WHO Weekly Covid Report: ಭಾರತದಲ್ಲಿ ಕೊರೊನಾ ಪ್ರಕರಣ ಹೆಚ್ಚಲು ಚುನಾವಣೆ ಮತ್ತು ಧಾರ್ಮಿಕ ಸಭೆ ಕಾರಣ
ಭಾರತದಲ್ಲಿನ ಕೊವಿಡ್-19ರ ಪರಿಸ್ಥಿತಿಯ ಮೌಲ್ಯಮಾಪನ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ನ "ಹೆಚ್ಚಳ ಮತ್ತು ವೇಗವರ್ಧನೆ" (resurgence and acceleration) ಕಾರಣೀಕೃತವಾಗಿರುವ ಹಲವಾರು ಸಂಭಾವ್ಯ ಅಂಶಗಳನ್ನು ಪಟ್ಟಿಮಾಡಿದೆ. ಇದರಲ್ಲಿ "ಹಲವಾರು ಧಾರ್ಮಿಕ ಮತ್ತು ರಾಜಕೀಯ ಸಾಮೂಹಿಕ ಒಟ್ಟುಗೂಡಿಸುವಿಕೆ ಘಟನೆಗಳು ಈ ವೈರಸ್ ಹರಡುವಲ್ಲಿ ಕಾರಣವಾಗಿವೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಭಾರತದಲ್ಲಿನ ಕೊವಿಡ್-19ರ ಪರಿಸ್ಥಿತಿಯ ಮೌಲ್ಯಮಾಪನ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ನ “ಹೆಚ್ಚಳ ಮತ್ತು ವೇಗವರ್ಧನೆ” (resurgence and acceleration) ಕಾರಣೀಕೃತವಾಗಿರುವ ಹಲವಾರು ಸಂಭಾವ್ಯ ಅಂಶಗಳನ್ನು ಪಟ್ಟಿಮಾಡಿದೆ. ಇದರಲ್ಲಿ “ಹಲವಾರು ಧಾರ್ಮಿಕ ಮತ್ತು ರಾಜಕೀಯ ಸಾಮೂಹಿಕ ಒಟ್ಟುಗೂಡಿಸುವಿಕೆ ಘಟನೆಗಳು ಈ ವೈರಸ್ ಹರಡುವಲ್ಲಿ ಕಾರಣವಾಗಿವೆ” ಎಂದು ಹೇಳುವ ಮೂಲಕ ಕುಂಭ ಮೇಳ ಮತ್ತು ಚುನಾವಣಾ ಪ್ರಚಾರದ ಕುರಿತು ಪರೋಕ್ಷವಾಗಿ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರತಿವಾರ ತನ್ನ ವರದಿಯನ್ನು ಬುಧವಾರ ಬಿಡುಗಡೆ ಮಾಡುತ್ತದೆ. ಈ ವಾರದ ವರದಿಯಲ್ಲಿ ಭಾರತದಲ್ಲಿ ರೂಪಾಂತರ ಹೊಂದಿದ ವೈರಸ್ ಬಗ್ಗೆ ಅದರ ಪ್ರಸರಣದ ಬಗ್ಗೆ ಹೆಚ್ಚಿನ ಒತ್ತು ನೀಡದೆ.
ಹೊಸ ರೂಪಾಂತರಿಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ಡಬ್ಲ್ಯುಎಚ್‌ಓ ಬಿ .1.617 ಎಂದು ವಿಜ್ಞಾನಿಗಳು ಗುರುತಿಸಿರುವ ಕೊರೊನಾ ವೈರಸ್ನ ರೂಪಾಂತರಿಯ ವಂಶಾವಳಿಯನ್ನು ಪತ್ತೆ ಹಚ್ಚಿರುವ ವಿಜ್ಞಾನಿಗಳು ಇದು ಭಾರತದಲ್ಲಿ ಮೊದಲು ಅಕ್ಟೋಬರ್ 2020 ರಲ್ಲಿ ಇತ್ತು ಎಂದು ಹೇಳಿದೆ. “ಭಾರತದಲ್ಲಿ COVID-19 ಪ್ರಕರಣಗಳು ಮತ್ತು ಸಾವುಗಳಲ್ಲಿನ ಹೆಚ್ಚಳ, ಚಲಾವಣೆಯಲ್ಲಿರುವ B.1.617 ಮತ್ತು ಇತರ ರೂಪಾಂತರಿ ವೈರಸ್ (ಉದಾ., B.1.1.7) ಸಂಭಾವ್ಯ ಪಾತ್ರದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ,” ಎಂದು ವರದಿ ಹೇಳಿದೆ.
