Currency Monitoring List: ಅಮೆರಿಕದ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಿಂದ ಭಾರತ ಹೊರಕ್ಕೆ; ಕಾರಣ ಇಲ್ಲಿದೆ

ಅಮೆರಿಕದ ಕರೆನ್ಸಿ ಮೇಲ್ವಿಚಾರಣೆ ಪಟ್ಟಿ ಅಥವಾ ಕರೆನ್ಸಿ ಮಾನಿಟರಿಂಗ್ ಲಿಸ್ಟ್​ನಿಂದ​ ಭಾರತ ಸೇರಿದಂತೆ ಐದು ದೇಶಗಳನ್ನು ಹೊರಗಿಡಲಾಗಿದೆ. ಈ ಕುರಿತು ಅಮೆರಿಕದ ಖಜಾನೆ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ.

Currency Monitoring List: ಅಮೆರಿಕದ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಿಂದ ಭಾರತ ಹೊರಕ್ಕೆ; ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: Reuters
Follow us
TV9 Web
| Updated By: Ganapathi Sharma

Updated on:Nov 12, 2022 | 12:09 PM

ನವದೆಹಲಿ: ಅಮೆರಿಕದ (United States) ಕರೆನ್ಸಿ ಮೇಲ್ವಿಚಾರಣೆ ಪಟ್ಟಿ ಅಥವಾ ಕರೆನ್ಸಿ ಮಾನಿಟರಿಂಗ್ ಲಿಸ್ಟ್​ನಿಂದ​ (Currency Monitoring List) ಭಾರತ (India) ಸೇರಿದಂತೆ ಐದು ದೇಶಗಳನ್ನು ಹೊರಗಿಡಲಾಗಿದೆ. ಇಟಲಿ, ಮೆಕ್ಸಿಕೊ, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಕೂಡ ಪಟ್ಟಿಯಿಂದ ಅಮೆರಿಕ ಕೈಬಿಟ್ಟ ದೇಶಗಳಲ್ಲಿ ಸೇರಿವೆ. ಈ ಕುರಿತು ಅಮೆರಿಕದ ಖಜಾನೆ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ಈ ಪಟ್ಟಿಯು ಕರೆನ್ಸಿ ಅಭ್ಯಾಸಗಳು ಮತ್ತು ಸ್ಥೂಲ ಆರ್ಥಿಕ ನೀತಿಗಳಿಗೆ ವ್ಯಾಪಾರ ಪಾಲುದಾರರು ಹೆಚ್ಚು ಗಮನ ಹರಿಸುವಂತೆ ಮಾಡುವುದಕ್ಕೆ ಸಂಬಂಧಿಸಿದ್ದಾಗಿದೆ. ಅಮೆರಿಕದ ಖಜಾನೆ ಇಲಾಖೆಯೆ ಸಚಿವೆ ಜಾನೆಟ್ ಯೆಲೆನ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಪಟ್ಟಿಯಿಂದ ಭಾರತವನ್ನು ತೆರವು ಮಾಡಲಾಗಿದೆ.

ಸದ್ಯ ಚೀನಾ, ಜಪಾನ್, ಕೊರಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರ ಹಾಗೂ ತೈವಾನ್ ಅಮೆರಿಕದ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಲ್ಲಿ ಇವೆ. ಭಾರತ ಕಳೆದ ಎರಡು ವರ್ಷಗಳಿಂದ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.

ಕಾರಣವೇನು?

ಇದನ್ನೂ ಓದಿ
Image
Rs 2000 Currency Notes: ಚಲಾವಣೆಗೆ ಸಿಗುತ್ತಿಲ್ಲ 2,000 ರೂ. ನೋಟು! ಕಾರಣ ಇಲ್ಲಿದೆ ನೋಡಿ
Image
ಎನ್​ಆರ್​ಐಗಳೂ ಆಧಾರ್ ಕಾರ್ಡ್ ಹೊಂದಬಹುದು; ಇಲ್ಲಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ವಿವರವಾದ ಮಾಹಿತಿ
Image
ರಿಸೆಷನ್ ಪ್ರೂಫ್ ಜಾಬ್ ಇದೆಯೇ? ಆರ್ಥಿಕ ಹಿಂಜರಿತದ ವೇಳೆ ಉದ್ಯೋಗ ಉಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್
Image
Online Financial Frauds: ಆನ್​ಲೈನ್ ಹಣಕಾಸು ವಂಚನೆಗಳಿಂದ ರಕ್ಷಣೆಗೆ ಈ ವಿಚಾರಗಳನ್ನು ಗಮನಿಸಿ…

