ಬ್ರಿಟನ್​​ನ ಉದ್ಯಾನವನದಲ್ಲಿ ಜಗತ್ತಿನ ಅತ್ಯಂತ ವಿಷಕಾರಿ ಸಸ್ಯ ಪತ್ತೆ

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಮನುಷ್ಯನನ್ನು ಕೊಲ್ಲಲು ತೆಗೆದುಕೊಳ್ಳುವ ವಿಷದ ಪ್ರಮಾಣವನ್ನು ಆಧರಿಸಿ, ವಿಶ್ವದ ಅತ್ಯಂತ ವಿಷಕಾರಿ ಸಾಮಾನ್ಯ ಸಸ್ಯವೆಂದರೆ ಕ್ಯಾಸ್ಟರ್ ಬೀನ್ (ರಿಸಿನಸ್ ಕಮ್ಯುನಿಸ್).

ಬ್ರಿಟನ್​​ನ ಉದ್ಯಾನವನದಲ್ಲಿ ಜಗತ್ತಿನ ಅತ್ಯಂತ ವಿಷಕಾರಿ ಸಸ್ಯ ಪತ್ತೆ
ಕ್ಯಾಸ್ಟರ್ ಆಯಿಲ್ ಪ್ಲಾಂಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 16, 2022 | 1:05 PM

ಮಹಿಳೆಯೊಬ್ಬರು  ಪಾರ್ಕ್​​ನಲ್ಲಿ ನಡೆಯುತ್ತಿದ್ದಾಗ ಅಲ್ಲಿ ಅತ್ಯಂತ ವಿಷಕಾರಿ ಸಸ್ಯಗಳಲ್ಲಿ ಒಂದಾದ ರಿಕಿನಸ್ ಕಮ್ಯುನಿಸ್ (Ricinus communis) ಕಂಡು ಗಾಬರಿಗೊಂಡರು ಎಂದು ವೇಲ್ಸನ್‌ಲೈನ್ ವರದಿ ಮಾಡಿದೆ. ಈ ಸಸ್ಯವನ್ನು ಸಾಮಾನ್ಯವಾಗಿ ಕ್ಯಾಸ್ಟರ್ ಆಯಿಲ್ ಪ್ಲಾಂಟ್ ಎಂದು ಕರೆಯಲಾಗುತ್ತದೆ, ಇದು ಸೈನೈಡ್‌ಗಿಂತ 6,000 ಪಟ್ಟು ಹೆಚ್ಚು ವಿಷಕಾರಿ ವಸ್ತುವನ್ನು ಹೊಂದಿರುತ್ತದೆ. ಮೀಡಿಯಾ ವೇಲ್ಸ್ ಪ್ರಕಾರ, ಕಾನ್ವಿ ಕೌನ್ಸಿಲ್ ಗ್ರೌಂಡ್‌ಕೀಪರ್‌ಗಳು ಈ ವಾರದ ಆರಂಭದಲ್ಲಿ ಕೊಲ್ವಿನ್ ಬೇ (Colwyn Bay)ಯಲ್ಲಿರುವ ಕ್ವೀನ್ ಗಾರ್ಡನ್ಸ್ ಪಾರ್ಕ್‌ನಲ್ಲಿ ಹೂವಿನ ಗಿಡಗಳನ್ನು ನೆಟ್ಟಿದ್ದರು. ಈ ಸಸ್ಯವು ಹೂವುಗಳು ಮತ್ತು ಪೊದೆಗಳ ನಡುವೆ ಇತ್ತು. ಕ್ಯಾಸ್ಟರ್ ಆಯಿಲ್ ಪ್ಲಾಂಟ್ ಎಂಬ ಈ ಸಸ್ಯ ರಿಸಿನ್ ಅನ್ನು ಒಳಗೊಂಡಿದೆ, ಇದು ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ಮತ್ತು ಜೈವಿಕ ಆಯುಧವೆಂದು ಪರಿಗಣಿಸಲ್ಪಟ್ಟ ನಿಷೇಧಿತ ವಸ್ತುವಾಗಿದೆ. ಸಸ್ಯವನ್ನು ಮುಟ್ಟುವಾಗ ಕೈಗವಸುಗಳನ್ನು ಬಳಸಬೇಕಾದರೂ, ಬೀಜಗಳು ಮತ್ತು ಒಣಗಿದ ಪುಷ್ಪಪಾತ್ರೆ ಸೇವಿಸಿದರೆ ಹೆಚ್ಚಿನ ಅಪಾಯವಿದೆ.ಕೇವಲ 1 ರಿಂದ 10 ಬೀಜಗಳನ್ನು ಸೇವಿಸಿದರೆ ಸಾವು ಸಂಭವಿಸಬಹುದು.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಮನುಷ್ಯನನ್ನು ಕೊಲ್ಲಲು ತೆಗೆದುಕೊಳ್ಳುವ ವಿಷದ ಪ್ರಮಾಣವನ್ನು ಆಧರಿಸಿ, ವಿಶ್ವದ ಅತ್ಯಂತ ವಿಷಕಾರಿ ಸಾಮಾನ್ಯ ಸಸ್ಯವೆಂದರೆ ಕ್ಯಾಸ್ಟರ್ ಬೀನ್ (ರಿಸಿನಸ್ ಕಮ್ಯುನಿಸ್). ಮೆರ್ಕ್ ಇಂಡೆಕ್ಸ್: ಆನ್ ಎನ್‌ಸೈಕ್ಲೋಪೀಡಿಯಾ ಆಫ್ ಕೆಮಿಕಲ್ಸ್, ಡ್ರಗ್ಸ್ ಮತ್ತು ಬಯೋಲಾಜಿಕಲ್ಸ್ (1997) ಪ್ರಕಾರ, 72 ಕೆಜಿ ತೂಕದ ವ್ಯಕ್ತಿಯನ್ನು ಕೊಲ್ಲಲು 70 ಮೈಕ್ರೋಗ್ರಾಂಗಳಷ್ಟು ವಿಷ ಸಾಕಾಗುತ್ತದೆ.

