ಅಮೇರಿಕವನ್ನು ಒಂದೇ ಶಬ್ದದಲ್ಲಿ ವರ್ಣಿಸಲು ಪ್ರಯತ್ನಿಸಿದ ಅಧ್ಯಕ್ಷ ಬೈಡೆನ್ ಎಡವಟ್ಟು ಮಾಡಿಬಿಟ್ಟರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 25, 2022 | 8:02 AM

ಅವರು ಹೇಳೋದು ‘Asufutimaehaehfutbw...’ ಅಂತ. ನೀವು ಈ ಶಬ್ದವನ್ನು ಉಚ್ಛರಿಸಬಲ್ಲಿರಾ? ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಯಂಕರ ವೈರಲ್ ಆಗಿಬಿಟ್ಟಿದೆ ಮಾರಾಯ್ರೇ. ಜನ ಬಿದ್ದು ಬಿದ್ದು ನಗುತ್ತಿದ್ದಾರೆ ಮತ್ತು ಗೇಲಿಮಾಡುತ್ತಾ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

ಅಮೇರಿಕವನ್ನು ಒಂದೇ ಶಬ್ದದಲ್ಲಿ ವರ್ಣಿಸಲು ಪ್ರಯತ್ನಿಸಿದ ಅಧ್ಯಕ್ಷ ಬೈಡೆನ್ ಎಡವಟ್ಟು ಮಾಡಿಬಿಟ್ಟರು!
ಯುಎಸ್ ಅಧ್ಯಕ್ಷ ಜೋ ಬೈಡೆನ್
Follow us on

ನಮ್ಮ ಪ್ರಧಾನ ಮಂತ್ರಿ ನರೆಂದ್ರ ಮೋದಿ (PM Narendra Modi) ಅವರು ಹೇಳೋದು ಕರೆಕ್ಟ್ ಮಾರಾಯ್ರೇ. 75 ರ ನಂತರ ಯಾವುದೇ ವ್ಯಕ್ತಿ, ಅವನೆಷ್ಟೇ ಅರೋಗ್ಯವಂತನಾಗಿದ್ದರೂ ರಾಜಕೀಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಮುಂದುವರಿಯಬಾರದು. ಮುಂದುವರಿದರೆ ಏನಾಗುತ್ತದೆ ಅನ್ನೋದಿಕ್ಕೆ ಅಮೇರಿಕಾದ (America) 79 ವರ್ಷ ವಯಸ್ಸಿನ ಜೋ ಬೈಡೆನ್ (Joe Biden) ಅವರೇ ಅತ್ಯುತ್ತಮ ನಿದರ್ಶನ. ಅವರು ಸಾರ್ವಜನಿಕವಾಗಿ ಮಾತಾಡುವಾಗ, ಮಾಧ್ಯಮದವರೊಂದಿಗೆ ಮಾತಾಡುವಾಗ ಪದೇಪದೆ ಎಚ್ಚರತಪ್ಪಿ ಮಾತಾಡುತ್ತಾರೆ ಇಲ್ಲವೇ ತಾನೇನು ಮಾತಾಡುತ್ತಿರುವೆ ಅನ್ನೋದನ್ನೇ ಮರೆತು ಬಿಡುತ್ತಾರೆ.

ಗುರುವಾರ ಯುಎಸ್ ನಲ್ಲಿ ಏನಾಗಿದೆ ಅಂತ ನೀವೇ ನೋಡಿ. ಈ ವಿಡಿಯೋ ಎಲ್ಲವನ್ನು ನಿಮಗೆ ವಿವರಿಸುತ್ತದೆ. ಅವರು ತಮ್ಮ ದೇಶವನ್ನು ಒಂದೇ ಶಬ್ದದಲ್ಲಿ ವಿವರಿಸುವ ಪ್ರಯತ್ನ ಮಾಡುತ್ತಾರೆ. ಆ ಭರಾಟೆಯಲ್ಲಿ ಯಾರೂ ಉಚ್ಚರಿಸಲಾದಂಥ ಶಬ್ದವನ್ನು ಉಸುರಿಬಿಡುತ್ತಾರೆ!

