ರೂ. 20 ಕೋಟಿ ಕೊಡುತ್ತೇನೆಂದರೂ ನಾಯಿಯನ್ನು ಮಾರಲು ಒಲ್ಲೆ ಎನ್ನುತ್ತಿರುವ ಬೆಂಗಳೂರಿನ ಸತೀಶ್

| Updated By: ಶ್ರೀದೇವಿ ಕಳಸದ

Updated on: Jan 10, 2023 | 4:22 PM

Caucasian Shepherd : ಬೆಂಗಳೂರಿನಲ್ಲಿ ಏರ್ಪಡಿಸಿರುವ ಅದ್ದೂರಿ ಪ್ರದರ್ಶನದಲ್ಲಿ ಈ ನಾಯಿಯು ಷೋ ಸ್ಟಾಪರ್​ ಆಗಿ ಕಂಗೊಳಿಸಲಿದೆ. ಜೊತೆಗೆ ವಿವಿಧ ಜಾತಿಯ ನಾಯಿಗಳಿಂದ ಫ್ಯಾಷನ್​ ಷೋ ಕೂಡ ಆ ದಿನ ನಡೆಯಲಿದೆ.

ರೂ. 20 ಕೋಟಿ ಕೊಡುತ್ತೇನೆಂದರೂ ನಾಯಿಯನ್ನು ಮಾರಲು ಒಲ್ಲೆ ಎನ್ನುತ್ತಿರುವ ಬೆಂಗಳೂರಿನ ಸತೀಶ್
ಹೇಡರ್​ ನಾಯಿಯ ಜೊತೆ ಬೆಂಗಳೂರಿನ ಸತೀಶ್
Follow us on

Viral Video : ಪ್ರಾಣಿಪ್ರಿಯರಿಗೆ ತಮ್ಮ ಮಕ್ಕಳು ಬೇರೆಯಲ್ಲ ಸಾಕಿದ ಪ್ರಾಣಿಗಳು ಬೇರೆಯಲ್ಲ. ಎಷ್ಟು ಹಣವಾದರೂ ಸರಿ ತಾವು ಇಷ್ಟಪಟ್ಟ ನಾಯಿಯನ್ನು ಖರೀದಿಸಿ ಜೋಪಾನಿಸುತ್ತಾರೆ. ಮಕ್ಕಳಿಗಿಂತ ಹೆಚ್ಚಾಗಿಯೇ ನೋಡಿಕೊಳ್ಳುತ್ತಾರೆ ಎಂದರೂ ಅತಿಶಯೋಕ್ತಿಯಾಗಲಾರದು. ಏಕೆಂದರೆ ಸಾಕುಪ್ರಾಣಿಗಳ ಅವಿನಾಭಾವ ಸಂಬಂಧ ಹಾಗಿರುತ್ತದೆ. ಇನ್ನು ನಾಯಿಗಳನ್ನು ಖರೀದಿಸುವುದು ಸಾಕುವುದು ಅವರವರ ಹಣಬಲದ ಸಾಮರ್ಥ್ಯಕ್ಕೂ ಸಂಬಂಧಿಸಿದ್ದು ಎನ್ನುವುದು ಗಮನಿಸಬೇಕಾದ ಅಂಶ. ಬೆಂಗಳೂರಿನ ಸತೀಶ್ ಎನ್ನುವವರು ಅಪರೂಪದ ಹೇಡರ್​ ಎಂಬ ಕಕೇಶಿಯನ್​ ಶೆಫರ್ಡ್ (Hayder, Caucasian Shepherd) ನಾಯಿಯನ್ನು ಸಾಕಿಕೊಂಡಿದ್ದಾರೆ. ರೂ. 20 ಕೋಟಿ ಕೊಟ್ಟರೂ ಈ ನಾಯಿಯನ್ನು ಮಾರಲಾರೆ ಎನ್ನುತ್ತಿದ್ಧಾರೆ.

ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ದೈತ್ಯದೇಹಿಯಾದ ಈ ನಾಯಿ 6 ಅಡಿ ಎತ್ತರವಿದ್ದು ನೋಡಲು ಥೇಟ್ ಹೆಣ್ಣು ಸಿಂಹದಂತೆಯೇ ಕಾಣುತ್ತದೆ. ಹೈದರಾಬಾದ್​ ಮೂಲದ ಬೀಲ್ಡರ್ ಒಬ್ಬರು ಈ ಹೇಡರ್​ ನಾಯಿಯನ್ನು ರೂ. 20 ಕೋಟಿಗೆ ಖರೀದಿಸುವುದಾಗಿ ಹೇಳಿದರೂ ಸತೀಶ್​ ಮಾತ್ರ ನಿರಾಕರಿಸಿದ್ದಾರೆ. ಬದಲಾಗಿ ಬೆಂಗಳೂರಿನ ಬಿಆರ್​ಎಸ್​ ಗ್ಯಾಂಡ್ಯೂರ್​ ಕನ್ವೆನ್ಷನ್​ ಸೆಂಟರ್​ನಲ್ಲಿ ಈ ನಾಯಿಗೆಂದೇ ವಿಶೇಷವಾಗಿ ಅದ್ದೂರಿಯಾದ ಪ್ರದರ್ಶನವನ್ನು ಏರ್ಪಡಿಸಿದ್ದಾರೆ ಸತೀಶ್​. ಈ ನಾಯಿಯು ಷೋ ಸ್ಟಾಪರ್​ ಆಗಿ ಕಂಗೊಳಿಸಲಿದೆ. ಇಷ್ಟೇ ಅಲ್ಲ ಈ ಪ್ರದರ್ಶನದಲ್ಲಿ ಫ್ಯಾಷನ್​ ಷೋ ಕೂಡ ಏರ್ಪಡಿಸಲಾಗಿದ್ದು ವಿವಿಧ ಜಾತಿಯ ನಾಯಿಗಳು ಇದರಲ್ಲಿ ಪಾಲ್ಗೊಳ್ಳಲಿವೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ನೋ ಟ್ರೌಸರ್ಸ್ ಟ್ಯೂಬ್ ರೈಡ್​ 2023; ಲಂಡನ್ನಿಗರು ತಮ್ಮ ಪ್ಯಾಂಟ್​ ತೆಗೆದು ಪ್ರಯಾಣಿಸಿದ್ದೇಕೆ?

ಒಟ್ಟಿನಲ್ಲಿ ತಮ್ಮತಮ್ಮ ಅನುಕೂಲ, ಸಾಮರ್ಥ್ಯಕ್ಕೆ ತಕ್ಕಂತೆ ಸಾಕುಪ್ರಾಯಿಗಳನ್ನು ಸಾಕುವುದು ಒಂದು ರೀತಿಯಾದರೆ, ಪ್ರದರ್ಶನ ಏರ್ಪಡಿಸಿ ಗಮನ ಸೆಳೆಯುವುದು ಇನ್ನೊಂದು ಥರ. ಇತ್ತೀಚೆಗೆ ವೈರಲ್ ಆದ ಕೆಲ ವಿಡಿಯೋ ಗಮನಿಸಿರಬಹುದು. ಉತ್ತರಪ್ರದೇಶದಲ್ಲಿ ಸಾಕುನಾಯಿಗಳಿಗೆ ಮದುವೆ ಮಾಡಿದ್ದರು. ನೂರಾರು ಲಗ್ನಪತ್ರಿಕೆಗಳನ್ನು ಹಂಚಿ ಬಂಧುಬಳಗ, ನೆರೆಹೊರೆಯವರನ್ನು ಕರೆದು ನಾಯಿಗಳನ್ನು ಮಂಟಪದಲ್ಲಿ ಕೂರಿಸಿದ್ದರು. ಇನ್ನು ಹುಟ್ಟುಹಬ್ಬ ಆಚರಿಸುವುದಂತೂ ಈಗೀಗ ತೀರಾ ಸಾಮಾನ್ಯ.

ಅಂತೂ ಸತೀಶ್​ ಈ ನಾಯಿಯನ್ನು ಎಷ್ಟು ಕೋಟಿ ಕೊಟ್ಟರೂ ಕೊಡಲಾರೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಿ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:16 pm, Tue, 10 January 23