“ಭಾರತಕ್ಕೆ ಬಂದ ಕೊರೊನಾದ ಅಪಾಯದ ಮೌಲ್ಯಮಾಪನ ಸಂದರ್ಭದಲ್ಲಿ, ಕೊವಿಡ್-19 ಪ್ರಸರಣದ ಹೆಚ್ಚಳ ಮತ್ತು ವೇಗವರ್ಧನೆಯು ಹಲವಾರು ಸಂಭಾವ್ಯ ಪ್ರಶ್ನೆಗಳನ್ನು ಎತ್ತಿ ಹಿಡಿದಿದೆ. ಇದರಲ್ಲಿ SARS-CoV-2 ಅಂದರೆ ಕೊರೊನಾ ವೈರಸ್ ರೂಪಾಂತರಿಗಳು ಬಹಳ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ; ಹಲವಾರು ಧಾರ್ಮಿಕ ಮತ್ತು ರಾಜಕೀಯ ಸಾಮೂಹಿಕ ಸಭೆಗಳಿಂದ ಈ ಹರಡುವಿಕೆ ಹೆಚ್ಚಿದೆ. ಆದರೆ, ಭಾರತದಲ್ಲಿ ಹೆಚ್ಚಿದ ಕೊರೊನಾ ಪ್ರಸರಣಕ್ಕೆ ಈ ಪ್ರತಿಯೊಂದು ಅಂಶಗಳ ನಿಖರವಾದ ಕೊಡುಗೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ,”ಎಂದು ಕೂಡ ಅದು ತನ್ನ ವರದಿಯಲ್ಲಿ ಹೇಳಿದೆ.
SARS-CoV-2 ರೂಪಾಂತರಿ ವೈರಸ್ನ್ನು ಗುರುತಿಸಲು ಭಾರತದಲ್ಲಿ ಸರಿಸುಮಾರು 0.1% ಗಂಟಲು ದ್ರವದ ಮಾದರಿಗಳನ್ನು ಬೇರೆ ಬೇರೆ ಕ್ರಮದ ಮೂಲಕ ಅಧ್ಯಯನಕ್ಕೆ ಕೈಗೆತ್ತಿಕೊಳ್ಳಲಾಗಿದೆ. ಹಾಗೆ ಕೈಗೆತ್ತಿಕೊಂಡ ಮಾದರಿಗಳ ವಿವರಗಳನ್ನು GISAID ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ವೈರಸ್ ವಿವರ ಪಟ್ಟಿಯಲ್ಲಿ ಸೇರಿಸಲಾಗಿದೆ. “ಏಪ್ರಿಲ್ 2021 ರ ಅಂತ್ಯದ ವೇಳೆಗೆ ಈ ರೂಪಾಂತರಗಳನ್ನು ಗುರುತಿಸಿದಾಗಿನಿಂದ, ಬಿ .1.617.1 ಮತ್ತು ಬಿ .1.617.2 ರೂಪಾಂತರಿ ವೈರಸ್ ಗಂಟಲು ದ್ರವದ ಮಾದರಿಗಳಲ್ಲಿ ಸುಮಾರು 21% ಮತ್ತು 7% ನಷ್ಟಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಮತ್ತು B.1.617.1 ಮತ್ತು B.1.617.2 ರೂಪಾಂತರಿ ವೈರಸ್ಗಳು ಇತರೀ ರೂಪಾಂತರಿಗಳಿಗಿಂತ ಗಣನೀಯವಾದ ಹೆಚ್ಚಿನ ಪ್ರಮಾಣದ ಬೆಳವಣಿಗೆಯ ದರವನ್ನು ಹೊಂದಿವೆ ಅದ್ದರಿಂದ ಇದು ಸಂಭಾವ್ಯ ಹೆಚ್ಚಿದ ಪ್ರಸರಣ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ಹೇಳಿದೆ.
