ಉಕ್ರೇನ್ ಮೇಲೆ ರಷ್ಯಾ ಅಪ್ರಚೋದಿತ ದಾಳಿ ನಡೆಸುತ್ತಿದೆ. ರಷ್ಯಾ (Russia) ಪ್ರೀಪ್ಲ್ಯಾನ್ ಯುದ್ಧ ನಡೆಸುತ್ತಿದೆ. ನ್ಯಾಟೋ ದೇಶಗಳು ಪ್ರತಿಕ್ರಿಯಿಸಲ್ಲ ಎಂದು ಭಾವಿಸಿದ್ದರು. ಅಮೆರಿಕ (America) ವಾಯುನೆಲೆಯಲ್ಲಿ ರಷ್ಯಾ ವಿಮಾನಗಳಿಗೆ ಬ್ಯಾನ್ ಮಾಡಲಾಗಿದೆ. ಇಡೀ ವಿಶ್ವವೇ ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ದೂರ ಇಟ್ಟಿದೆ. ರಷ್ಯಾ ವಿರುದ್ಧ ಉಕ್ರೇನ್ (Ukraine) ಧೈರ್ಯವಾಗಿ ಯುದ್ಧ ಮಾಡ್ತಿದೆ. ನಾವು ಉಕ್ರೇನ್ ಪರವಾಗಿ ರಷ್ಯಾ ವಿರುದ್ಧ ಹೋರಾಡಲ್ಲ. ಆದರೆ ಉಕ್ರೇನ್ ಪರವಾಗಿ ಅಮೆರಿಕ ನಿಲ್ಲುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ತಿಳಿಸಿದ್ದಾರೆ.
ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಬೈಡೆನ್ ಭಾಷಣ ಮಾಡಿದ್ದಾರೆ. ಉಕ್ರೇನ್ ಪರವಾಗಿ ನಿಲ್ಲುವುದಾಗಿ ಬೈಡೆನ್ ಘೋಷಣೆ ಮಾಡಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಸಂಘರ್ಷದಲ್ಲಿ (Russia Ukraine War) ರಷ್ಯಾ ಮೊದಲ ದಿನದಿಂದಲೂ ಮೇಲುಗೈ ಸಾಧಿಸಿದೆ. ಯುದ್ಧರಂಗಕ್ಕೆ ಅಮೆರಿಕ ಪ್ರವೇಶಿಸಿದರೆ ಪರಿಸ್ಥಿತಿ ಬದಲಾಗಬಹುದು ಎಂದು ಈವರೆಗೆ ಹಲವು ವಿಶ್ಲೇಷಿಸಿದ್ದರು. ಆದರೆ ಇಂಥ ಊಹಾಪೋಹಗಳಿಗೆ ತೆರೆ ಎಳೆದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಅಮೆರಿಕ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾ ಪೂರ್ವನಿಯೋಜಿತ ಮತ್ತು ಅಪ್ರಚೋದಿತ ದಾಳಿ ನಡೆಯುತ್ತಿದೆ. ನ್ಯಾಟೊ ದೇಶಗಳು ಉಕ್ರೇನ್ ರಕ್ಷಣೆಗೆ ಧಾವಿಸುವುದಿಲ್ಲ ಎಂದೇ ರಷ್ಯಾ ಭಾವಿಸಿಕೊಂಡಿದೆ. ಆದರೆ ನಾವು ಸುಮ್ಮನೆ ಕುಳಿತಿಲ್ಲ. ಇಡೀ ವಿಶ್ವವೇ ರಷ್ಯಾದ ನಡೆಯನ್ನು ಖಂಡಿಸಿದೆ. ಅಮೆರಿಕ ವಾಯುನೆಲೆಯಲ್ಲಿ ರಷ್ಯಾ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ರಷ್ಯಾ ವಿರುದ್ಧ ಉಕ್ರೇನ್ನ ಜನರು ಧೈರ್ಯವಾಗಿ ಹೋರಾಡುತ್ತಿದ್ದಾರೆ. ನಾವು ಉಕ್ರೇನ್ ಪರ ಇರುವುದರು ನಿಜ. ಆದರೆ ರಷ್ಯಾ ವಿರುದ್ಧ ನೇರವಾಗಿ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.
ರಷ್ಯಾದ ಪುಟಿನ್ ಯುದ್ಧಭೂಮಿಯಲ್ಲಿ ಜಯಗಳಿಸಬಹು. ಆದರೆ ಭವಿಷ್ಯದಲ್ಲಿ ತಕ್ಕ ಬೆಲೆ ತೆರಲಿದ್ದಾರೆ. ಯುದ್ಧಭೂಮಿಯಲ್ಲಿ ಪುಟಿನ್ ಲಾಭಗಳಿಸಬಹು. ದೀರ್ಘಾವಧಿಯಲ್ಲಿ ರಷ್ಯಾ ನಿರಂತರ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಭವಿಷ್ಯ ಏನಾಗಲಿದೆ ಎಂದು ಪುಟಿನ್ಗೆ ತಿಳಿದಿಲ್ಲ. ಕೆಲವು ನಿರ್ಬಂಧಗಳಿಂದ ರಷ್ಯಾವನ್ನು ಉಸಿರುಗಟ್ಟಿಸುತ್ತಿದ್ದೇವೆ. ಇದು ರಷ್ಯಾ ಆರ್ಥಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಮುಂಬರುವ ವರ್ಷಗಳಲ್ಲಿ ರಷ್ಯಾ ಮಿಲಿಟರಿ ದುರ್ಬಲಗೊಳ್ಳಲಿದೆ ಎಂದು ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಜೋ ಬೈಡನ್ ಹೇಳಿದ್ದಾರೆ.
ಇದನ್ನೂ ಓದಿ: Russia-Ukraine War: ಕೀವ್ನಲ್ಲಿರುವ ಟಿವಿ ಟವರ್ ಮೇಲೆ ರಷ್ಯಾ ಬಾಂಬ್ ದಾಳಿ; 5 ಮಂದಿ ಸಾವು, ಚಾನಲ್ಗಳೆಲ್ಲ ಸ್ಥಗಿತ
ಇದನ್ನೂ ಓದಿ: Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಏನಾಗಲಿದೆ ಭಾರತದ ಆರ್ಥಿಕ ಪರಿಸ್ಥಿತಿ?
Published On - 8:51 am, Wed, 2 March 22