
ಕೈವ್, ಅಕ್ಟೋಬರ್ 15: ಅಮೆರಿಕದ ಕೋರಿಕೆಯ ಮೇರೆಗೆ ಕೆಲಕಾಲ ಸ್ಥಗಿತಗೊಳಿಸಲಾಗಿದ್ದ ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿಗಳನ್ನು ಮರು ಆರಂಭಿಸುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಿಸಿದ ಬೆನ್ನಲ್ಲೇ, ರಷ್ಯಾದ ತೈಲ ಸಂಸ್ಕರಣಾಗಾರದ ಮೇಲೆ ಉಕ್ರೇನ್ ದಾಳಿ ನಡೆಸಿರುವುದಾಗಿ ಮಾಸ್ಕೋ ಆರೋಪಿಸಿದೆ. ಉಕ್ರೇನ್ನ ಇಂಧನ ಮೂಲಸೌಕರ್ಯಗಳ ಮೇಲೆ ರಷ್ಯಾ ನಿರಂತರವಾಗಿ ದಾಳಿ ನಡೆಸುತ್ತಿದ್ದರೂ, ಅಮೆರಿಕದ ಮನವಿಯ ಮೇರೆಗೆ ತಾನು 3 ದಿನಗಳ ಕಾಲ ರಷ್ಯಾದ ಮೇಲಿನ ದಾಳಿಯನ್ನು ನಿರ್ಬಂಧಿಸಿದ್ದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ರಷ್ಯಾದಿಂದ ಡೀಸೆಲ್ ಆಮದು ಮಾಡಿಕೊಳ್ಳುವ ಒಪ್ಪಂದದ ನಂತರ, ಉಕ್ರೇನ್ ಸಂಪೂರ್ಣವಾಗಿ ದಾಳಿಗಳನ್ನು ನಿಲ್ಲಿಸುವಂತೆ ಒತ್ತಡ ಹೇರಲು ಅಮೆರಿಕವು ರಷ್ಯಾದ ದಾಳಿಗಳ ಕುರಿತಾದ ‘ಗುಪ್ತಚರ ಮಾಹಿತಿ ಹಂಚಿಕೆ’ಯನ್ನು ಹಿಂತೆಗೆದುಕೊಂಡಿದೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ. ಜೊತೆಗೆ, ಉಕ್ರೇನ್ ಮಿಲಿಟರಿ ಬಳಸುತ್ತಿದ್ದ ‘ಸ್ಟಾರ್ಲಿಂಕ್’ ಉಪಗ್ರಹ ಸೇವೆಗಳ ಮೇಲೆ ವಿಧಿಸಲಾದ ನಿರ್ಬಂಧಗಳು ಉದ್ದೇಶಪೂರ್ವಕವಾದವು ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ: ‘ರಷ್ಯಾ-ಉಕ್ರೇನ್ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಇಂಧನ ಕದನವಿರಾಮ ಒಪ್ಪಂದ’; ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ
ಇಂದು ಬೆಳಗಿನ ವೇಳೆಗೆ ಸ್ಟಾರ್ಲಿಂಕ್ನ ಕೆಲವು ಕಾರ್ಯಚಟುವಟಿಕೆಗಳು ಪುನರಾರಂಭಗೊಂಡಿವೆ ಎಂದು ಉಕ್ರೇನ್ ರಕ್ಷಣಾ ಮೂಲಗಳು ತಿಳಿಸಿವೆ. ಸ್ಟಾರ್ಲಿಂಕ್ ಇಂಟರ್ನೆಟ್ ಸಂಪರ್ಕದೊಂದಿಗೆ ಡ್ರೋನ್ಗಳು ಹಾರಬಲ್ಲ ವೇಗದ ಮೇಲಿನ ನಿರ್ಬಂಧಗಳು ಸಂಪೂರ್ಣವಾಗಿ ತೆರವುಗೊಂಡಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