AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramesha M

Ramesha M

Author - TV9 Kannada

ramesha.mahadevaiah@tv9.com
ಫೋಕ್ಸೋ ಕೇಸ್: ಬಿಎಸ್ ಯಡಿಯೂರಪ್ಪಗೆ ರಿಲೀಫ್ ನೀಡಿದ ಹೈಕೋರ್ಟ್​

ಫೋಕ್ಸೋ ಕೇಸ್: ಬಿಎಸ್ ಯಡಿಯೂರಪ್ಪಗೆ ರಿಲೀಫ್ ನೀಡಿದ ಹೈಕೋರ್ಟ್​

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತಮ್ಮ ಮೇಲಿರುವ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಪ್ರಕರಣದಲ್ಲಿ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗದಂತೆ ಷರತ್ತು ವಿಧಿಸಿದೆ. ಇದರಿಂದ ರಾಜ್ಯದಲ್ಲಿ ಸಂಚರಿಸುವುದಕ್ಕೆ ಅವಕಾಶ ಇಲ್ಲವಾಗಿದೆ ಎಂದು ಹೇಳಿದ್ದು, ಷರತ್ತು ಸಡಿಸಲಿಸಬೇಕು ಎಂದು ಕೋರಿದ್ದಾರೆ. ಇದೀಗ ಈ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಅಕ್ರಮ ಅದಿರು ಸಾಗಾಟದ ಎರಡು ಕೇಸ್​​ ಕೈಬಿಟ್ಟ ಕೋರ್ಟ್

ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಅಕ್ರಮ ಅದಿರು ಸಾಗಾಟದ ಎರಡು ಕೇಸ್​​ ಕೈಬಿಟ್ಟ ಕೋರ್ಟ್

ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಲೋಕಾಯುಕ್ತ ಎಸ್ಐಟಿ ದಾಖಲಿಸಿದ್ದ ಎರಡು ಪ್ರಕರಣಗಳಿಂದ ಅವರನ್ನು ಕೈಬಿಟ್ಟಿದೆ. ಸಿಆರ್​ಪಿಸಿ 227 ಅಡಿಯಲ್ಲಿ ಆರೋಪಿಗಳ ಮನವಿಯನ್ನು ಕೋರ್ಟ್ ಮಾನ್ಯ ಮಾಡಿದೆ.

ಐಟಿ ದಾಳಿ ಕೇಸ್: ಸಿಎಂ ನಿರೀಕ್ಷೆಯಲ್ಲಿರುವ ಡಿಕೆ ಶಿವಕುಮಾರ್​​​​ಗೆ ಕೋರ್ಟ್​​​ ಬಿಗ್ ರಿಲೀಫ್

ಐಟಿ ದಾಳಿ ಕೇಸ್: ಸಿಎಂ ನಿರೀಕ್ಷೆಯಲ್ಲಿರುವ ಡಿಕೆ ಶಿವಕುಮಾರ್​​​​ಗೆ ಕೋರ್ಟ್​​​ ಬಿಗ್ ರಿಲೀಫ್

ಉಪಮುಖ್ಯಮಂತ್ರಿಯಾಗಿದ್ದ ಡಿಕೆ ಶಿವಕುಮಾರ್ ಇದೀಗ ಮುಖ್ಯಮಂತ್ರಿಯಾಗುತ್ತಿದ್ದು, ಸಿಎಂ ಆಗಿ ಪ್ರಮಾಣವಚನಕ್ಕೆ ಸಕಲ ಸಿದ್ಧತೆಗಳು ನಡೆದಿವೆ.ಇದರೊಂದಿಗೆ ಅವರೇ ಹೇಳಿದಂತೆ ಸುರಿಸಿದ ಬೆವರಿಗೆ ಕೂಲಿ ಸಿಕ್ಕಿದ್ದು, ಫುಲ್ ಖುಷ್ ಆಗಿದ್ದಾರೆ. ಇದರ ಮಧ್ಯೆ ಇನ್ನೊಂದೆಡೆ ಐಟಿ ದಾಳಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್​​​ಗೆ ಬಿಗ್ ರಿಲೀಫ್ ಸಿಕ್ಕಿದೆ. ಕೋರ್ಟ್​ ವಿಧಿಸಿದ್ದ ಷರತ್ತು ಸಡಿಲಿಸಿದೆ.

ಗೃಹಲಕ್ಷ್ಮಿ ಹಣ ಬಾಕಿ: ಮಹಿಳೆಯರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಮಹತ್ವದ ಆದೇಶ

ಗೃಹಲಕ್ಷ್ಮಿ ಹಣ ಬಾಕಿ: ಮಹಿಳೆಯರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಮಹತ್ವದ ಆದೇಶ

ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ಮಹಿಳೆಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ತಾಂತ್ರಿಕ ಗೊಂದಲದಿಂದ ಫೆಬ್ರವರಿ-ಮಾರ್ಚ್ ತಿಂಗಳ ಕಂತುಗಳು ಬಾಕಿಯಿದ್ದು, ಕೂಡಲೇ ಪಾವತಿಸಲು ಅರ್ಜಿದಾರರು ಮನವಿ ಮಾಡಿದ್ದರು.

