Joe Biden: ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ ಕೊರೊನಾ ಪಾಸಿಟಿವ್
ಅಧ್ಯಕ್ಷ ಜೋ ಬೈಡನ್, ಈ ಹಿಂದೆಯೇ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ ಹಾಗೂ ಎರಡು ಬಾರಿ ಬೂಸ್ಟರ್ ಲಸಿಕೆಯನ್ನೂ ಸಹ ಪಡೆದಿದ್ದಾರೆ. ಆದ್ರೆ ಅವರಿಗೆ ಕೊರೊನಾದ ಕೆಲವು ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು ಕೊರೊನಾ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಅವರಿಗೆ ಕೊರೊನಾ ಸೋಂಕು ತಗುಲಿದ್ದು ಈ ಬಗ್ಗೆ ಅವರ ಆಡಳಿತ ಕಚೇರಿಯಿಂದ ಮಾಹಿತಿ ಸಿಕ್ಕಿದೆ. 79 ವರ್ಷದ ಜೋ ಬೈಡನ್ ಕೊರೊನಾದ (Coronavirus) ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿದ್ದಾರೆ. ಶ್ವೇತಭವನದ್ಲಲೇ ಐಸೋಲೇಟ್ ಆಗಿದ್ದು ತಮ್ಮ ಸಂಪೂರ್ಣ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.
ಅಧ್ಯಕ್ಷ ಜೋ ಬೈಡನ್, ಈ ಹಿಂದೆಯೇ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ ಹಾಗೂ ಎರಡು ಬಾರಿ ಬೂಸ್ಟರ್ ಲಸಿಕೆಯನ್ನೂ ಸಹ ಪಡೆದಿದ್ದಾರೆ. ಆದ್ರೆ ಅವರಿಗೆ ಕೊರೊನಾದ ಕೆಲವು ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು ಕೊರೊನಾ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವೈಟ್ ಹೌಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೂ ಬೈಡನ್ ಫಿಜರ್‌ನ ಆಂಟಿ-ಕೋವಿಡ್ ಮಾತ್ರೆ ಪ್ಯಾಕ್ಸ್‌ಲೋವಿಡ್ ಅನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
“CDC ಮಾರ್ಗಸೂಚಿಗಳಿಗೆ ಅನುಗುಣವಾಗಿ, ಬೈಡನ್ ಅವರು ಶ್ವೇತಭವನದಲ್ಲಿ ಐಸೋಲೇಟ್ ಆಗಿದ್ದಾರೆ. ಮತ್ತು ಆ ಸಮಯದಲ್ಲಿ ಅವರ ಎಲ್ಲಾ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.
US President Joe Biden tests positive for Covid-19: White House pic.twitter.com/pjzQvaFCDI
— ANI (@ANI) July 21, 2022
Published On - 8:34 pm, Thu, 21 July 22