ಕಾರಣದಿಂದಾಗಿ ಸ್ಥಳಾಂತರಗೊಂಡ ಉಕ್ರೇನಿಯನ್ ತಾಯಂದಿರೊಂದಿಗೆ ಸಂವಾದ ನಡೆಸಿದ ಜಿಲ್, ‘ಅಮೆರಿಕನ್ ಜನರ ಹೃದಯಗಳು’ ಅವರೊಂದಿಗಿವೆ ಎಂದು ಅವರು ಭರವಸೆ ನೀಡಿದರು. ನಾನು ತಾಯಂದಿರ ದಿನದಂದು ಬರಲು ಬಯಸಿದ್ದೆ ಎಂದು ಜಿಲ್ ಅವರು ಝೆಲೆನ್ಸ್ಕಾಗೆ ಹೇಳಿದರು. ಜಿಲ್ ಬೈಡನ್ ಅವರು ಉಕ್ರೇನ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಉಜ್ಹೊರೊಡ್ ಪಟ್ಟಣಕ್ಕೆ ವಾಹನದಲ್ಲಿ ಪ್ರಯಾಣಿಸಿದರು. ಉಜ್ಹೊರೊಡ್ ಪಟ್ಟಣಕ್ಕೆ ಸ್ಲೋವಾಕಿಯಾದ ಹಳ್ಳಿಯಿಂದ ಸುಮಾರು 10 ನಿಮಿಷಗಳ ದೂರವಿದೆ. ಪ್ರಥಮ ಮಹಿಳೆಯರು ಚಿಕ್ಕ ಕೋಣೆಯೊಂದರಲ್ಲಿ ಮೇಜಿನ ಮುಂದೆ ಎದುರೆದುರಾಗಿ ಕುಳಿತುಕೊಂಡರು. ಇವರಿಬ್ಬರು ಖಾಸಗಿಯಾಗಿ ಭೇಟಿಯಾಗುವ ಮೊದಲು ಮಾಧ್ಯಮದವರ ಮುಂದೆ ಶುಭಾಶಯ ಕೋರಿದರು. ಝೆಲೆನ್ಸ್ಕಾ ಮತ್ತು ಆಕೆಯ ಮಕ್ಕಳು ತಮ್ಮ ಸುರಕ್ಷತೆಗಾಗಿ ಅಜ್ಞಾತ ಸ್ಥಳದಲ್ಲಿದ್ದಾರೆ.
ಈ ಭೇಟಿಯು ಜಿಲ್ ಬೈಡನ್ ಅವರಿಗೆ ತಾನು ಇಷ್ಟಪಡುವ ರೀತಿಯ ವೈಯಕ್ತಿಕ ರಾಜತಾಂತ್ರಿಕತೆಯನ್ನು ನಡೆಸಲು ಅವಕಾಶ ಮಾಡಿಕೊಟ್ಟಿತ್ತು.
This Mother’s Day, I wanted to be with Ukrainian mothers and their children.
Over the last few months, far too many Ukrainians have had to flee their homes – forcing them to leave behind their loved ones. pic.twitter.com/zjtMv5ey0B
— Jill Biden (@FLOTUS) May 8, 2022
ಅಧ್ಯಕ್ಷ ಜೋ ಬೈಡನ್ ಅವರು ಮಾರ್ಚ್‌ನಲ್ಲಿ ಪೋಲೆಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು “ಸ್ವತಃ” ಪರಿಸ್ಥಿತಿಗಳನ್ನು ನೋಡಲು ಉಕ್ರೇನ್‌ಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದು ನಿರಾಶೆಗೊಂಡರು. ಆದರೆ ಭದ್ರತಾ ಕಾರಣಗಳಿಂದಾಗಿ ಅವರನ್ನು ಅನುಮತಿಸಲಾಗಿಲ್ಲ. ಅಧ್ಯಕ್ಷರು “ಭೇಟಿ ಮಾಡಲು ಇಷ್ಟಪಡುತ್ತಾರೆ” ಆದರೆ ಈ ಸಮಯದಲ್ಲಿ ಅವರು ಹಾಗೆ ಮಾಡುವ ಯಾವುದೇ ಯೋಜನೆಗಳಿಲ್ಲ ಎಂದು ಶ್ವೇತಭವನವು ಕಳೆದ ವಾರದವರೆಗೆ ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 8:38 pm, Sun, 8 May 22