ಸಾರಿಗೆ ನೌಕರರಿಗೆ ಬಿಗ್​​ ಶಾಕ್​​: ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ಆದೇಶ

ಸಾರಿಗೆ ನೌಕರರಿಗೆ ಬಿಗ್​​ ಶಾಕ್​​: ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ಆದೇಶ

ನಾಳೆ (ಮೇ 20) ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ಸಂಘಟನೆಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಸರ್ಕಾರ ಮತ್ತು ನೌಕರರ ನಡುವೆ ಚರ್ಚೆ ನಡೆಯಲಿ, ಮುಷ್ಕರ ಬೇಡ ಎಂದು ಕೋರ್ಟ್ ಮಹತ್ವದ ಆದೇಶ ನೀಡಿದೆ. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್​ಗೆ ಕೆಲಸದ ಮಹಿಳೆ ಮತ್ತು ಕಟ್ಟಡ ಕಾರ್ಮಿಕ ಪಿಐಎಲ್ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿರುವ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: ಸುಲಭವಾಗಿ ಜಾಮೀನು ಪರಿಗಣಿಸಲಾಗದು ಎಂದ ಕೋರ್ಟ್

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: ಸುಲಭವಾಗಿ ಜಾಮೀನು ಪರಿಗಣಿಸಲಾಗದು ಎಂದ ಕೋರ್ಟ್

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ 7 ವರ್ಷ ಶಿಕ್ಷೆಗೆ ಗುರಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗರಿಕರ್, ಶಿಕ್ಷೆ ಪ್ರಶ್ನಿಸಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ವಿಭಾಗೀಯ ಪೀಠ, ಟಿಂಗರಿಕರ್ ವಿರುದ್ಧ ಗಂಭೀರ ಆರೋಪಗಳಿದ್ದು, ಸುಲಭವಾಗಿ ಜಾಮೀನು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿದೆ. ವಿಚಾರಣೆಯನ್ನು ಮುಂದೂಡಿದೆ.

ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ ಸ್ಥಾನ

ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ ಸ್ಥಾನ

2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶ ಗೊಂದಲ ಮಯವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಕಾನೂನು ಸಮರ ನಡೆಸಿದ್ದಾರೆ. ಈ ನಡುವೆ ಸುಪ್ರೀಂಕೋರ್ಟ್ ಕಾಂಗ್ರೆಸ್​​ನ ರಾಜೇಗೌಡಗೆ ಬಿಗ್ ರಿಲೀಫ್ ನೀಡಿದ್ದು, ಇದರಿಂದ ಅವರಿಗೆ ಮತ್ತೆ ಶಾಸಕ ಸ್ಥಾನ ದಕ್ಕಿದೆ. ಇನ್ನೊಂದೆಡೆ ಅಂಚೆ ಮತ ಮರು ಎಣಿಕೆ ವೇಳೆ ಗೆದ್ದಿದ್ದ ಬಿಜೆಪಿಯ ಜೀವರಾಜ್ ಗೆ ಮತ್ತೆ ಹಿನ್ನಡೆಯಾಗಿದೆ.

ಜಾತಿ ನಿಂದನೆ ಕೇಸ್: ಕರ್ನಾಟಕ ಬಿಜೆಪಿ ಎಂಎಲ್​​​​ಎಗೆ ಅರೆಸ್ಟ್ ವಾರೆಂಟ್, ಏನಿದು ಪ್ರಕರಣ?

ಜಾತಿ ನಿಂದನೆ ಕೇಸ್: ಕರ್ನಾಟಕ ಬಿಜೆಪಿ ಎಂಎಲ್​​​​ಎಗೆ ಅರೆಸ್ಟ್ ವಾರೆಂಟ್, ಏನಿದು ಪ್ರಕರಣ?

ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧದ ಜಾತಿ ನಿಂದನೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಈ ಪ್ರಕರಣ ಶಾಸಕರಿಗೆ ಸಂಕಷ್ಟ ತಂದೊಡ್ಡಿದ್ದು, ಬಂಧನ ಭೀತಿಯಲ್ಲಿದ್ದಾರೆ. ಹೌದು...ಶಾಸಕ ಬಿ.ಪಿ.ಹರೀಶ್ ಬಂಧನಕ್ಕೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಏನಿದು ಪ್ರಕರಣ ಎನ್ನುವ ಡಿಟೇಲ್ಸ್ ಇಲ್ಲಿದೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ: 1 ವಾರದಲ್ಲಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ

ದರ್ಶನ್ ಜಾಮೀನು ಅರ್ಜಿ ವಿಚಾರಣೆ: 1 ವಾರದಲ್ಲಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಗೆ ತಾರತಮ್ಯ ಆಗುತ್ತಿದೆ ಎಂದು ದರ್ಶನ್ ಆರೋಪಿಸಿದ್ದರು. ಸಹ-ಕೈದಿಗಳಿಂದ ನಿಂದನೆ ಮತ್ತು ಬೆದರಿಕೆ ಇದೆ ಎಂದು ಕೂಡ ಹೇಳಿದ್ದರು. ಸಾಕ್ಷಿಗಳ ವಿಚಾರಣೆ ವಿಳಂಬ ಆಗುತ್ತಿದೆ ಎಂದು ಅವರು ಕಷ್ಟ ಹೇಳಿಕೊಂಡಿದ್ದರು. ಆ ಬಗ್ಗೆ ಸುಪ್ರೀಂ ಕೋರ್ಟ್ ವರದಿ ಕೇಳಿದೆ.

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ನಿಂದನೆ: ಹಲವು ಕಷ್ಟ ಹೇಳಿಕೊಂಡ ದರ್ಶನ್

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ನಿಂದನೆ: ಹಲವು ಕಷ್ಟ ಹೇಳಿಕೊಂಡ ದರ್ಶನ್

ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ತಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ದೀರ್ಘಕಾಲದ ಜೈಲುವಾಸದಿಂದ ವೃತ್ತಿ ಜೀವನಕ್ಕೆ ತೊಂದರೆ ಆಗಿದೆ. ಸಾಕ್ಷಿಗಳ ವಿಚಾರಣೆ ವಿಳಂಬ ಆಗುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಉಗ್ರ ಟಿ. ನಾಸೀರ್ ಬಿಡುಗಡೆಗೆ ಸ್ಕೆಚ್: ತಪ್ಪೊಪ್ಪಿಕೊಂಡ ಆರೋಪಿ ಚೋಟಾ ಉಸ್ಮಾನ್​ಗೆ 7 ವರ್ಷ ಜೈಲು ಶಿಕ್ಷೆ

ಉಗ್ರ ಟಿ. ನಾಸೀರ್ ಬಿಡುಗಡೆಗೆ ಸ್ಕೆಚ್: ತಪ್ಪೊಪ್ಪಿಕೊಂಡ ಆರೋಪಿ ಚೋಟಾ ಉಸ್ಮಾನ್​ಗೆ 7 ವರ್ಷ ಜೈಲು ಶಿಕ್ಷೆ

ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಾಸೀರ್‌ನನ್ನು ಜೈಲಿನಿಂದ ಬಿಡಿಸಿಕೊಳ್ಳಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್‌ಗೆ ಎನ್ಐಎ ವಿಶೇಷ ನ್ಯಾಯಾಲಯ ಶನಿವಾರ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹರಿಯಾಣದಿಂದ ಗ್ರೆನೇಡ್ ತಂದು ಉಗ್ರವಾದಿ ಕೃತ್ಯಕ್ಕೆ ಸಂಚು ರೂಪಿಸಿದ್ದನ್ನು ಆರೋಪಿ ಒಪ್ಪಿಕೊಂಡಿದ್ದ.

ನೈಜ ಕ್ರೈಂಗೆ ಎಫ್‌ಐಆರ್ ಮಾಡಲ್ಲ, 2 ವರ್ಷಗಳ ಹಳೆಯ ಹಸು ನಾಪತ್ತೆ ಕೇಸ್‌ಗೆ ತರಾತುರಿ ಮಾಡ್ತೀರಾ? ಪೊಲೀಸರಿಗೆ ಹೈಕೋರ್ಟ್ ತರಾಟೆ

ನೈಜ ಕ್ರೈಂಗೆ ಎಫ್‌ಐಆರ್ ಮಾಡಲ್ಲ, 2 ವರ್ಷಗಳ ಹಳೆಯ ಹಸು ನಾಪತ್ತೆ ಕೇಸ್‌ಗೆ ತರಾತುರಿ ಮಾಡ್ತೀರಾ? ಪೊಲೀಸರಿಗೆ ಹೈಕೋರ್ಟ್ ತರಾಟೆ

ಕರ್ನಾಟಕ ಹೈಕೋರ್ಟ್, 2024ರ ಹಸು ನಾಪತ್ತೆ ಪ್ರಕರಣಕ್ಕೆ 2026ರಲ್ಲಿ FIR ದಾಖಲಿಸಿದ ಪೊಲೀಸರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗಂಭೀರ ಅಪರಾಧಗಳ ಎಫ್‌ಐಆರ್‌ಗೆ ಹಿಂಜರಿಯುವ ಪೊಲೀಸರು, ಇಂತಹ ಹಳೆಯ ಪ್ರಕರಣಗಳಲ್ಲಿ ವಿಳಂಬವಾಗಿ ದೂರು ದಾಖಲಿಸುವುದರ ಔಚಿತ್ಯ ಪ್ರಶ್ನಿಸಿದೆ. ನ್ಯಾಯಪೀಠವು ಆರೋಪಿಗಳ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿದೆ.