ರಷ್ಯಾಗೆ ಎದುರೇಟು ನೀಡಲು ಪಾಕ್ ಜತೆ ಸ್ನೇಹ ಹಸ್ತ ಚಾಚಿದ ಅಮೆರಿಕ
ಪಾಕಿಸ್ತಾನದ ಜತೆಗೆ ತನ್ನ ಸಂಬಂಧವನ್ನು ಬೆಳೆಸಿಕೊಂಡು ಅಮೆರಿಕಕ್ಕೆ ಎದುರೇಟು ನೀಡಬೇಕೆನ್ನುವ ರಷ್ಯಾದ ಲೆಕ್ಕಾಚಾರಕ್ಕೆ ಜೋ ಬೈಡನ್ ಸರ್ಕಾರ ತಿರುಗೇಟು ನೀಡಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಪಾಕಿಸ್ತಾನದ ವಿದೇಶಾಂಗ ಸಚಿವ ಬುಟ್ಟೋ ಅವರ ಬಳಿ ಮಾತನಾಡಿದ್ದು, ಉಭಯ ದೇಶಗಳ ಸಹಕಾರದ ಒಪ್ಪಂದವನ್ನು ಮುಂದುವರೆಸುವ ಬಗ್ಗೆ ಚರ್ಚೆ ನಡೆಸಿದ್ದಾರೆಂದು ವರದಿಯಾಗಿದೆ.
ಪಾಕಿಸ್ತಾನದ ಜತೆಗೆ ತನ್ನ ಸಂಬಂಧವನ್ನು ಬೆಳೆಸಿಕೊಂಡು ಅಮೆರಿಕಕ್ಕೆ ಎದುರೇಟು ನೀಡಬೇಕೆನ್ನುವ ರಷ್ಯಾದ ಲೆಕ್ಕಾಚಾರಕ್ಕೆ ಜೋ ಬೈಡನ್ ಸರ್ಕಾರ ತಿರುಗೇಟು ನೀಡಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಪಾಕಿಸ್ತಾನದ ವಿದೇಶಾಂಗ ಸಚಿವ ಭುಟ್ಟೋ ಅವರ ಬಳಿ ಮಾತನಾಡಿದ್ದು, ಉಭಯ ದೇಶಗಳ ಸಹಕಾರದ ಒಪ್ಪಂದವನ್ನು ಮುಂದುವರೆಸುವ ಬಗ್ಗೆ ಚರ್ಚೆ ನಡೆಸಿದ್ದಾರೆಂದು ವರದಿಯಾಗಿದೆ. ಇದೇ ಫೆಬ್ರವರಿ 24ರಂದು ಪಾಕಿಸ್ತಾನ ಪ್ರಧಾನಿ ಶಹ್ಬಾಸ್ ಶರೀಫ್ ಮಾಸ್ಕೋಗೆ ಭೇಟಿ ನೀಡಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದರು.
