ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಭಾರತೀಯ..!
Bangladesh vs Australia: ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಟಿ20 ಸರಣಿ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಗಾಗಿ ಮಿಚೆಲ್ ಮಾರ್ಷ್ ನೇತೃತ್ವದ 16 ಸದಸ್ಯರುಗಳ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಭಾರತೀಯ ಮೂಲದ ಆಟಗಾರ ಕಾಣಿಸಿಕೊಂಡಿರುವುದು ವಿಶೇಷ.
- Zahir Yusuf
- Updated on: Jun 11, 2026
- 12:43 pm
200ರ ಸ್ಟ್ರೈಕ್ ರೇಟ್ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ!
India A vs Afghanistan A: ಶ್ರೀಲಂಕಾದಲ್ಲಿ ನಡೆಯುತ್ತಿರುವ ಎ ತಂಡಗಳ ನಡುವಣ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎ ಮತ್ತು ಅಫ್ಘಾನಿಸ್ತಾನ್ ಎ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ್ ತಂಡ ನಾಯಕ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
- Zahir Yusuf
- Updated on: Jun 11, 2026
- 11:04 am
ಒಲಿಂಪಿಕ್ಸ್ಗೆ ಕೊಹ್ಲಿಯನ್ನು ಆಯ್ಕೆ ಮಾಡಿ: ಮಾಜಿ ಆಟಗಾರನ ಸಲಹೆ!
Los Angeles Olympics 2028: ಲಾಸ್ ಏಂಜಲೀಸ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಕೂಡ ಆಡಲಾಗುತ್ತದೆ. ಇದಕ್ಕಾಗಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಖಚಿತಪಡಿಸಿದೆ. ಈ ಆರು ತಂಡಗಳಲ್ಲಿ ಟೀಮ್ ಇಂಡಿಯಾ ಕೂಡ ಕಾಣಿಸಿಕೊಳ್ಳಲಿದೆ.
- Zahir Yusuf
- Updated on: Jun 11, 2026
- 10:31 am
ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ
World Test Championship 2025-27: 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲು ಟೀಮ್ ಇಂಡಿಯಾಗೆ ಮುಂದಿನ 9 ಟೆಸ್ಟ್ ಪಂದ್ಯಗಳು ನಿರ್ಣಾಯಕ. ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳ ಮೂಲಕ ಭಾರತ ತಂಡವು ಹೇಗೆ ಫೈನಲ್ಗೆ ತಲುಪಬಹುದು ಎಂಬುದರ ಲೆಕ್ಕಾಚಾರ ಈ ಕೆಳಗಿನಂತಿದೆ.
- Zahir Yusuf
- Updated on: Jun 11, 2026
- 9:55 am
ಇಂದಿನಿಂದ ಫಿಫಾ ವಿಶ್ವಕಪ್ ಟೂರ್ನಿ ಆರಂಭ!
FIFA World Cup 2026: ಮೆಕ್ಸಿಕೋ ನಗರವು ಭಾರತಕ್ಕಿಂತ 11.5 ಗಂಟೆಗಳಷ್ಟು ಹಿಂದೆ ಇರುವುದರಿಂದ, ಅಲ್ಲಿ ಜೂನ್ 11 ರ ಮಧ್ಯಾಹ್ನ ನಡೆಯುವ ಉದ್ಘಾಟನಾ ಪಂದ್ಯವು ಭಾರತದಲ್ಲಿ ಶುಕ್ರವಾರ, ಜೂನ್ 12, 2026 ರ ಮುಂಜಾನೆ 12:30 ಕ್ಕೆ ನೇರಪ್ರಸಾರವಾಗುತ್ತದೆ. ಇದೇ ಕಾರಣಕ್ಕೆ ಭಾರತದ ವೇಳಾಪಟ್ಟಿಗಳಲ್ಲಿ ಜೂನ್ 12 ರ ದಿನಾಂಕ ಕಾಣಿಸಿಕೊಳ್ಳುತ್ತಿದೆ.
- Zahir Yusuf
- Updated on: Jun 11, 2026
- 8:56 am
MI ಮೀಟಿಂಗ್: ಹಾರ್ದಿಕ್ ಪಾಂಡ್ಯ ಭವಿಷ್ಯ ನಿರ್ಧಾರ!
Mumbai Indians: ಐಪಿಎಲ್ 2026ರ ಸೀಸನ್ ಮುಕ್ತಾಯದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿ 9ನೇ ಸ್ಥಾನಕ್ಕೆ ಕುಸಿದ ಮುಂಬೈ ಇಂಡಿಯನ್ಸ್ (MI) ತಂಡ, ಈಗ ತನ್ನ ಭವಿಷ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
- Zahir Yusuf
- Updated on: Jun 11, 2026
- 8:20 am
ರಿಚಾ ಘೋಷ್ ಸಿಡಿಲಬ್ಬರ: ಸ್ಟಂಪ್ ಔಟ್ನಿಂದ ಕೈತಪ್ಪಿದ ಗೆಲುವು!
Richa Ghosh: ಸ್ಟ್ರೈಕ್ಗೆ ಬಂದ ರಿಚಾ ಘೋಷ್ 2ನೇ ಎಸೆತದಲ್ಲಿ ಫೋರ್ ಬಾರಿಸಿದರು. ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಪರಿಣಾಮ ಕೊನೆಯ 3 ಎಸೆತಗಳಲ್ಲಿ ಕೇವಲ 6 ರನ್ ಮಾತ್ರ ಬೇಕಿತ್ತು. ಈ ಹಂತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್ ಬಾರಿಸಲು ಮುನ್ನುಗ್ಗಿ ಬಂದ ರಿಚಾ ಘೋಷ್ ಸ್ಟಂಪ್ ಔಟ್ ಆದರು.
