ಜೋ ಬೈಡನ್ ಅಮೆರಿಕ ಅಧ್ಯಕ್ಷರಾದರೆ ಭಾರತಕ್ಕೆ ಲಾಭವಾಗುತ್ತಾ?
ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದೆ. ಈ ಬಾರಿ ಬಹುಮತ ಗಳಿಸುವ ಸನಿಹಕ್ಕೆ ಮಾಜಿ ಉಪಾಧ್ಯಕ್ಷ ಜೋ ಬೈಡನ್ ತಲುಪಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಆದರೆ ಈ ಹೊತ್ತಲ್ಲೇ ಬೈಡನ್ ಅಧ್ಯಕ್ಷರಾದರೆ ಭಾರತಕ್ಕೇನು ಲಾಭ ಎಂಬ ಲೆಕ್ಕಾಚಾರ ಶುರುವಾಗಿದೆ. ಒಬಾಮಾ ಅವಧಿಯಲ್ಲಿ ಉಪಾಧ್ಯಕ್ಷರಾಗಿ. ಹತ್ತಾರು ವರ್ಷಗಳಿಂದಲೂ ಅಮೆರಿಕದ ರಾಜಕೀಯದಲ್ಲಿ ಛಾಪು ಮೂಡಿಸಿರುವ ಜೋ ಬೈಡನ್ ಅಧ್ಯಕ್ಷರಾಗೋದು ಬಹುತೇಕ ಪಕ್ಕಾ ಆಗಿದೆ. ಹಲವಾರು ಕಾರಣಗಳಿಂದ ಟ್ರಂಪ್ ಈ ಬಾರಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದು, ವೈಟ್ಹೌಸ್ ಬಿಟ್ಟು […]
ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದೆ. ಈ ಬಾರಿ ಬಹುಮತ ಗಳಿಸುವ ಸನಿಹಕ್ಕೆ ಮಾಜಿ ಉಪಾಧ್ಯಕ್ಷ ಜೋ ಬೈಡನ್ ತಲುಪಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಆದರೆ ಈ ಹೊತ್ತಲ್ಲೇ ಬೈಡನ್ ಅಧ್ಯಕ್ಷರಾದರೆ ಭಾರತಕ್ಕೇನು ಲಾಭ ಎಂಬ ಲೆಕ್ಕಾಚಾರ ಶುರುವಾಗಿದೆ.
ಒಬಾಮಾ ಅವಧಿಯಲ್ಲಿ ಉಪಾಧ್ಯಕ್ಷರಾಗಿ. ಹತ್ತಾರು ವರ್ಷಗಳಿಂದಲೂ ಅಮೆರಿಕದ ರಾಜಕೀಯದಲ್ಲಿ ಛಾಪು ಮೂಡಿಸಿರುವ ಜೋ ಬೈಡನ್ ಅಧ್ಯಕ್ಷರಾಗೋದು ಬಹುತೇಕ ಪಕ್ಕಾ ಆಗಿದೆ. ಹಲವಾರು ಕಾರಣಗಳಿಂದ ಟ್ರಂಪ್ ಈ ಬಾರಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದು, ವೈಟ್ಹೌಸ್ ಬಿಟ್ಟು ಹೋಗುವುದು 99 ಪರ್ಸೆಂಟ್ ಗ್ಯಾರಂಟಿ ಆಗಿದೆ. ಆದ್ರೆ ಈ ಬಾರಿ ಬೈಡನ್ ಅಧ್ಯಕ್ಷರಾದರೆ ಭಾರತಕ್ಕೇನು ಲಾಭ ಎಂಬ ಲೆಕ್ಕಾಚಾರ ಶುರುವಾಗಿದೆ.
ಬೈಡನ್ ಕಾಲದಲ್ಲಿ ಸುಧಾರಿಸುತ್ತಾ ಭಾರತ-ಅಮೆರಿಕ ಸಂಬಂಧ? ಹೌದು ಮೇಲ್ನೋಟಕ್ಕೆ ಭಾರತ-ಟ್ರಂಪ್ ಸಂಬಂಧ ಚೆನ್ನಾಗೇ ಇದ್ದರೂ ಸಾಕಷ್ಟು ಕಿರಿಕ್ಗಳು ನಡೆದಿತ್ತು. ಇದು ಉಭಯ ದೇಶಗಳ ಬಾಂಧವ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಅದರಲ್ಲೂ ಭಾರತದ ಪ್ರಮುಖ ಕ್ಷೇತ್ರಗಳಲ್ಲಿ ಟ್ರಂಪ್ ಕಠಿಣ ಕ್ರಮ ಕೈಗೊಂಡಿದ್ದರು. ಇದೀಗ ಬೈಡನ್ ಅಮೆರಿಕ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದ್ದು, ಈ ಬಾರಿ ಭಾರತಕ್ಕೆ ಆಗುವ ಲಾಭವೇನು ಎಂಬುದು ಯಕ್ಷಪ್ರಶ್ನೆಯಾಗಿದೆ. ಹಾಗಾದ್ರೆ ಟ್ರಂಪ್ ಭಾರತದ ಬಗ್ಗೆ ಕೈಗೊಂಡ ವಿವಾದಾತ್ಮಕ ನಿರ್ಣಯಗಳು ಯಾವುವು ಅನ್ನೋದನ್ನ ಇಲ್ಲಿ ಓದಿ.