ಅವರು ಹೇಳೋದು ‘Asufutimaehaehfutbw…’ ಅಂತ. ನೀವು ಈ ಶಬ್ದವನ್ನು ಉಚ್ಛರಿಸಬಲ್ಲಿರಾ? ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಯಂಕರ ವೈರಲ್ ಆಗಿಬಿಟ್ಟಿದೆ ಮಾರಾಯ್ರೇ. ಜನ ಬಿದ್ದು ಬಿದ್ದು ನಗುತ್ತಿದ್ದಾರೆ ಮತ್ತು ಗೇಲಿಮಾಡುತ್ತಾ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

ಟ್ವಿಟ್ಟರ್ ನಲ್ಲಿ ಶೇರ್ ಆಗಿರುವ ವಿಡಿಯೋದಲ್ಲಿ ಬೈಡೆನ್ ಒಂದು ಪ್ಲಾಟ್ಫಾರ್ಮ್ ಮೇಲೆ ನಿಂತಿದ್ದಾರೆ ಅವರ ಹಿಂಭಾಗದಲ್ಲಿ ಯುಎಸ್ ಸರ್ಕಾರದ ಲೊಗೋ ಕಾಣುತ್ತಿದೆ, ಅವರ ಎಡಭಾಗದಲ್ಲಿ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನಿಂತಿದ್ದಾರೆ, ಬಲಭಾಗದಲ್ಲಿ ಮತ್ತೊಬ್ಬ ಮಹಿಳೆ ಇದ್ದಾರೆ. ಆಗಲೇ ಅವರು ಅಮೇರಿಕಾವನ್ನು ಒಂದೇ ಶಬ್ದದಲ್ಲಿ ವರ್ಣಿಸುವುದಾದರೆ, Asufutimaehaehfutbw ಅಂದು ಬಿಡುತ್ತಾರೆ. ಅವರು ಹೇಳುವುದು ಕೇಳಿ ಮಹಿಳೆಯರಿಬ್ಬರೂ ಅವಾಕ್ಕಾಗುತ್ತಾರೆ. ನಗು ಕೂಡ ಬಂದಿರಬಹುದು!

ಅದರೆ ನಗುವಂತಿಲ್ಲವಲ್ಲ, ಮಾತಾಡುತ್ತಿರುವವರು ಯುಎಸ್ ಅಧ್ಯಕ್ಷ ಮಾರಾಯ್ರೇ!
ಅಗಲೇ ಹೇಳಿದಂತೆ ಇಂಥ ಯಡವಟ್ಟುಗಳು ಬೈಡೆನ್ ಅವರಿಂದ ಅಗುತ್ತಲೇ ಇವೆ. ನಿಮಗೆ ನೆನಪಿರಬಹುದು, ಕಮಲಾ ಹ್ಯಾರಿಸ್ ಅವರನ್ನು ಒಮ್ಮೆ ಬೈಡೆನ್ ಅಮೆರಿಕದ ಪ್ರಥಮ ಮಹಿಳೆ ಅಂತ ಹೇಳಿದ್ದರು. ಇನ್ನೊಂದು ಸಲ ಹಿಂದಿನ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರ ಧರ್ಮಪತ್ನಿ ಮಿಶೆಲ್ ಒಬಾಮಾ ಅವರನ್ನು ವೈಸ್ ಪ್ರೆಸಿಡೆಂಟ್ ಅಂತ ಸಂಬೋಧಿಸಿದ್ದರು!

ಇದನ್ನೂಓದಿ:    US President Joe Biden | ಮೊದಲ ಮಾತುಕತೆ: ನೂತನ ವರ್ಷಕ್ಕೆ ಶುಭ ಕೋರಿ ಚೀನಾ ಕಿವಿ ಹಿಂಡಿದ ಜೋ ಬೈಡೆನ್