AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುರಾತ್ರಿಯ ಹೈಡ್ರಾಮಾ ಬಳಿಕ ಕೊನೆಗೂ ಅಂಗೀಕಾರವಾಯ್ತು ಟ್ರಂಪ್ ಮಹತ್ವಾಕಾಂಕ್ಷೆಯ ತೆರಿಗೆ ಮಸೂದೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ 'ಒನ್ ಬಿಗ್ ಬ್ಯೂಟಿಫುಲ್ ಬಿಲ್' ಅನ್ನು ಯುಎಸ್ ಸೆನೆಟ್ ಅಂಗೀಕರಿಸಿತು. ಜೆಡಿ ವ್ಯಾನ್ಸ್ ಟೈ-ಬ್ರೇಕಿಂಗ್ ಮತ ಚಲಾಯಿಸಿದರು. 940 ಪುಟಗಳ ಶಾಸನವನ್ನು 51-50 ಮತಗಳಲ್ಲಿ ಅಂಗೀಕರಿಸಲಾಯಿತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರಾತ್ರಿಯ ತೀವ್ರ ಚರ್ಚೆಯ ನಂತರ ಟೈ-ಬ್ರೇಕಿಂಗ್ ಮತ ಚಲಾಯಿಸಿದರು. ಈ ಮಸೂದೆ ಭಾರತ ಸೇರಿದಂತೆ ಬಹುತೇಕ ದೇಶಗಳ ಮೇಲೆ ಬಹಳ ಪರಿಣಾಮ ಬೀರಲಿದೆ.

ನಡುರಾತ್ರಿಯ ಹೈಡ್ರಾಮಾ ಬಳಿಕ ಕೊನೆಗೂ ಅಂಗೀಕಾರವಾಯ್ತು ಟ್ರಂಪ್ ಮಹತ್ವಾಕಾಂಕ್ಷೆಯ ತೆರಿಗೆ ಮಸೂದೆ
Trump
ಸುಷ್ಮಾ ಚಕ್ರೆ
|

Updated on:Jul 01, 2025 | 11:29 PM

Share

ವಾಷಿಂಗ್ಟನ್, ಜುಲೈ 1: ರಾತ್ರಿಯಿಡೀ ನಡೆದ ಉದ್ವಿಗ್ನ ಬಿಕ್ಕಟ್ಟು ಮತ್ತು ನಾಟಕೀಯ ಬೆಳವಣಿಗೆಯ ನಂತರ ಅಮೆರಿಕ ಸೆನೆಟ್​​ನಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಅವರ ಮಹತ್ವಾಕಾಂಕ್ಷೆಯ ಒನ್ ಬಿಗ್ ಬ್ಯೂಟಿಫುಲ್ ಬಿಲ್ ಅಂಗೀಕಾರವಾಯಿತು. 50-50 ಮತಗಳ ನಂತರ ಅಮೆರಿಕ ಸೆನೆಟ್​ನಲ್ಲಿ ಕೋಲಾಹಲ ಉಂಟಾಗಿತ್ತು. ಆದರೆ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಟ್ರಂಪ್ ಅವರ ಮಸೂದೆಯ ಪರವಾಗಿ ಮತ ಚಲಾಯಿಸುವ ಮೂಲಕ ಕೇವಲ 1 ಮತದ ಅಂತರದಲ್ಲಿ ಈ ಮಸೂದೆ ಅಂಗೀಕಾರವಾಗುವಂತೆ ಮಾಡಿದ್ದಾರೆ. ಸೆನೆಟ್ ರಿಪಬ್ಲಿಕನ್ನರು ಇಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೃಹತ್ ತೆರಿಗೆ ಮಸೂದೆಯನ್ನು ಅಂಗೀಕರಿಸಿದರು. ಡೆಮೋಕ್ರಾಟ್‌ಗಳು ಮತ್ತು ಬೆರಳೆಣಿಕೆಯಷ್ಟು ರಿಪಬ್ಲಿಕನ್ನರ ವಿರೋಧದ ಹೊರತಾಗಿಯೂ 940 ಪುಟಗಳ “ಒನ್ ಬಿಗ್ ಬ್ಯೂಟಿಫುಲ್ ಬಿಲ್ ಆಕ್ಟ್” ಅನ್ನು ಮೇಲ್ಮನೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆ ಈಗ ಪ್ರತಿನಿಧಿಗಳ ಸಭೆಗೆ ಮರಳುತ್ತದೆ.

