ಆಸ್ಟ್ರೇಲಿಯಾ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿದ್ದ 800 ಮಂದಿಗೆ ಕೋವಿಡ್ ಪಾಸಿಟಿವ್, ಆಂತಕದಲ್ಲಿ ಸಿಡ್ನಿಯ ಜನ
ಆಸ್ಟ್ರೇಲಿಯಾ ಸಿಡ್ನಿಯಲ್ಲಿದ್ದ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ 800 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದೀಗ ಈ ಬಗ್ಗೆ ಸರ್ಕಾರ ವರದಿಯನ್ನು ಪಡೆದಿದ್ದು. ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಎಂದು ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಸಚಿವರು ಹೇಳಿದ್ದಾರೆ.
ಸಿಡ್ನಿ: ಆಸ್ಟ್ರೇಲಿಯಾ ಸಿಡ್ನಿಯಲ್ಲಿದ್ದ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ 800 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದೀಗ ಈ ಬಗ್ಗೆ ಸರ್ಕಾರ ವರದಿಯನ್ನು ಪಡೆದಿದ್ದು. ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಎಂದು ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಸಚಿವರು ಶನಿವಾರ ಸಾರ್ವಜನಿಕರಿಗೆ ಹೇಳಿದ್ದಾರೆ. ಕಾರ್ನಿವಲ್ ಆಸ್ಟ್ರೇಲಿಯಾದ ಮೆಜೆಸ್ಟಿಕ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ ಹೆಚ್ಚು ಜನ ಪ್ರಯಾಣಿಸಿದ್ದು, ರಾಜ್ಯವಾದ ನ್ಯೂ ಸೌತ್ ವೇಲ್ಸ್‌ನ ರಾಜಧಾನಿ ಸಿಡ್ನಿಯಲ್ಲಿ ಸೋಕೀಂತರನ್ನು ದಾಖಲು ಮಾಡಲಾಗಿದೆ. ಈ ಹಡಗಿನಲ್ಲಿದ್ದು 800 ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಧನಾತ್ಮಕ ವರದಿ ಬಂದಿದೆ ಕ್ರೂಸ್ ಕಂಪನಿ ತಿಳಿಸಿದೆ.
ರಾಜ್ಯ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಈ ಅಪಾಯದ ಮಟ್ಟವನ್ನು ಟೈರ್ 3ರಲ್ಲಿ ರೇಟ್ ಮಾಡಿದ್ದಾರೆ, ಇದು ಹೆಚ್ಚಿನ ಮಟ್ಟದ ಪ್ರಸರಣವನ್ನು ಸೂಚಿಸುತ್ತದೆ ಎಂದು ಹೇಳಿದೆ ಇದೀಗ 2020ಕ್ಕೆ ಹೋಲಿಸಿದರೆ ರೂಬಿ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ ಕಂಡು ಬಂದ ಸೋಕಿಂತರ ಸಂಖ್ಯೆ ಹೆಚ್ಚು ಎಂದು ಹೇಳಲಾಗಿದೆ. ನ್ಯೂ ಸೌತ್ ವೇಲ್ಸ್‌ನಲ್ಲಿಯೂ ಸಹ 914 ಸೋಂಕು ಮತ್ತು 28 ಸಾವುಗಳು ಸಂಭವಿಸಿದೆ ಎಂದು ವರದಿ ಮಾಡಿದೆ.
ರೂಬಿ ಪ್ರಿನ್ಸೆಸ್ ಕಂಡು ಬಂದ ಸೋಕಿಂತರ ದಾಖಲೆಯನ್ನು ಕಂಡುಹಿಡಿದು ಅಧಿಕಾರಿಗಳು ನಿಯಮಿತ ಪ್ರೋಟೋಕಾಲ್‌ಗಳನ್ನು ರಚಿಸಿದ್ದಾರೆ. ಇದರ ಹರಡುವಿಕೆಯನ್ನು ತಡೆಯಲು ನ್ಯೂ ಸೌತ್ ವೇಲ್ಸ್ ಹೆಲ್ತ್ ಮುಂದಾಳತ್ವ ವಹಿಸುತ್ತದೆ ಎಂದು ಗೃಹ ವ್ಯವಹಾರಗಳ ಸಚಿವ ಕ್ಲೇರ್ ಓನೀಲ್ ಹೇಳಿದರು. ಫೆಡರಲ್ ಗಡಿ ಪಡೆ ಅಧಿಕಾರಿಗಳ ಜೊತೆಗೆ ರಾಜ್ಯ ಅಧಿಕಾರಿಗಳು ಮುಜಾಗೃತ ಎಚ್ಚರಿಕೆಯನ್ನು ವಹಿಸಿದ್ದಾರೆ ಎಂದು ಒ’ನೀಲ್ ಮೆಲ್ಬೋರ್ನ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನ್ಯೂ ಸೌತ್ ವೇಲ್ಸ್ ಹೆಲ್ತ್ ಪ್ರಕಾರ, COVID-ಪಾಸಿಟಿವ್ ಪ್ರಯಾಣಿಕರು ಹಡಗಿನಿಂದ ಪ್ರತ್ಯೇಕವಾಗಿದ್ದಾರೆ ಮತ್ತು ವೈದ್ಯಕೀಯ ಸಿಬ್ಬಂದಿಗಳು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಕ್ರೂಸ್ ಹಡಗು ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಸಂಸ್ಥೆ ಹೇಳಿದೆ. ಆಸ್ಟ್ರೇಲಿಯಾದಾದ್ಯಂತ COVID-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಇದು Omicron ರೂಪಾಂತರ XBB ಪ್ರಸರಣವನ್ನು ಪ್ರತಿಬಿಂಬಿಸುತ್ತದೆ ಎಂದು ಫೆಡರಲ್ ಸರ್ಕಾರವು ತಿಳಿಸಿದೆ.
Published On - 6:31 pm, Sat, 12 November 22