ಹಾಗಾಗಿ ಅಮೆರಿಕವು ಪಾಕಿಸ್ತಾನವು ರಷ್ಯಾದ ಜತೆಗೆ ಸಂಬಂಧ ಹೊಂದುವುದನ್ನು ತಡೆಯಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಇದರ ಭಾಗವಾಗಿ ಇದೀಗ ಪಾಕಿಸ್ತಾನದ ವಿದೇಶಾಮಗ ಸಚಿವ ಭುಟ್ಟೋ ಅವರನ್ನು ಭೇಟಿಯಾಗುವ ನಿರ್ಧಾರ ಮಾಡಿದೆ. ವಿಶ್ವಸಂಸ್ಥೆಯ ಆಹಾರ ಭದ್ರತಾ ಸಭೆಯು ಮೇ 18ರಂದು ನಡೆಯುತ್ತಿದ್ದು, ಅಮೆರಿಕದ ಕಾರ್ಯದರ್ಶಿ ಬ್ಲಿಂಕನ್ ಪಾಕಿಸ್ತಾನದ ವಿದೇಶಾಂಗ ಸಚಿವ ಭುಟ್ಟೋ ಅವರನ್ನು ಆಹ್ವಾನಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಎರಡನೇ ಕೋವಿಡ್ ಗ್ಲೋಬಲ್ ಸಮಿತ್ ಹಾಗೂ ಆಹಾರ ಭದ್ರತಾ ಸಭೆ ಎರಡಕ್ಕೂ ಆಹ್ವಾನ ನೀಡಿರುವುದಾಗಿ ತಿಳಿಸಿದ್ದಾರೆ. ಇದೀಗ ಈ ಘಟನೆಯ ಬಳಿಕ ಅಮೆರಿಕವು ಪಾಕಿಸ್ತಾನವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ. ಇನ್ನೊಂದು ವಿಚಾರವೇನೆಂದರೆ ರಷ್ಯಾದಿಂದ ಆಕ್ರಮಣಕ್ಕೊಳಗಾಗಿರುವ ಉಕ್ರೇನ್ ದೇಶಕ್ಕೆ ಬೆಂಬಲ ನೀಡುತ್ತಿರುವ ಜಿ-7 ದೇಶಗಳ ನಾಯಕರು ಇಂದು ಉಕ್ರೇನ್ ಅಧ್ಯಕ್ಷರೊಂದಿಗೆ ಮಾತನಾಡಲಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಏಳು ದೇಶಗಳ ಮುಖ್ಯಸ್ಥರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವೊಲೋದಿಮಿರ್ ಝೆಲೆನ್ಸ್ಕಿ ಅವರನ್ನ ಭೇಟಿಯಾಗಲಿದ್ದಾರೆ. ಜಿ-7 ಗುಂಪಿನಲ್ಲಿ ವಿಶ್ವದ ಅಗ್ರಮಾನ್ಯ ಆರ್ಥಿಕಶಕ್ತ ದೇಶಗಳಿವೆ. ಅಮೆರಿಕ, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಈ ಗುಂಪಿನಲ್ಲಿವೆ. ಈ ದೇಶಗಳ ಉಕ್ರೇನ್‌ಗೆ ವಿವಿಧ ರೀತಿಯಲ್ಲಿ ಬೆಂಬಲ ನೀಡಲು ಮುಂದಾಗಿವೆ.
ಉಕ್ರೇನ್ ಅಧ್ಯಕ್ಷರೊಂದಿಗೆ ಸಭೆ ನಡೆಯುವ ಮುನ್ನ ಬ್ರಿಟನ್ ಪ್ರಧಾನಿ ಉಕ್ರೇನ್‌ಗೆ 1.3 ಬಿಲಿಯನ್ ಡಾಲರ್ ಹಣದ ನೆರವು ಘೋಷಿಸಿದ್ದಾರೆ. “ರಷ್ಯಾದ ನಿರ್ದಯ ದಾಳಿಯಿಂದ ಉಕ್ರೇನ್‌ಗೆ ಬಹಳ ಹಾನಿ ಮಾಡಿದೆ. ಈ ದಾಳಿಯಿಂದಾಗಿ ಯೂರೋಪ್‌ನ ಬೇರೆಡೆಯಲ್ಲೂ ಶಾಂತಿ ಮತ್ತು ಭದ್ರತೆಗೆ ಅಪಾಯದ ಪರಿಸ್ಥಿತಿ ತಂದೊಡ್ಡಿದೆ” ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಫೆಬ್ರವರಿ 24ರಿಂದ ನಡೆಯುತ್ತಿರುವ ಈ ಯುದ್ಧದಿಂದಾಗಿ ನೂರಾರು ಮಂದಿ ನಾಗರಿಕರು ಬಲಿಯಾಗಿದ್ಧಾರೆ. ಲಕ್ಷಾಂತರ ಮಂದಿ ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಉಕ್ರೇನ್-ರಷ್ಯಾ ಯುದ್ಧದಿಂದ ಆಂತರಿಕವಾಗಿ ಅತಂತ್ರವಾಗಿರುವ ಜನರು, ರೋಮಾ ಜನಾಂಗದವರು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅಶಕ್ತ ಜನರಿಗೆ ಅತಿ ಹೆಚ್ಚು ತೊಂದರೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್