AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣದ ಸ್ಟಾರ್ ನಟನ ಜೊತೆ ಕೈ ಜೋಡಿಸಲಿದ್ದಾರೆ ‘ಧುರಂಧರ್’ ನಿರ್ದೇಶಕ

Aditya Dhar movie: ನಿರ್ದೇಶಕ ಆದಿತ್ಯ ಧರ್, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಮೂಲಕ ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಹೋಗಿ ಕೂತಿದ್ದಾರೆ. ಇದೀಗ ಅವರ ಮುಂದಿನ ಪ್ರಾಜೆಕ್ಟ್​​ಗಳ ಬಗ್ಗೆ ಸಿನಿಮಾ ಪ್ರಿಯರಿಗೆ ಅತೀವ ಕುತೂಹಲ ಮೂಡಿದೆ. ಕೆಲ ಸುದ್ದಿಗಳ ಪ್ರಕಾರ, ಆದಿತ್ಯ ಧರ್ ಅವರು ದಕ್ಷಿಣದ ಸ್ಟಾರ್ ನಟನ ಜೊತೆ ಕೈಜೋಡಿಸಲಿದ್ದಾರೆ.

ದಕ್ಷಿಣದ ಸ್ಟಾರ್ ನಟನ ಜೊತೆ ಕೈ ಜೋಡಿಸಲಿದ್ದಾರೆ ‘ಧುರಂಧರ್’ ನಿರ್ದೇಶಕ
Prabhas Aditya
ಮಂಜುನಾಥ ಸಿ.
|

Updated on: Jun 11, 2026 | 12:32 PM

Share

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಾಲಿವುಡ್​ನ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದು ಮಾತ್ರವಲ್ಲದೆ, ಸ್ಪೈ ಸಿನಿಮಾ ಹೇಗಿರಬೇಕು ಎಂಬುದಕ್ಕೆ ಹೊಸ ಹಾದಿಯನ್ನೇ ಹಾಕಿಕೊಟ್ಟಿದೆ. ನಿರ್ದೇಶಕ ಆದಿತ್ಯ ಧರ್, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಮೂಲಕ ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಹೋಗಿ ಕೂತಿದ್ದಾರೆ. ಇದೀಗ ಅವರ ಮುಂದಿನ ಪ್ರಾಜೆಕ್ಟ್​​ಗಳ ಬಗ್ಗೆ ಸಿನಿಮಾ ಪ್ರಿಯರಿಗೆ ಅತೀವ ಕುತೂಹಲ ಮೂಡಿದೆ. ಕೆಲ ಸುದ್ದಿಗಳ ಪ್ರಕಾರ, ಆದಿತ್ಯ ಧರ್ ಅವರು ದಕ್ಷಿಣದ ಸ್ಟಾರ್ ನಟನ ಜೊತೆ ಕೈಜೋಡಿಸಲಿದ್ದಾರೆ.

