Viral Photo: ಸ್ವಿಮ್ಮಿಂಗ್ ಪೂಲ್​ನಲ್ಲಿ ಮೂರ್ಛೆ ತಪ್ಪಿದ ಈಜುಗಾರ್ತಿ; ಈಜುಕೊಳಕ್ಕೆ ಜಿಗಿದು ಕಾಪಾಡಿದ ಕೋಚ್

25 ವರ್ಷದ ಕೋಚ್ ಆಂಡ್ರಿಯಾ ಫ್ಯೂಯೆಂಟೆಸ್ ಒಂದು ಕ್ಷಣವೂ ತಡಮಾಡದೆ ಸ್ವಿಮ್ಮಿಂಗ್ ಪೂಲ್‌ಗೆ ಹಾರಿ ಈಜುಗಾರ್ತಿ ಅನಿತಾ ಅಲ್ವಾರೆಜ್ ಅವರನ್ನು ಮೇಲೆತ್ತಿದ್ದಾರೆ.

Viral Photo: ಸ್ವಿಮ್ಮಿಂಗ್ ಪೂಲ್​ನಲ್ಲಿ ಮೂರ್ಛೆ ತಪ್ಪಿದ ಈಜುಗಾರ್ತಿ; ಈಜುಕೊಳಕ್ಕೆ ಜಿಗಿದು ಕಾಪಾಡಿದ ಕೋಚ್
ಈಜು ಕೊಳ
Image Credit source: NDTV
Edited By:

Updated on: Jun 23, 2022 | 11:45 AM

ನವದೆಹಲಿ: ಬುಡಾಪೆಸ್ಟ್‌ನಲ್ಲಿ ನಡೆದ 2022ರ FINA ವಿಶ್ವ ಅಕ್ವಾಟಿಕ್ಸ್ ಚಾಂಪಿಯನ್‌ಶಿಪ್‌ನ ಸೋಲೋ ಫ್ರೀ ಫೈನಲ್‌ನಲ್ಲಿ ಅಮೆರಿಕಾದ ಈಜುಗಾರ್ತಿ ಅನಿತಾ ಅಲ್ವಾರೆಜ್ (Anita Alvarez) ಮೂರ್ಛೆ ತಪ್ಪಿದ್ದಾರೆ. ಈ ವೇಳೆ ಅವರನ್ನು ಅವರ ಕೋಚ್ ಆಂಡ್ರಿಯಾ ಫ್ಯೂಯೆಂಟೆಸ್ (Andrea Fuentes) ಅವರು ಈಜು ಕೊಳದೊಳಗಿನಿಂದ ರಕ್ಷಿಸಿದ್ದಾರೆ. ಈಜುಗಾರ್ತಿ ಅನಿತಾ ಅಲ್ವಾರೆಜ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಈಜು ಕೊಳದ ತಳಕ್ಕೆ ತಲುಪಿದ್ದಾಳೆ.

25 ವರ್ಷದ ಕೋಚ್ ಆಂಡ್ರಿಯಾ ಫ್ಯೂಯೆಂಟೆಸ್ ಒಂದು ಕ್ಷಣವೂ ತಡಮಾಡದೆ ಸ್ವಿಮ್ಮಿಂಗ್ ಪೂಲ್‌ಗೆ ಹಾರಿ ಆಕೆಯನ್ನು ಮೇಲೆತ್ತಿದ್ದಾರೆ. ಅಲ್ಲದೆ, ವೈದ್ಯಕೀಯ ಚಿಕಿತ್ಸೆ ಪಡೆಯಲು ಆಕೆಯನ್ನು ಈಜುಕೊಳದ ಹೊರಗೆ ಎಳೆದು ತಂದು, ಮೇಲೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈಜುಕೊಳದಿಂದ ಹೊರಗೆಳೆದ ನಂತರವೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಲ್ವಾರೆಜ್‌ ಅವರನ್ನು ಸ್ಟ್ರೆಚರ್‌ನಲ್ಲಿ ಮಲಗಿಸಲಾಯಿತು. ಇದರಿಂದ ದಿಗ್ಭ್ರಮೆಗೊಂಡ ಪ್ರೇಕ್ಷಕರ ನಡುವೆಯೇ ಆಕೆಯನ್ನು ಅಲ್ಲೇ ಇರುವ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.

ಮೂರ್ಛೆ ತಪ್ಪಿದ್ದ ಈಜುಗಾರ್ತಿ ಅನಿತಾ ಅಲ್ವಾರೆಜ್ ಅವರನ್ನು ಮೇಲೆತ್ತಿದ ಕೋಚ್

ಇದನ್ನೂ ಓದಿ: Viral News: ಗಂಡ ಸಾವನ್ನಪ್ಪಿ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!

ಅವಳು ಉಸಿರಾಡುತ್ತಿಲ್ಲ ಎಂದು ನಾನು ಬಹಳ ಹೆದರಿದ್ದೆ. ಆದರೆ ಈಗ ಅವಳು ಆರಾಮಾಗಿದ್ದಾಳೆ ಎಂದು ಕೋಚ್ ಫ್ಯೂಯೆಂಟೆಸ್ ಹೇಳಿದ್ದಾರೆ. 4 ಬಾರಿ ಒಲಂಪಿಕ್ ಪದಕ ವಿಜೇತೆಯಾಗಿರುವ ಫ್ಯೂಯೆಂಟೆಸ್ ಈ ಬಗ್ಗೆ ಸ್ಪ್ಯಾನಿಷ್ ರೇಡಿಯೊಗೆ ಮಾಹಿತಿ ನೀಡಿದ್ದು, ಅಲ್ವಾರೆಜ್ ಮೂರ್ಛೆ ಬೀಳಲು ಕಾರಣ ಆಕೆಯ ದಿನಚರಿಯಲ್ಲಿ ಅತಿಯಾಗಿ ಶ್ರಮವಹಿಸಿದ್ದೇ ಕಾರಣ ಎಂದು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