ಡೈಲಿ ಪೋಸ್ಟ್ ಪ್ರಕಾರ,  ಕೊಲ್ವಿನ್ ಬೇ ಮತ್ತು ಇತರೆಡೆಗಳಲ್ಲಿ ನೆಡಲಾದ ರಿಕಿನಸ್‌ ಗಿಡವನ್ನು ನಿರ್ವಹಿಸಲು ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಾನ್ವಿ ಕೌನ್ಸಿಲ್ ಹೇಳಿದೆ. “ನಾವು ಅನೇಕ ವರ್ಷಗಳಿಂದ ನಮ್ಮ ಹೂವಿನ ಪ್ರದರ್ಶನಗಳಲ್ಲಿ ಕ್ಯಾಸ್ಟರ್ ಆಯಿಲ್ (ರಿಸಿನ್ನಸ್ ಕಮ್ಯುನಿಸ್) ಸಸ್ಯಗಳನ್ನು ಬಳಸಿದ್ದೇವೆ ಮತ್ತು ಅವುಗಳನ್ನು ಸಾಮಾನ್ಯವಾಗಿ ಯುಕೆಯಾದ್ಯಂತ ಪ್ರದರ್ಶನಗಳಲ್ಲಿ ಬಳಸಲಾಗುತ್ತದೆ ಎಂದು ಅಲ್ಲಿನ ವಕ್ತಾರರು ಹೇಳಿದ್ದಾರೆ.

ಅನೇಕ ಅಲಂಕಾರಿಕ ಸಸ್ಯಗಳಂತೆ, ಬೀಜಗಳು ಮತ್ತು ಒಣಗಿದ ಪುಷ್ಪಪಾತ್ರೆ ಸೇವಿಸಿದರೆ ಅವು ವಿಷಕಾರಿಯಾಗಿರುತ್ತವೆ, ಸೀಡ್ ಹೆಡ್ ಆಗುವ ಮೊದಲು ನಾವು ಸಸ್ಯಗಳನ್ನು ತೆಗೆದುಹಾಕುತ್ತೇವೆ ಎಂದು ವಕ್ತಾರರು ಹೇಳಿದ್ದಾರೆ. ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿಯ ಪ್ರಕಾರ, ಇತರ ಅಲಂಕಾರಿಕ ಮತ್ತು ಹೂವುಗಳಾದ ಯೂಸ್, ಬ್ಲೂಬೆಲ್ಸ್ ಮತ್ತು ಡೆಲ್ಫಿನಿಯಮ್, ಡ್ಯಾಫಡಿಲ್ಸ್ ಕೂಡಾ ವಿಷಕಾರಿಯಾಗಿದೆ.

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