
ವಾಷಿಂಗ್ಟನ್, ಮಾರ್ಚ್ 18: ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಹೊರಗೆ ಕಳುಹಿಸಲು ಅಮೆರಿಕದ ಸರ್ಕಾರ ಹೊಸ ಪ್ಲಾನ್ ಹಾಕಿದೆ. ವಲಸಿಗರು ತಾವಾಗಿಯೇ ಹೊರ ಹೋಗಲು ಬಯಸಿದರೆ ಒಂದಷ್ಟು ಹಣಕಾಸು ನೆರವು ಕೊಡುವುದಾಗಿ ಸರಕಾರ ಹೇಳಿದೆ. ಈ ವಲಸಿಗರು ಹೊರಹೋಗುವುದಾದರೆ ಅವರಿಗೆ 2,600 ಡಾಲರ್ಗಳ ಎಕ್ಸಿಟ್ ಬೋನಸ್ ಕೊಡಲಾಗುವುದು. ಅಂದರೆ, ಸುಮಾರು ಎರಡೂವರೆ ಲಕ್ಷ ರೂ ಪ್ರೋತ್ಸಾಹ ಧನ ಕೊಡಲಾಗುವುದು. ಜೊತೆಗೆ, ದಂಡಪಾವತಿ ಇತ್ಯಾದಿಯಿಂದ ವಿನಾಯಿತಿ ಸಿಗುತ್ತದೆ. ಫ್ಲೈಟ್ ಟಿಕೆಟ್ ಅನ್ನೂ ಸರ್ಕಾರವೇ ಒದಗಿಸುತ್ತದೆ.
ಅಮೆರಿಕದ ಗೃಹ ಭದ್ರತಾ ಇಲಾಖೆ ಇಂಥದ್ದೊಂದು ಆಫರ್ ಅನ್ನು ಅಕ್ರಮ ವಲಸಿಗರಿಗೆ ನೀಡಿದೆ. ಎಲ್ಲಾ ದೇಶದಿಂದ ಬಂದು ಅಕ್ರಮವಾಗಿ ನೆಲಸಿರುವ ವಲಸಿಗರಿಗೆ ಇದು ಅನ್ವಯ ಆಗುತ್ತದೆ. ತಮ್ಮ ದೇಶಕ್ಕೆ ವಾಪಸ್ ಹೋಗುವಂತೆ ಕೊಟ್ಟಿರುವ ಗಡುವು ಮೀರಿ ನೆಲಸಿರುವವರನ್ನು ಬಂಧಿಸಿ, ದಂಡ ವಿಧಿಸಿ, ಬಲವಂತವಾಗಿ ಗಡೀಪಾರು ಮಾಡುವ ಕಾನೂನು ಅಮೆರಿಕದಲ್ಲಿ ತರಲಾಗಿದೆ. ಆದರೆ, ಆ ಪರಿಸ್ಥಿತಿಯಲ್ಲಿ ಸಿಲುಕಲು ಬಯಸದೆ ಗೌರವಯುತವಾಗಿ ಹೊರಹೋಗಲು ಅವಕಾಶ ಬಯಸುತ್ತಿರುವವರಿಗೆ ಗೃಹ ಇಲಾಖೆ ಆಫರ್ ಕೊಟ್ಟಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡಕ್ಕೆ ಬೆಂಕಿ; ಮೂರು ಮಕ್ಕಳು ಸೇರಿ ಆರು ಮಂದಿ ಬಲಿ
ಅಮೆರಿಕದಿಂದ ತಾವಾಗೇ ಹೊರಹೋಗಲು ಬಯಸುವ ಅಕ್ರಮ ವಲಸಿಗರಿಗೆ 2,600 ಡಾಲರ್ಗಳ ಎಕ್ಸಿಟ್ ಬೋನಸ್ ಕೊಡಲಾಗುತ್ತದೆ. ಉಚಿತವಾಗಿ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತದೆ. ಕೆಲ ದಂಡಗಳಿಂದಲೂ ವಿನಾಯಿತಿ ಕೊಡುತ್ತದೆ.
ಅಮೆರಿಕದ ಗೃಹ ಇಲಾಖೆಯ ಟ್ವೀಟ್
‘ನೀವು ನಿಮ್ಮ ದೇಶಕ್ಕೆ ಬೇಕಾದರೆ ಹೋಗಬಹುದು. ಅಥವಾ ನಿಮಗೆ ಕಾನೂನುಬದ್ಧ ವಾಸಕ್ಕೆ ಅವಕಾಶ ಇರುವ ದೇಶಕ್ಕೆ ಬೇಕಾದರೂ ಹೋಗಬಹುದು. ನೀವಾಗಿಯೇ ಹೋದರೆ ಭತ್ಯೆ ಕೊಡಲಾಗುತ್ತದೆ’ ಎಂದು ಅಮೆರಿಕದ ಗೃಹ ಇಲಾಖೆ ಹೇಳಿದೆ.
ಇದನ್ನೂ ಓದಿ: ಫ್ಲೈಟ್ನಲ್ಲಿ ಶುಲ್ಕರಹಿತ ಸೀಟುಗಳು ಕನಿಷ್ಠ ಶೇ. 60 ಇರಬೇಕು; ಸರ್ಕಾರದಿಂದ ಹೊಸ ನಿಯಮಗಳು
ಇಲಾಖೆ ತನ್ನ ಎಕ್ಸ್ ಅಕೌಂಟ್ನಿಂದ ಮಾಡಿದ ಒಂದು ಟ್ವೀಟ್ನಲ್ಲಿ ತಾಜ್ಮಹಲ್ ಫೋಟೋ ಕೂಡ ಇದೆ. ಅದು ಅಕ್ರಮವಾಗಿ ನೆಲಸಿರುವ ಭಾರತೀಯರನ್ನು ಉದ್ದೇಶಿಸಿ ಮಾಡಿರುವಂಥದ್ದು. ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ವಲಸಿಗರಲ್ಲಿ ಭಾರತೀಯ ಸಮುದಾಯ 3ನೇ ಸ್ಥಾನ ಪಡೆಯುತ್ತದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