ಬೇರೆ ದೇಶಗಳ ವಿವರ ಹೀಗಿವೆ
ಇನ್ನೂ ವಿಶ್ವದ ಇತರೇ ದೇಶಗಳ ಬಗ್ಗೆ ಮಾತಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಬಹಳ ಕುತೂಹಲಕಾರಿ ವಿವರಗಳನ್ನು ನೀಡಿದೆ. ಕಳೆದ ಒಂದು ವಾರದಲ್ಲಿ ಹೊಸ ಕೊವಿಡ್-19 ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ 5.5 ದಶಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 90000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. “ಇಡೀ ಜಗತ್ತಿನಲ್ಲಿನ ಕೊರೊನಾ ಪ್ರಕರಣಗಳಲ್ಲಿ 50% ಭಾರತದಿಂದ ಬಂದಿವೆ ಮತ್ತು ಆದ ಸಾವುಗಳಲ್ಲಿ ಕೂಡ 30% ಭಾರತ ಕಾರಣವಾಗಿದೆ. ಆದ್ದರಿಂದ ಇದು ಆತಂಕಕ್ಕೆ ಕಾರಣವಾಗಿದೆ.” ಭಾರತದಿಂದ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ (2,738,957 ಹೊಸ ಪ್ರಕರಣಗಳು; 5% ಹೆಚ್ಚಳ), ಬ್ರೆಜಿಲ್ (423,438 ಹೊಸ ಪ್ರಕರಣಗಳು; ಹಿಂದಿನ ವಾರದಂತೆಯೇ), ಯುಎಸ್ಎ (334,784 ಹೊಸ ಪ್ರಕರಣಗಳು; 3% ಇಳಿಕೆ), ಟರ್ಕಿ (166,733 ಹೊಸ ಪ್ರಕರಣಗಳು; 35% ಇಳಿಕೆ), ಮತ್ತು ಅರ್ಜೆಂಟೀನಾ (140,771 ಹೊಸ ಪ್ರಕರಣಗಳು; 8% ಇಳಿಕೆ). ಆಗ್ನೇಯ ಏಷ್ಯಾ ಪ್ರದೇಶವು 2.8 ಮಿಲಿಯನ್ ಹೊಸ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಕೇವಲ 29,000 ಹೊಸ ಸಾವುಗಳು ಸಂಭವಿಸಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕ್ರಮವಾಗಿ ಹೊಸ ಪ್ರಕರಣಗಳಲ್ಲಿ 6% ವೃದ್ಧಿ ಮತ್ತು ಸಾವಿನ ಪ್ರಕರಣಗಳಲ್ಲಿ 15% ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಸತತ ಒಂಬತ್ತನೇ ವಾರದಲ್ಲಿ ಪ್ರಕರಣಗಳು ಮತ್ತು ಸಾವುಗಳು ಹೆಚ್ಚುತ್ತಿವೆ. ಭಾರತದಿಂದ ಅತಿ ಹೆಚ್ಚು ಹೊಸ ಸಾವುಗಳು ವರದಿಯಾಗಿವೆ (26,820 ಹೊಸ ಸಾವುಗಳು; ಅಂದರೆ 100 ಕೊರೊನಾ ಉಂಟಾದರೆ 1.9 ಹೊಸ ಸಾವುಗಳು ಸಂಭವಿಸುತ್ತಿವೆ. ಇದು ಹಿಂದಿನ ಸಂಖ್ಯೆಗೆ ಹೋಲಿಸಿದರೆ 15% ಹೆಚ್ಚಳ ಕಂಡಂತಾಗಿದೆ.), ಇಂಡೋನೇಷ್ಯಾ (1190 ಹೊಸ ಸಾವುಗಳು; 100,000 ಕ್ಕೆ 0.4 ಹೊಸ ಸಾವುಗಳು; 3% ಹೆಚ್ಚಳ), ಮತ್ತು ಬಾಂಗ್ಲಾದೇಶ (368 ಹೊಸದು) ಸಾವುಗಳು; 100,000 ಕ್ಕೆ 0.2 ಹೊಸ ಸಾವುಗಳು; 34% ಇಳಿಕೆ).
ಇದನ್ನೂ ಓದಿ:
WHO-China joint study: ಕೊರೊನಾ ಹುಟ್ಟಿದ್ದು ಲ್ಯಾಬ್ನಲ್ಲಿ ಅಲ್ಲ, ಪ್ರಾಣಿಯಿಂದ ಬಂದಿದ್ದು!