ಆದಿತ್ಯ ಧರ್ ಅವರು ತಮ್ಮ ಮುಂದಿನ ಸಿನಿಮಾ ಅನ್ನು ಸ್ಟಾರ್ ನಟ ಪ್ರಭಾಸ್ ಜೊತೆಗೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದಿತ್ಯ ಧರ್ ಅವರು ಅಶ್ವತ್ಥಾಮ ಹೆಸರಿನ ಸಿನಿಮಾ ಮಾಡುವುದಾಗಿ ‘ಧುರಂಧರ್’ ಸಿನಿಮಾಕ್ಕೆ ಮುಂಚೆಯೇ ಹೇಳಿದ್ದರು. ಆದರೆ ಬಜೆಟ್ ಹಾಗೂ ಇನ್ನಿತರೆ ಕಾರಣಗಳಿಗಾಗಿ ಆ ಸಿನಿಮಾ ಮುಂದೂಡಲಾಗಿತ್ತು. ಈಗ ‘ಧುರಂಧರ್’ ಸರಣಿಯ ದೊಡ್ಡ ಹಿಟ್ ಬಳಿಕ ಆದಿತ್ಯ ಧರ್ ಅವರಿಗೆ ಅಶ್ವತ್ಥಾಮ ಕುರಿತ ಸಿನಿಮಾವನ್ನು ತೆರೆಗೆ ತರುವ ಆತ್ಮವಿಶ್ವಾಸ ಮೂಡಿದ್ದು, ಅವರ ಮುಂದಿನ ಸಿನಿಮಾ ಅಶ್ವತ್ಥಾಮ ಕುರಿತಾದದ್ದೇ ಆಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಅಶ್ವತ್ಥಾಮ ಕುರಿತಾದ ಕತೆಗಾಗಿಯೇ ಪ್ರಭಾಸ್ ಅವರನ್ನು ಆದಿತ್ಯ ಧರ್ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ರಣ್ವೀರ್ ಸಿಂಗ್ ಜೊತೆಗೂ ಹೊಸದೊಂದು ಸಿನಿಮಾವನ್ನು ಆದಿತ್ಯ ಧರ್ ಮಾಡಲಿದ್ದು, ಆ ಸಿನಿಮಾದ ಬಳಿಕ ಪ್ರಭಾಸ್ ಜೊತೆಗಿನ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಪ್ರಭಾಸ್ ಸಹ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಕನಿಷ್ಟ ಎರಡು ವರ್ಷ ಅವರು ಹೊಸ ಸಿನಿಮಾ ಪ್ರಾರಂಭಿಸುವುದು ಬಹುತೇಕ ಸಾಧ್ಯವಿಲ್ಲ.

ಇದನ್ನೂ ಓದಿ:ಸಂಧಾನಕ್ಕೆ ಮುಂದಾಗಿದ್ದ ರಣ್ವೀರ್ ಸಿಂಗ್, ತಿರಸ್ಕರಿಸಿದ ಫರ್ಹಾನ್ ಅಖ್ತರ್

ಪ್ರಭಾಸ್ ಇದೀಗ ‘ಫೌಜಿ’ ಸಿನಿಮಾದ ಚಿತ್ರೀಕರಣ ಮುಗಿಸುತ್ತಿದ್ದಾರೆ. ಅದರ ಜೊತೆಗೆ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಅತ್ತ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಿದ್ದು, ಪ್ರಭಾಸ್ ಅವರು ಶೀಘ್ರವೇ ಆ ಸಿನಿಮಾದ ಶೂಟಿಂಗ್​​ನಲ್ಲಿ ಭಾಗಿ ಆಗಲಿದ್ದಾರೆ. ಇವುಗಳು ಮುಗಿದ ಬಳಿಕ ‘ಸಲಾರ್ 2’ ಸಿನಿಮಾ ಆರಂಭಿಸಲಿದ್ದಾರೆ. ಅದಾದ ಬಳಿಕವಷ್ಟೆ ಪ್ರಭಾಸ್ ಅವರು ಆದಿತ್ಯ ಧರ್ ಸಿನಿಮಾ ಪ್ರಾರಂಭಿಸಬೇಕಿದೆ. ಅಷ್ಟರಲ್ಲಿ ಆದಿತ್ಯ ಧರ್ ಅವರು ರಣ್ವೀರ್ ಸಿಂಗ್ ಜೊತೆಗೆ ಮತ್ತೊಂದು ಸಿನಿಮಾ ಮುಗಿಸಿ ಬರಲಿದ್ದಾರೆ.

ಆದಿತ್ಯ ಧರ್, ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಒಂದೊಮ್ಮೆ ಅವರು ಪ್ರಭಾಸ್ ಜೊತೆ ಕೈಜೋಡಿಸಿದರೆ ಖಂಡಿತ ಅದು ಭಾರತದ ಬಹು ನಿರೀಕ್ಷಿತ ಸಿನಿಮಾ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More