- Zahir Yusuf
- Updated on: Jun 11, 2026
- 7:55 am
IPL ‘ತಿಂಗಳ’ ಬದಲಾವಣೆಗೆ ಭರ್ಜರಿ ಪ್ಲ್ಯಾನ್
Indian Premier League: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-21 ರಲ್ಲಿ ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಈ ಪ್ಲ್ಯಾನಿಂಗ್ನೊಂದಿಗೆ ಐಪಿಎಲ್ನಲ್ಲಿ ಕೆಲ ಬದಲಾವಣೆಯಾಗಲಿದೆ. ಅದರಲ್ಲಿ ಮುಖ್ಯ ಬದಲಾವಣೆ ಎಂದರೆ ಟೂರ್ನಿಯ ವಿಂಡೋ. ಅಂದರೆ ಐಪಿಎಲ್ ನಡೆಸುವ ತಿಂಗಳು ಬದಲಾಗಲಿದೆ.
- Zahir Yusuf
- Updated on: Jun 11, 2026
- 7:24 am
ವಿರಾಟ್ ಕೊಹ್ಲಿ ದಾಖಲೆ ಉಡೀಸ್: ರುತುರಾಜ್ ಗಾಯಕ್ವಾಡ್ ಹೊಸ ವಿಶ್ವ ದಾಖಲೆ
Ruturaj Gaikwad World Record: ಏಕದಿನ ಕ್ರಿಕೆಟ್‌ನಲ್ಲಿ ರುತುರಾಜ್ ಗಾಯಕ್ವಾಡ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 96 ಇನಿಂಗ್ಸ್ ಗಳ ಮೂಲಕ. ಅಂದರೆ ಈವರೆಗೆ 96 ಲಿಸ್ಟ್ ಎ ಇನಿಂಗ್ಸ್ ಆಡಿರುವ ರುತುರಾಜ್ ಗಾಯಕ್ವಾಡ್ ಅತ್ಯುತ್ತಮ ಸರಾಸರಿಯೊಂದಿಗೆ 5 ಸಾವಿರ ರನ್ ಪೂರೈಸಿದ್ದಾರೆ. ಈ ಐದು ಸಾವಿರ ರನ್ ಗಳೊಂದಿಗೆ ವರ್ಲ್ಡ್ ರೆಕಾರ್ಡ್ ಗೆ ಕೊರೊಳೊಡ್ಡಿದ್ದಾರೆ.
- Zahir Yusuf
- Updated on: Jun 10, 2026
- 2:51 pm
9 ಸ್ಟಾರ್ ಆಟಗಾರರು ಔಟ್: ಏಷ್ಯನ್ ಗೇಮ್ಸ್ಗೆ ಪಾಕಿಸ್ತಾನ್ ತಂಡ ಪ್ರಕಟ
Pakistan T20 Squad: ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನ (ಏಷ್ಯಾಡ್) ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 17 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಅಕ್ಟೋಬರ್ 3 ರಂದು ನಡೆಯಲಿದೆ. ಈ ಟೂರ್ನಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಯುವ ಪಡೆಯನ್ನು ಒಳಗೊಂಡ ಹೊಸ ತಂಡವನ್ನು ಪ್ರಕಟಿಸಿದೆ.
- Zahir Yusuf
- Updated on: Jun 10, 2026
- 1:05 pm
ಬ್ಯಾಟ್ ಲಾಕ್ ಮಾಡಿದ ಕೀಪರ್: ಟೀಮ್ ಇಂಡಿಯಾ ಆಟಗಾರ ರನೌಟ್!
Sri Lanka A vs India A: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 277 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 48.5 ಓವರ್ಗಳಲ್ಲಿ 269 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ಎ ತಂಡ 8 ರನ್ಗಳ ರೋಚಕ ಜಯ ಸಾಧಿಸಿದೆ.
- Zahir Yusuf
- Updated on: Jun 10, 2026
- 12:20 pm
ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು!
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಕೇವಲ ಒಬ್ಬರೇ ಒಬ್ಬರು ಭಾರತೀಯ ಮೂಲದ ಆಟಗಾರ ಆಡಿದ್ದಾರೆ. ಅವರೇ ವಿಕಾಶ್ ಧೋರಾಸೂ. 2006 ರ ವಿಶ್ವಕಪ್‌ನಲ್ಲಿ ಫ್ರಾನ್ಸ್ ಪರ ಆಂಧ್ರಪ್ರದೇಶ ಮೂಲದ ವಿಕಾಶ್ ಧೋರಾಸೂ ಕಣಕ್ಕಿಳಿದಿದ್ದರು. ಇದಾದ ಬಳಿಕ ಫಿಫಾ ವಿಶ್ವಕಪ್‌ನಲ್ಲಿ ಯಾವುದೇ ಭಾರತೀಯ ಮೂಲದ ಆಟಗಾರ ಕಾಣಿಸಿಕೊಂಡಿರಲಿಲ್ಲ. ಇದೀಗ ಬರೋಬ್ಬರಿ 20 ವರ್ಷಗಳ ಬಳಿಕ ವಿಶ್ವಕಪ್ ಅಂಗಳದಲ್ಲಿ ಭಾರತೀಯ ಮೂಲದ ನಾಲ್ವರು ಆಟಗಾರರು ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ.
- Zahir Yusuf
- Updated on: Jun 10, 2026
- 11:12 am