Fiji Earthquake: ಫಿಜಿಯಲ್ಲಿ 6.9 ತೀವ್ರತೆಯ ಭೂಕಂಪ, ಸುನಾಮಿ ಭೀತಿಯಿಲ್ಲ

ಫಿಜಿ ದ್ವೀಪ ರಾಷ್ಟ್ರದ ಪಶ್ಚಿಮ ವಾಯವ್ಯ ಪ್ರದೇಶ ಸುವಾದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ ಭೂಕಂಪದ ತೀವ್ರತೆ 6.9ರಷ್ಟು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರ ತಿಳಿಸಿದೆ.

Fiji Earthquake: ಫಿಜಿಯಲ್ಲಿ 6.9 ತೀವ್ರತೆಯ ಭೂಕಂಪ, ಸುನಾಮಿ ಭೀತಿಯಿಲ್ಲ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Nov 12, 2022 | 3:35 PM

ವಾಷಿಂಗ್ಟನ್: ಫಿಜಿ (Fiji) ದ್ವೀಪ ರಾಷ್ಟ್ರದ ಪಶ್ಚಿಮ ವಾಯವ್ಯ ಪ್ರದೇಶ ಸುವಾದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ ಭೂಕಂಪದ ತೀವ್ರತೆ 6.9ರಷ್ಟು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರ (US Geological Survey) ತಿಳಿಸಿದೆ. ಸುವಾ ಪ್ರದೇಶದಲ್ಲಿ 587.2 ಕಿಲೋ ಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ದಾಖಲಾಗಿದೆ. ಆದಾಗ್ಯೂ ಸುನಾಮಿ ಭೀತಿ ಇಲ್ಲವೆಂದು ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆ ತಿಳಿಸಿದೆ.

‘ಫಿಜಿಯಲ್ಲಿ ಸಂಭವಿಸಿರುವ 6.7 ತೀವ್ರತೆಯ ಭೂಕಂಪನದಿಂದ ಸುನಾಮಿ ಭೀತಿ ಎದುರಾಗಿಲ್ಲ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರದ ವಿಜ್ಞಾನಿಗಳು ಈ ಮಾಹಿತಿ ನೀಡಿದ್ದಾರೆ’ ಎಂದು ಹವಾಯಿ ತುರ್ತು ನಿರ್ವಹಣಾ ಸಂಸ್ಥೆ ಟ್ವೀಟ್ ಮಾಡಿದೆ.

ಆಸ್ಟ್ರೇಲಿಯಾದ ಪೂರ್ವ ಕರಾವಳಿಯಿಂದ 3,000 ಕಿಲೋಮೀಟರ್ ದೂರದಲ್ಲಿ, ದಕ್ಷಿಣ ಶಾಂತಸಾಗರದ ವ್ಯಾಪ್ತಿಯಲ್ಲಿ ಫಿಜಿ ದೇಶ ಇದೆ.

ಫಿಜಿ ದ್ವೀಪ ರಾಷ್ಟ್ರವು 10 ಲಕ್ಷ ಚರದ ಮೈಲಿ ವ್ಯಾಪ್ತಿಯಲ್ಲಿರುವ ಸುಮಾರು 300 ದ್ವೀಪಗಳು ಮತ್ತು 540 ದ್ವೀಪಸಮೂಹಗಳನ್ನು ಒಳಗೊಂಡಿದೆ. ಒಟ್ಟು 9,25,000 ಜನಸಂಖ್ಯೆ ಹೊಂದಿದ್ದು, ಈ ಪೈಕಿ ಶೇಕಡಾ 87ರಷ್ಟು ಜನ ಪ್ರಮುಖ ಎರಡು ದ್ವೀಪಗಳಾದ ವಿಟಿ ಲೆವು ಮತ್ತು ವೆನುವಾ ಲೆವುಗಳಲ್ಲಿ ವಾಸಿಸುತ್ತಿದ್ದಾರೆ. ವಿಪುಲವಾದ ಅರಣ್ಯ ಸಂಪತ್ತು, ಖನಿಜಗಳು ಹಾಗೂ ಮೀನುಗಾರಿಕೆಯನ್ನು ಪ್ರಮುಖ ಕಸುಬಾಗಿ ಮಾಡಿಕೊಂಡಿರುವ ಫಿಜಿಯು ಶಾಂತಸಾಗರದ ದ್ವೀಪರಾಷ್ಟ್ರಗಳ ಪೈಕಿ ಹೆಚ್ಚಿನ ಆರ್ಥಿಕಬಲವನ್ನು ಹೊಂದಿರುವ ದೇಶವಾಗಿದೆ.

ಇನ್ನಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Sat, 12 November 22