ಅಮೆರಿಕದ ಸೆನೆಟ್ ಮಹಡಿಯಲ್ಲಿ ದಾಖಲೆಯ 24 ಗಂಟೆಗಳ ಅಧಿವೇಶನದಲ್ಲಿ ರಿಪಬ್ಲಿಕನ್ ನಾಯಕರು ಈ ಮಸೂದೆಗೆ ಬೆಂಬಲವನ್ನು ಒಟ್ಟುಗೂಡಿಸಲು ಹೆಣಗಾಡಬೇಕಾಯಿತು. ಟ್ರಂಪ್ ಅವರ ಈ ಮಸೂದೆಯು ಅವರ ಮೊದಲ ಅವಧಿಯ ತೆರಿಗೆ ಕಡಿತಗಳ 4.5 ಟ್ರಿಲಿಯನ್ ಡಾಲರ್ ವಿಸ್ತರಣೆಯನ್ನು ಪ್ರಸ್ತಾಪಿಸುತ್ತದೆ. ಸಮೀಕ್ಷೆಗಳ ಪ್ರಕಾರ, ಈ ಮಸೂದೆಯು ಇದುವರೆಗೆ ಪರಿಗಣಿಸಲಾದ ಅತ್ಯಂತ ವಿರೋಧಕ್ಕೆ ಒಳಗಾದ ಮಸೂದೆಗಳಲ್ಲಿ ಒಂದಾಗಿದೆ. ಟ್ರಂಪ್ ಅವರ ಆಪ್ತರಾದ ಎಲಾನ್ ಮಸ್ಕ್ ಕೂಡ ಈ ಮಸೂದೆಗೆ ವಿರೋಧಿಸಿ ಆಪ್ತ ಸ್ನೇಹಿತನ ವೈರತ್ವ ಕಟ್ಟಿಕೊಂಡಿದ್ದಾರೆ. ಈ ಮಸೂದೆ ಜಾರಿಯಾದರೆ ಹೊಸ ಪಕ್ಷ ಕಟ್ಟುವುದಾಗಿ ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಒನ್ ಬಿಗ್ ಬ್ಯೂಟಿಫುಲ್ ತೆರಿಗೆ ಮಸೂದೆ ಅಂಗೀಕಾರ; ಭಾರತದ ಮೇಲಿನ ಪರಿಣಾಮವೇನು?

ಡೊನಾಲ್ಡ್‌ ಟ್ರಂಪ್‌ ಅವರ “ಒನ್‌ ಬ್ಯೂಟಿಫುಲ್‌ ಬಿಲ್”‌ ಮಸೂದೆಯ ಜಾರಿಯಾಗುವುದರಿಂದ ಅಮೆರಿಕದಲ್ಲಿದ್ದುಕೊಂಡು ಭಾರತದಲ್ಲಿನ ತಮ್ಮ ಕುಟುಂಬಕ್ಕೆ ಹಣ ವರ್ಗಾವಣೆ ಮಾಡುವ ವಲಸಿಗರು ಸಂಕಷ್ಟ ಎದುರಿಸಲಿದ್ದಾರೆ. ಈ ಮಸೂದೆ ಎಲ್ಲಾ ಹೊರಹೋಗುವ ಹಣ ವರ್ಗಾವಣೆಗಳ ಮೇಲೆ, ಪ್ರಸ್ತಾವಿತ ಶೇ. 3.5ರಷ್ಟು ತೆರಿಗೆಯನ್ನು ವಿಧಿಸುವ ಅವಕಾಶವನ್ನು ಒದಗಿಸಿದೆ. ಇದು ವಿಶ್ವದ ಪ್ರಮುಖ ಹಣ ವರ್ಗಾವಣೆ ಸ್ವೀಕರಿಸುವ ದೇಶವಾದ ಭಾರತದ ಮೇಲೂ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ. ಹಾಗೇ, ಇತರೆ ದೇಶಗಳ ಮೇಲೂ ಇದರ ಪರಿಣಾಮ ಉಂಟಾಗಲಿದೆ.

ಈ ಮಸೂದೆಯು 2017ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅಂಗೀಕರಿಸಲಾದ ಕಾರ್ಪೊರೇಟ್ ಮತ್ತು ವೈಯಕ್ತಿಕ ತೆರಿಗೆ ಕಡಿತಗಳನ್ನು ವಿಸ್ತರಿಸುತ್ತದೆ. ಟಿಪ್ಸ್ ಮತ್ತು ಕಾರು ಸಾಲಗಳ ಮೇಲೆ ಹೊಸ ತೆರಿಗೆ ವಿನಾಯಿತಿಗಳನ್ನು ಪರಿಚಯಿಸುತ್ತದೆ. ಇದು ಆಹಾರ ಮತ್ತು ಆರೋಗ್ಯ ರಕ್ಷಣಾ ನೆರವು ಕಾರ್ಯಕ್ರಮಗಳಿಗೆ ಅರ್ಹತೆಯನ್ನು ಬಿಗಿಗೊಳಿಸುತ್ತದೆ ಮತ್ತು ಗಡಿ ಜಾರಿಗೊಳಿಸುವಿಕೆಯನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ. ಇದರಲ್ಲಿ ಹತ್ತಾರು ಸಾವಿರ ಹೊಸ ಏಜೆಂಟ್‌ಗಳ ನೇಮಕ ಮತ್ತು ವಾರ್ಷಿಕವಾಗಿ ಒಂದು ಮಿಲಿಯನ್ ಜನರನ್ನು ಗಡೀಪಾರು ಮಾಡುವ ನಿಬಂಧನೆಗಳು ಸೇರಿವೆ. ಈ ಪ್ರಸ್ತಾವನೆಯ ಅಡಿಯಲ್ಲಿ ಮಿಲಿಟರಿ ವೆಚ್ಚವೂ ಹೆಚ್ಚಾಗುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:29 pm, Tue, 1 July 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್