ಭಾರತದ ಮೇಲೆ ಟ್ರಂಪ್ ಪ್ರಹಾರ ಭಾರತೀಯರಿಗೆ ಅನುಕೂಲವಾಗಿದ್ದ ಹೆಚ್1ಬಿ ವೀಸಾ ಮೇಲೆ ಟ್ರಂಪ್ ಹಲವು ನಿರ್ಬಂಧ ಹೇರಿದ್ದರು. ಅಲ್ಲದೆ ಭಾರತದ ವಸ್ತುಗಳನ್ನು ಅಮೆರಿಕಗೆ ರಫ್ತು ಮಾಡುವುದರ ಮೇಲೆ ಕಡಿವಾಣ ಹಾಕಿ ಸಂಕಷ್ಟ ಉಂಟುಮಾಡಿದ್ರು. ಬಳಿಕ ಕೊರೊನಾ ಕಂಟಕ ಎದರಾದಾಗ HCQC ಮಾತ್ರೆಗಳನ್ನು ರಫ್ತು ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ವಾರ್ನಿಂಗ್ ಕೊಟ್ಟಿದ್ದರು. ಅಮೆರಿಕದ ಉತ್ಪನ್ನಗಳಿಗೆ ಭಾರತದಲ್ಲಿ ತೆರಿಗೆ ಇಳಿಸಲು ಟ್ರಂಪ್ ಒತ್ತಡ ಹೇರಿದ್ದರು. ಭಾರತ ಟ್ಯಾಕ್ಸ್ ಟೆರರಿಸಂ ಮಾಡ್ತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಆರೋಪ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲ ಅಮೆರಿಕನ್ನರಿಗೆ ಉದ್ಯೋಗ ನೀಡಲು ಟ್ರಂಪ್ ಮೊದಲ ಆದ್ಯತೆ ಕೊಟ್ಟಿದ್ದು ಭಾರತಕ್ಕೆ ಪೆಟ್ಟು ಕೊಟ್ಟಿತ್ತು.
ಡೆಮಾಕ್ರಟಿಕ್-ರಿಪಬ್ಲಿಕನ್ಸ್ ಇಬ್ಬರೂ ಒಂದೇ ನಾಣ್ಯದ 2 ಮುಖಗಳು: ಹೌದು, ಅಮೆರಿಕದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಭಾರತವೇ ಟಾರ್ಗೆಟ್. ಅದ್ರಲ್ಲೂ ರಿಪಬ್ಲಿಕನ್ಸ್ ಹಿಂದೆ ಹಲವು ಸಂದರ್ಭಗಳಲ್ಲಿ ಭಾರತಕ್ಕೆ ಸಮಸ್ಯೆಯಾಗುವ ನಿರ್ಣಯಗಳನ್ನೇ ಕೈಗೊಂಡಿದ್ದಾರೆ. ಇನ್ನು ಡೆಮಾಕ್ರಟಿಕ್ ಪಕ್ಷ ಕೂಡ ಅಷ್ಟೇ, ಸದ್ದೇ ಇಲ್ಲದೆ ಭಾರತೀಯರ ವಿರುದ್ಧದ ನಿರ್ಣಯಗಳನ್ನ ಕೈಗೊಳ್ಳುತ್ತದೆ. ಹೀಗಾಗಿ ಈ ಬಾರಿ ಬೈಡನ್ ಗೆದ್ದು ಬಂದರೆ ಭಾರತಕ್ಕೆ ಯಾವ ರೀತಿ ಲಾಭವಾಗುತ್ತೆ ಎಂಬುದು ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಒಟ್ನಲ್ಲಿ ಈ ಬಾರಿ ಬೈಡನ್ ಗೆಲುವು ಪಕ್ಕಾ ಆಗಿದ್ದು, ಭಾರತ ಹಾಗೂ ಅಮೆರಿಕ ಸಂಬಂಧ ಇನ್ನೆಷ್ಟು ಸುಧಾರಣೆ ಕಾಣಲಿದೆ ಎಂಬುದನ್ನ ಕಾದು ನೋಡಬೇಕಿದೆ. ಒಂದ್ಕಡೆ ಕೊರೊನಾ ಮತ್ತೊಂದ್ಕಡೆ ಚೀನಾ ಭಾರತವನ್ನು ಕಾಡುತ್ತಿವೆ. ಹೀಗಾಗಿ ಅಮೆರಿಕದ ಬೆಂಬಲ ಭಾರತಕ್ಕೆ ಅತ್ಯಗತ್ಯವಾಗಿದ್ದು, ಬೈಡನ್ ತಾವು ಚುನಾವಣೆಗೆ ಮುಂಚೆ ಕೊಟ್ಟಿದ್ದ ಮಾತು ಉಳಿಸಿಕೊಳ್ಳುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.