ನೂತನ ಅಮೆರಿಕ ಅಧ್ಯಕ್ಷ ಬೈಡನ್​​, ಉಪಾಧ್ಯಕ್ಷೆ ಹ್ಯಾರಿಸ್​ಗೆ ಅಭಿನಂದನೆಯ ಮಹಾಪೂರ

ಅಂತೂ ಇಂತೂ ಜಾಗತಿಕ ಮಟ್ಟದಲ್ಲಿ ಈ ವರ್ಷದ ಅತ್ಯಂತ ರೋಚಕ ಚುನಾವಣೆಯಾಗಿ ಮಾರ್ಪಟ್ಟಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಜೋ ಬೈಡನ್​ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಮೆರಿಕದ ಅತ್ಯಂತ ಕಿರಿಯ ಸೆನೆಟರ್​ ಎಂಬ ಖ್ಯಾತಿ ಪಡೆದಿದ್ದ ಬೈಡನ್​ ಇದೀಗ ಅತಿ ಹಿರಿಯ ಅಮೆರಿಕ ಅಧ್ಯಕ್ಷರಾಗಿ ಹೊಸ ದಾಖಲೆ ಬರೆದಿದ್ದಾರೆ. ಜೊತೆಗೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಸಹ ದೇಶದ ಪ್ರಪ್ರಥಮ ಮಹಿಳಾ ಉಪಾಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೋ ಬೈಡನ್​ ಹಾಗೂ ಕಮಲಾ ಹ್ಯಾರಿಸ್​ರ […]

ನೂತನ ಅಮೆರಿಕ ಅಧ್ಯಕ್ಷ ಬೈಡನ್​​, ಉಪಾಧ್ಯಕ್ಷೆ ಹ್ಯಾರಿಸ್​ಗೆ ಅಭಿನಂದನೆಯ ಮಹಾಪೂರ
Follow us
KUSHAL V
|

Updated on: Nov 08, 2020 | 12:51 PM

ಅಂತೂ ಇಂತೂ ಜಾಗತಿಕ ಮಟ್ಟದಲ್ಲಿ ಈ ವರ್ಷದ ಅತ್ಯಂತ ರೋಚಕ ಚುನಾವಣೆಯಾಗಿ ಮಾರ್ಪಟ್ಟಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಜೋ ಬೈಡನ್​ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಮೆರಿಕದ ಅತ್ಯಂತ ಕಿರಿಯ ಸೆನೆಟರ್​ ಎಂಬ ಖ್ಯಾತಿ ಪಡೆದಿದ್ದ ಬೈಡನ್​ ಇದೀಗ ಅತಿ ಹಿರಿಯ ಅಮೆರಿಕ ಅಧ್ಯಕ್ಷರಾಗಿ ಹೊಸ ದಾಖಲೆ ಬರೆದಿದ್ದಾರೆ. ಜೊತೆಗೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಸಹ ದೇಶದ ಪ್ರಪ್ರಥಮ ಮಹಿಳಾ ಉಪಾಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜೋ ಬೈಡನ್​ ಹಾಗೂ ಕಮಲಾ ಹ್ಯಾರಿಸ್​ರ ಗೆಲುವನ್ನು ಅಭಿನಂದಿಸಿ ಜಗತ್ತಿನೆಲ್ಲೆಡೆಯಿಂದ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ಟ್ವಿಟರ್​ ಮೂಲಕ ಬೈಡನ್​ ಹಾಗೂ ಹ್ಯಾರಿಸ್​ಗೆ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸಲು ಒಟ್ಟಿಗೆ ಶ್ರಮಿಸೋಣ ಎಂದು ಬೈಡನ್​ಗೆ ಅಭಿನಂದನೆ ಸಲ್ಲಿಸಿ ಟ್ವೀಟ್​ ಮಾಡಿದ್ದಾರೆ.

ಜೊತೆಗೆ, ಕಮಲ್​ ಹ್ಯಾರಿಸ್​ರನ್ನು ಸಹ ಅಭಿನಂದಿಸಿದ ಪ್ರಧಾನಿ ಮೋದಿ ನಿಮ್ಮ ಗೆಲುವು ಅಮೆರಿಕಾದಲ್ಲಿರುವ ಎಲ್ಲಾ ಭಾರತೀಯ ಸಂಜಾತರಿಗೆ ಹೆಮ್ಮೆ ತರುವಂಥ ವಿಷಯ ಎಂದು ಸಹ ಟ್ವೀಟ್​ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಕೆನಡಾದ ಪ್ರಧಾನಿ ಜಸ್ಟಿನ್​ ಟ್ರುಡೋ, ಇಂಗ್ಲೆಂಡ್​ನ ಪ್ರಧಾನ ಮಂತ್ರಿ ಬೋರಿಸ್​ ಜಾನ್ಸನ್​, ಫ್ರಾನ್ಸ್​ ಅಧ್ಯಕ್ಷ ಎಮಾನ್ಯುಯೆಲ್​ ಮ್ಯಾಕ್ರನ್​ ಸೇರಿದಂತೆ ವಿಶ್ವದ ಹಲವು ನಾಯಕರು ಬೈಡನ್​ ಹಾಗೂ ಕಮಲಾ ಹ್ಯಾರಿಸ್​ಗೆ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ.

ಸ್ವಾರಸ್ಯಕರ ಸಂಗತಿಯೆಂದರೆ, ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಸಹ ಬೈಡನ್​ರನ್ನು ಅಭಿನಂದಿಸಿ ಟ್ವೀಟ್​ ಮಾಡಿದ್ದಾರೆ. ಅಮೆರಿಕ ಜೊತೆಗಿನ ನಮ್ಮ ಸಂಬಂಧ ಹಾಗೂ ತಾಂತ್ರಿಕ ಸಹಯೋಗ ಮತ್ತಷ್ಟು ವೃದ್ಧಿಸಲಿದೆ ಎಂದು ಹೇಳಿದ್ದಾರೆ. ಡೊನಾಲ್ಡ್​ ಟ್ರಂಪ್ ಈ ಹಿಂದೆ, ತಮ್ಮ ಪ್ರತಿಸ್ಪರ್ಧಿಯಾಗಿದ್ದ ಜೋ ಬೈಡನ್​ ಹಾಗೂ ಅವರ ಪುತ್ರ ಹಂಟರ್​ರನ್ನು ಯುಕ್ರೇನ್​ನ ಭ್ರಷ್ಟಚಾರದ ಪ್ರಕರಣ ಒಂದರಲ್ಲಿ ಸಿಲುಕಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.