ತಾಲಿಬಾನಿಗಳು ಅಣ್ವಸ್ತ್ರಕ್ಕೆ ಕೈಹಾಕಿದರೆ ಗತಿಯೇನು? ಅವರಿಗೆ ಅಣ್ವಸ್ತ್ರ ಸಿಗದಂತೆ ನೋಡಿಕೊಳ್ಳೋ ಪ್ಲ್ಯಾನ್ ಇದ್ಯಾ? ಬೈಡೆನ್‌ಗೆ ಸಂಸದರ ಪ್ರಶ್ನೆ
ಪಾಕ್ ಬಳಿಯ ಅಣ್ವಸ್ತ್ರ ತಾಲಿಬಾನ್‌ಗೆ ಸಿಗದಂತೆ ನೋಡಿಕೊಳ್ಳಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ 68 ಸಂಸದರು ಸಲಹೆ ನೀಡಿದ್ದಾರೆ.ತಾಲಿಬಾನ್‌ಗೆ ಅಣ್ವಸ್ತ್ರ ಸಿಗದಂತೆ ನೋಡಿಕೊಳ್ಳೋ ಪ್ಲ್ಯಾನ್ ಇದ್ಯಾ? ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಮಿಲಿಟರಿ ಸಾಮಗ್ರಿ ವಾಪಸ್ ತರುವ ಪ್ಲ್ಯಾನ್ ಇದೆಯಾ? ಆಫ್ಘನ್ ಪ್ರತಿರೋಧ ಪಡೆ ಬೆಂಬಲಿಸುವ ಪ್ಲ್ಯಾನ್ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಅಘ್ಘಾನಿಸ್ತಾನದ ಕಾಬೂಲ್ನಲ್ಲಿ ಸರಣಿ ಸ್ಫೋಟವಾಗಿದೆ. ಇದರಲ್ಲಿ ಅಮೆರಿಕದ ಯೋಧರೂ ಸಹ ಮೃತಪಟ್ಟಿದ್ದಾರೆ. ಹೀಗಾಗಿ ಕೆಂಡಾಮಂಡಲರಾದ ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ವಿರುದ್ಧ ದಾಳಿ ಮಾಡುವವರು ಎಚ್ಚರಿಕೆಯಿಂದ ಇರಬೇಕು. ನಮ್ಮ ವಿರುದ್ಧ ದಾಳಿ ಮಾಡಿದವರನ್ನ ಕ್ಷಮಿಸಲ್ಲ.. ಅವರನ್ನ ಮರೆಯಲ್ಲ.. ನಿಮ್ಮನ್ನ ಹೆಕ್ಕಿ ಹೆಕ್ಕಿ ಕೊಲ್ಲುವ ಮೂಲಕ ತಕ್ಕ ಶಾಸ್ತಿ ಮಾಡುತ್ತೇವೆ ಎಂದಿದ್ದಾರೆ. ಇನ್ನು ಮತ್ತೊಂದು ಕಡೆ ಪಾಕ್ ಬಳಿಯ ಅಣ್ವಸ್ತ್ರ ತಾಲಿಬಾನ್‌ಗೆ ಸಿಗದಂತೆ ನೋಡಿಕೊಳ್ಳಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ 68 ಸಂಸದರು ಸಲಹೆ ನೀಡಿದ್ದಾರೆ.
ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ತನ್ನ ಸೈನ್ಯವನ್ನು ಹೊರತೆಗೆಯಲು ಆಗಸ್ಟ್ 31 ರ ಗಡುವು ಹತ್ತಿರವಾಗುತ್ತಿದ್ದಂತೆ, ಇಸ್ಲಾಮಿಸ್ಟ್ ಉಗ್ರಗಾಮಿಗಳಾದ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹೇರುವ ನಿಯಮದ ಸ್ವರೂಪದ ಬಗ್ಗೆ ಆತಂಕ ಹೆಚ್ಚಾಗಿದೆ. ಈಗ, ಅಮೆರಿಕದ ಸಂಸದರ ಗುಂಪೊಂದು ಅಧ್ಯಕ್ಷ ಜೋ ಬಿಡೆನ್ ಅವರನ್ನು ಒತ್ತಾಯಿಸಿ ಅಧ್ಯಕ್ಷರನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಅಮೆರಿಕ ಸಂಸತ್ನ 68 ಸಂಸದರು, ಅಫ್ಘಾನಿಸ್ತಾನದ ಪತನದ ಬಗ್ಗೆ ಮತ್ತು ಅವರ ಯೋಜನೆಗಳು ಮುಂದೆ ಸಾಗುತ್ತಿರುವ ಬಗ್ಗೆ ನಿರ್ಣಾಯಕ ಪ್ರಶ್ನೆಗಳಿಗೆ ಉತ್ತರಿಸಲು ಬಿಡೆನ್ ಅವರನ್ನು ಕೇಳಿದ್ದಾರೆ.
ತಾಲಿಬಾನ್‌ಗೆ ಅಣ್ವಸ್ತ್ರ ಸಿಗದಂತೆ ನೋಡಿಕೊಳ್ಳೋ ಪ್ಲ್ಯಾನ್ ಇದ್ಯಾ? ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಮಿಲಿಟರಿ ಸಾಮಗ್ರಿ ವಾಪಸ್ ತರುವ ಪ್ಲ್ಯಾನ್ ಇದೆಯಾ? ಆಫ್ಘನ್ ಪ್ರತಿರೋಧ ಪಡೆ ಬೆಂಬಲಿಸುವ ಪ್ಲ್ಯಾನ್ ಇದೆಯಾ? ತಾಲಿಬಾನ್ ತನ್ನ ಪರಮಾಣು ನೆರೆಯ ಪಾಕಿಸ್ತಾನವನ್ನು ಅಸ್ಥಿರಗೊಳಿಸದಂತೆ ನೋಡಿಕೊಳ್ಳಲು ನಿಮ್ಮ ಯೋಜನೆ ಏನು? ತಾಲಿಬಾನ್ ಜೊತೆ ಚೀನಾ ಸಂಬಂಧ ವೃದ್ಧಿ ತಡೆಗೆ ತಂತ್ರವೇನು? ಎಂದು ಜೋ ಬೈಡೆನ್‌ರನ್ನು ಅಮೆರಿಕದ 68 ಸಂಸದರು ಪ್ರಶ್ನಿಸಿದ್ದಾರೆ. ಪತ್ರ ಬರೆದು ಕೆಲ ಸಲಹೆ, ಕೆಲ ಸ್ಪಷ್ಟನೆ ಕೇಳಿದ್ದಾರೆ.
ಇದನ್ನೂ ಓದಿ: Kabul Airport Blast: ಅಫ್ಘಾನಿಸ್ತಾನದಲ್ಲಿ ಸರಣಿ ಸ್ಫೋಟ: ದುಷ್ಕೃತ್ಯದ ಹೊಣೆ ಹೊತ್ತ ಐಸಿಸ್-ಕೆ ಸಂಘಟನೆ
Published On - 11:43 am, Fri, 27 August 21