ಪಟ್ಟಿಯಲ್ಲಿ ಸ್ಥಾನ ನೀಡುವುದಕ್ಕಾಗಿ ಅಮೆರಿಕ ಮೂರು ಮಾನದಂಡಗಳನ್ನು ನಿಗದಿಪಡಿಸಿದೆ. ಇವುಗಳ ಪೈಕಿ ಭಾರತ ಮತ್ತು ತೆರವಾಗಿರುವ ಇತರ ದೇಶಗಳು ಒಂದನ್ನು ಮಾತ್ರವೇ ಪೂರೈಸಲು ಶಕ್ತವಾಗಿವೆ. ಪಟ್ಟಿಯ ಎರಡು ವರದಿಗಳನ್ನು ಪ್ರಕಟಿಸುವ ಸಂದರ್ಭದಲ್ಲಿಯೂ ಈ ದೇಶಗಳು ಒಂದು ಮಾನದಂಡವನ್ನು ಮಾತ್ರ ಪೂರೈಸಿವೆ. ಸ್ವಿಜರ್​ಲ್ಯಾಂಡ್ ಮೂರು ಮಾನಂದಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ.

ಈ ವರದಿಯನ್ನು ಸಿದ್ಧಪಡಿಸುವುದಕ್ಕಾಗಿ ಜೂನ್ 2022 ರವರೆಗಿನ ನಾಲ್ಕು ತ್ರೈಮಾಸಿಕಗಳಲ್ಲಿ ಅಮೆರಿಕದ ಅಂತರರಾಷ್ಟ್ರೀಯ ಮಟ್ಟದ ಸರಕು ಮತ್ತು ಸೇವೆಗಳ ಸರಿಸುಮಾರು ಶೇಕಡಾ 80 ರಷ್ಟನ್ನು ಖಜಾನೆ ಇಲಾಖೆ ಪರೀಕ್ಷಿಸಿದೆ ಮತ್ತು ಮೌಲ್ಯಮಾಪನ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಾಗತಿಕ ಆರ್ಥಿಕತೆಯು ಈಗಾಗಲೇ ಬೇಡಿಕೆ ಮತ್ತು ಪೂರೈಕೆ ನಡುವಣ ಅಸಮತೋಲನವನ್ನು ನಿರ್ವಹಿಸಲು ಹೆಣಗಾಡುತ್ತಿದೆ. ಕೋವಿಡ್ ಸಾಂಕ್ರಾಮಿಕ, ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಾಗಿ ಆಹಾರ, ರಸಗೊಬ್ಬರ ಹಾಗೂ ಇಂಧನ ದರ ಏರಿಕೆಯಾಗಿದೆ. ಜಾಗತಿಕ ಹಣದುಬ್ಬರ ಏರಿಕೆಯಾಗಿದೆ. ಇದರಿಂದಾಗಿ ಆಹಾರ ಅಭದ್ರತೆ ಎದುರಾಗಿದೆ ಎಂದು ಜಾನೆಟ್ ಯೆಲೆನ್ ಹೇಳಿದ್ದಾರೆ.

ಅನೇಕ ಒತ್ತಡಗಳನ್ನು ಎದುರಿಸುತ್ತಿರುವ ಪ್ರಮುಖ ಆರ್ಥಿಕತೆಗಳು ಅದಕ್ಕನುಗುಣವಾಗಿ ಪ್ರತ್ಯೇಕ ನೀತಿಗಳನ್ನು ಅನುಸರಿಸಬಹುದು. ಇದು ಕರೆನ್ಸಿ ಚಲಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:57 am, Sat, 12 November 22

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!