ಪುನೀತ್ ಒಡನಾಟ ನೆನೆದ ಮಲಯಾಳಂ ಹಿರಿಯ ನಟಿ
Puneeth Rajkumar: ಒಬ್ಬರಲ್ಲ ಒಬ್ಬರು, ಒಂದಲ್ಲ ಒಂದು ಕಡೆ ಪುನೀತ್ ಅವರನ್ನು ಅವರ ಸಿನಿಮಾಗಳನ್ನು, ಅವರು ಮಾಡಿದ ಸೇವೆಯನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹಳೆಯ ವಿಡಿಯೋಗಳು, ಚಿತ್ರಗಳು ಪದೇ ಪದೇ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮಲಯಾಳಂ ಚಿತ್ರರಂಗದ ಹಿರಿಯ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಊರ್ವಶಿ ಅವರು ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಪುನೀತ್ ರಾಜ್ಕುಮಾರ್ (Puneeth Rajkumar) ಅಗಲಿ ಐದು ವರ್ಷಗಳಾಗುತ್ತಾ ಬಂತು, ಆದರೆ ಅವರ ನೆನಪು ಮಾಸಿಲ್ಲ. ಬೀದಿ-ಬೀದಿಗಳಲ್ಲಿ ಅವರ ಫ್ಲೆಕ್ಸ್ಗಳು, ಫೋಟೊಗಳು ನೋಡಲು ಸಿಗುತ್ತವೆ. ಒಬ್ಬರಲ್ಲ ಒಬ್ಬರು, ಒಂದಲ್ಲ ಒಂದು ಕಡೆ ಪುನೀತ್ ಅವರನ್ನು ಅವರ ಸಿನಿಮಾಗಳನ್ನು, ಅವರು ಮಾಡಿದ ಸೇವೆಯನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹಳೆಯ ವಿಡಿಯೋಗಳು, ಚಿತ್ರಗಳು ಪದೇ ಪದೇ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮಲಯಾಳಂ ಚಿತ್ರರಂಗದ ಹಿರಿಯ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಊರ್ವಶಿ ಅವರು ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಊರ್ವಶಿ, ಮೂಲತಃ ಮಲಯಾಳಂ ನಟಿಯಾಗಿದ್ದರೂ ಸಹ ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಡಾ ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಇನ್ನೂ ಹಲವಾರು ಸ್ಟಾರ್ ನಟರುಗಳಿಗೆ ನಾಯಕಿಯಾಗಿ ನಟಿಸಿರುವ ಊರ್ವಶಿ ಅವರು ಹಲವಾರು ಸೂಪರ್ ಹಿಟ್ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ತಮಿಳಿನ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಊರ್ವಶಿ, ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡುತ್ತಾ, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದರು. ಈ ವೇಳೆ, ‘ನಾನು ತಮಿಳಿನಲ್ಲಿ ನಟಿಸಿದೆ ಆದರೆ ಅಲ್ಲಿ ದೊಡ್ಡ ಹಿಟ್ ಸಿಗಲಿಲ್ಲ, ಹಾಗೆಯೇ ಕನ್ನಡಕ್ಕೆ ಹೋದೆ ಅಲ್ಲಿ ಡಾ ರಾಜ್ಕುಮಾರ್ ಅವರ ಜೊತೆಗೆ ನಟಿಸಿದೆ ಆ ಸಿನಿಮಾ ದೊಡ್ಡ ಹಿಟ್ ಆಯ್ತು. ಆಗೆಲ್ಲ ಸೆಟ್ನಲ್ಲಿ ಅಪ್ಪು ಇರುತ್ತಿದ್ದ. ಚಿಕ್ಕ ಹುಡುಗ ಆತ, ನನಗೆ ಒಳ್ಳೆಯ ಫ್ರೆಂಡ್ ಆಗಿದ್ದ, ಪುನೀತ್ಗೆ ಆಗಿನ್ನೂ ಐದು ವರ್ಷ, ನನಗೆ ಹತ್ತು ವರ್ಷ. ಅವನೇ ನನಗೆ ಕನ್ನಡ ಹೇಳಿಕೊಡುತ್ತಿದ್ದಿದ್ದು ಪುನೀತ್, ‘ಅಕ್ಕ ಹೀಗೆ ಹೇಳು, ಹಾಗೆ ಹೇಳು’ ಎಂದು ಅವನೇ ಹೇಳಿಕೊಡುತ್ತಿದ್ದ. ಆಗ ಎಲ್ಲರೂ ಚೆನ್ನೈನಲ್ಲೆ ಇರುತ್ತಿದ್ದರು, ಪ್ರಸಾದ್ ಸ್ಟುಡಿಯೋನಲ್ಲಿ ಪದೇ ಪದೇ ಸಿಗುತ್ತಿದ್ದೆವು’ ಎಂದು ಊರ್ವಶಿ ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್ಕುಮಾರ್ ಜೀವನದ ಪಾಠ
ಊರ್ವಶಿ ಮಾತ್ರವಲ್ಲದೆ, ಮಲಯಾಳಂ ನಟಿ ಪಾರ್ವತಿ ಮೆನನ್ ಸಹ ಸಂದರ್ಶನವೊಂದರಲ್ಲಿ ತಮಗೆ ಕನ್ನಡ ಕಲಿಸಿಕೊಟ್ಟಿದ್ದು ಪುನೀತ್ ರಾಜ್ಕುಮಾರ್ ಎಂದು ಹೇಳಿದ್ದರು. ಅವರು ಬಹಳ ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲವರಾಗಿದ್ದಾರೆ. ಸುಲಲಿತವಾಗಿ ಅವರು ಕನ್ನಡ ಭಾಷೆ ಮಾತನಾಡಬಲ್ಲರು, ಅದಕ್ಕೆ ಪುನೀತ್ ಅವರೇ ಕಾರಣ ಎಂದು ಹೇಳಿದ್ದರು ಪಾರ್ವತಿ.
ಊರ್ವಶಿ ಅವರು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಶ್ರಾವಣ ಬಂತು’, ‘ನಾನು ನನ್ನ ಹೆಂಡ್ತಿ’, ‘ಹಬ್ಬ’, ‘ನ್ಯೂ ಡೆಲ್ಲಿ’, ‘ಈ ಜೀವ ನಿನಗಾಗಿ’, ಕನ್ನಡದ ಕಲ್ಟ್ ಕ್ಲಾಸಿಕ್ ‘ರಾಮ ಶಾಮ ಭಾಮ’, ‘ಕುರಿಗಳು ಸಾರ್ ಕುರಿಗಳು’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ ‘ರಾಜ್ ದಿ ಶೋಮ್ಯಾನ್’ ಸಿನಿಮಾದ ಹಾಡೊಂದರಲ್ಲಿ ಸಹ ಅವರು ಕಾಣಿಸಿಕೊಂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




